
ವಿರಾಜಪೇಟೆ ಮೇ 16 NEWS DESK : ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳ ಗ್ರಾಮ ದೇವತೆಗಳಾಗಿ ನೆಲೆನಿಂತ ಶ್ರೀ ಭದ್ರಕಾಳಿಯ ಬೋಡ್ ನಮ್ಮೆ ಆರಂಭಗೊಂಡಿದೆ. ಐಮಂಗಲ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಆವರಣದಲ್ಲಿ ಮೂರು ಗ್ರಾಮಗಳ ದೇವತಕ್ಕರು, ಗ್ರಾಮಗಳ ಅಧ್ಯಕ್ಷರುಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಕೊಟ್ಟಿಯಂಡ ಜೀವನ್ ಅವರು ಕಟ್ಟು ವಿಧಿ ಅನುಸರಿಸುವ ವಿಧಾನಗಳು ದೇವ ನೆಲೆಯಲ್ಲಿ ಓದಿ ತಿಳಿಸುವ ಮೂಲಕ ಬೋಡ್ ನಮ್ಮೆಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಕೊಟ್ಟಿಯಂಡ ಜೀವನ್ ಅವರು ಐಮಂಗಲ ಗ್ರಾಮದಲ್ಲಿ ಹಿರಿಯ ಅಕ್ಕ ಎರಡನೇಯವರು ವೈಪಡ ಗ್ರಾಮದಲ್ಲಿ ಕೊನೆ ತಂಗಿಯಾಗಿ ಮಗ್ಗುಲ ಗ್ರಾಮದಲ್ಲಿ ಶ್ರೀ ಭದ್ರಕಾಳಿಯಾಗಿ ನೆಲೆ ನಿಂತಿದ್ದಾರೆ, ಎರಡು ವರ್ಷಗಳಿಗೊಮ್ಮೆ ಮೂರು ಗ್ರಾಮಗಳು ಸೇರಿ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದರು. ಮೇ 16, 17, 18 ರಂದು ಮೂರು ದಿನಗಳ ಕಾಲ ಸಂಜೆ ವೇಳೆಯಲ್ಲಿ 1101 ಸುತ್ತು ಪೀಲಿ ಆಟ್ ಮತ್ತು ತಾಲಿಪಾಟ್ ಕಾರ್ಯಕ್ರಮ ನಡೆಯುತ್ತದೆ. ತಾ.19 ರಂದು ಪಟ್ಟಣಿ ಮತ್ತು ಸಂಜೆ 7 ರ ನಂತರ ಮೂರು ಗ್ರಾಮಗಳ ದೇವತೆಗಳನ್ನು ದೇಗುಲಕ್ಕೆ ಕರೆತರಲಾಗುತ್ತದೆ ಬಳಿಕ ರಾತ್ರಿ 11 ರ ಸಮಯದಲ್ಲಿ ಕಳಿ ( ವಿವಿಧ ವೇಷಭೂಷಣ ) ಧಾರಿಗಳು ಮನೆ ಮನೆಗೆ ತೆರಳುವುದು ಮರುದಿನದ ಮಧ್ಯಾಹ್ನದ ವರೆಗೆ ನಡೆಯಲಿದೆ. ಮೇ 20 ರಂದು ಸಂಜೆ 4 ಗಂಟೆಯ ವೇಳೆಗೆ ವಿವಿಧ ವೇಷಾಧಾರಿಗಳು ಹರಿಕೆಯೊಂದಿಗೆ ದೇವಾಲಯಕ್ಕೆ ಆಗಮನವಾಗಿ ಹರಿಕೆ ಸಮರ್ಪಿಸುವುದು, ಮಾಹಾಪೂಜೆ ನಡೆಯಲಿದೆ. ಮೇ 21 ರಂದು ಬೆಳಿಗ್ಗೆ 11 ಗಂಟೆಗೆ ಕುದುರೆ ಕಟ್ಟುವುದು, ಮದ್ಯಾಹ್ನ 2 ಗಂಟೆಗೆ ಮೂರು ಗ್ರಾಮಗಳಿಂದ ಹೊರಟ ಕುದುರೆಗಳು ಮಗ್ಗುಲ ಗ್ರಾಮದ ಮಾಚೆಟ್ಟಿಪಾರೆ ಎಂಬಲ್ಲಿ ಕುದುರೆಆಟ್ ನಡೆಯುತ್ತದೆ. ಬಳಿಕ ಸಂಜೆ ದೇಗುಲಕ್ಕೆ ಆಗಮನವಾಗುತ್ತದೆ. ದೇವಿಗೆ ವಿಶೇಷ ಪೂಜೆ ನಡೆದು ರಾತ್ರಿ ಭದ್ರಕಾಳಿ ತೆರೆ ಹಾಗೂ ಮೇಲೇರಿ ನಡೆಯುತ್ತದೆ.ನಂತರ ಮಧ್ಯರಾತ್ರಿ ತೆರೆಯು ದೇವಾಲಯಕ್ಕೆ ಆಗಮನವಾಗುತ್ತದೆ. ಮೇ 22 ರಂದು ಮಧ್ಯಾಹ್ನ ಕುಂದನೂ ಚೂಳೆ ಹೊರಟು ಸಂಜೆ ದೇವಾಲಯ ಪ್ರವೇಶವಾಗುತ್ತದೆ ತಾ.23 ರಂದು ಕಳ ಮಡ್‍ಕ್ಕ್ ನಡೆಯಲಿದೆ. ಎಂದು ಊರು ಹಬ್ಬದ ಬಗ್ಗೆ ಮಾಹಿತಿ ನೀಡಿದರು. ಮೂರು ದೇವಲಯಗಳಲ್ಲಿ ನಡೆಯುವ ಬೋಡ್ ನಮ್ಮೆಗೆ ನಾಡಿನ ಸಮಸ್ತ ಭಕ್ತರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಐಮಂಗಲ ಗ್ರಾಮದ ದೇವತಕ್ಕರಾದ ಬೊಳ್ಳಚಂಡ ತಮ್ಮಯ್ಯ, ವೈಪಡ ಗ್ರಾಮದ ದೇವತಕ್ಕರಾದ ಪುಲಿಯಂಡ ನವೀನ್ ಮತ್ತು ಶ್ರೀ ಭದ್ರಕಾಳಿ ಸೇವಾ ಸಮಿತಿ ಐಮಂಗಲ ದೇವಲಾಯದ ಅದ್ಯಕ್ಷರಾದ ಬೊಳ್ಳಚಂಡ ಪ್ರಕಾಶ್ ಉಪದ್ಯಕ್ಷರಾದ ಬೊಳ್ಳಚಂಡ ಸೋಮಣ್ಣ ಕಾರ್ಯದರ್ಶಿ ಮೇಕತಂಡ ಟೀಶ ಬೋಪಯ್ಯ, ,ವಾಟೇರಿರ ಶಂಕರಿ ಪೂವಯ್ಯ, ವಾಟೇರಿರ ಕುಟ್ಟಪ್ಪ, ಪುಲಿಯಂಡ ಜಿಮ್ಮಿ, ಚೋಕಂಡ ರಮೇಶ್, ಕಿರಣ್ ಕುಮಾರ್, ಸೇರಿದಂತೆ ಮೂರು ಗ್ರಾಮಗಳ ಹಬ್ಬ ಆಚರಿಸುವ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









