
ಕುಶಾಲನಗರ ಮೇ 6 NEWS DESK : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿಯಲ್ಲಿ ಕುಶಾಲನಗರ ರೋಟರಿ ವತಿಯಿಂದ ರೂ.20 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಘಟಕಕ್ಕೆ ರೋಟರಿ 3181 ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು, ಕಸ ವಿಲೇವಾರಿ ಜವಾಬ್ದಾರಿ ಬಹು ಮುಖ್ಯವಾಗಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಭುವನಗಿರಿ ಕಸ ವಿಲೇವಾರಿ ಘಟಕದ ಅಭಿವೃದ್ಧಿ ಗೆ ಪೂರಕವಾದ ಯೋಜನೆಗಳನ್ನು ಕೈಗೊಂಡು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಎಸ್.ಎಲ್.ಎನ್ ಸಂಸ್ಥೆಯ ಪ್ರಮುಖರಾದ ವೆಂಚಟಾಚಲಂ ಹಾಜರಿದ್ದು, ಯೋಜನೆ ಬಗ್ಗೆ ಮಾತಾನಾಡಿದರು. ಕುಶಾಲನಗರ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಸ್ವಚ್ಚ ಕುಶಾಲನಗರ ಅಭಿಯಾನಕ್ಕೆ ಎಸ್.ಎಲ್.ಎನ್ ನ ಸಿಎಸ್ಆರ್ ಫಂಡ್ ಮೂಲಕ 15 ಲಕ್ಷ ವೆಚ್ಚದಲ್ಲಿ ಯಂತ್ರವನ್ನು ಕೊಡುಗೆ ನೀಡಲಾಗಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಗೊಬ್ಬರವಾಗಿಸುವ ಯೋಜನೆ ಇದಾಗಿದೆ ಎಂದು ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿದರು. ಈ ಸಂದರ್ಭ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಕಾರ್ಯದರ್ಶಿ ಮಂಜುನಾಥ್ ಹೆಚ್.ಪಿ, ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ಹಿರಿಯ ಸದಸ್ಯ ಎಸ್.ಕೆ.ಸತೀಶ್, ಡಾ.ಹರಿ. ಎ. ಶೆಟ್ಟಿ, ಎಂ.ಡಿ.ರಂಗಸ್ವಾಮಿ, ಶೋಭಾ ಸತೀಶ್, ಸಜಿ, ರುದ್ರೇಶ್ ಪಟೇಲ್, ನವೀನ್ ಪಿ.ಆರ್, ಅರುಣ್, ಜೇಕಬ್, ಶರ್ಲಿ, ರಾಣಿ ಉಲ್ಲಾಸ್, ಸಿ.ಬಿ. ಹರೀಶ್, ಪ್ರೇಮಚಂದ್ರನ್, ಕ್ರಿಜ್ಬಲ್ ಕೋಟ್ಸ್, ಮಹೇಶ್ ನಲ್ವಡೆ, ಕೂಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಐ. ಎನ್. ಟಿ.ಸಿ. ಘಟಕದ ಅಧ್ಯಕ್ಷ ಅಣ್ಣಯ್ಯ, ಪುರಸಭೆ ಕಂದಾಯಾಧಿಕಾರಿ ರಾಮು ಮತ್ತಿತರರು ಇದ್ದರು.









