Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಭಿನಯ ನೃತ್ಯ ಕೇಂದ್ರದ ನೂತನ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಕಾರ್ಯಕ್ರಮ*
  • *ಮೇ 19 ಮತ್ತು 20 ರಂದು ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮತಾಂತರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ : ಜಿಲ್ಲಾಧಿಕಾರಿ, ಎಸ್ಪಿಗೆ ಹೇರೂರು ಗ್ರಾಮಸ್ಥರಿಂದ ಮನವಿ* 
  • *ಪ್ರತಿಭೆ ಪ್ರದರ್ಶನಕ್ಕೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿ : ರೆ.ಫಾ.ಜೇಮ್ಸ್ ಡೊಮಿನಿಕ್*
  • *ಕಿರಗಂದೂರು : ಮಕ್ಕಳಗುಡಿ ಬೆಟ್ಟ ಅಭಿವೃದ್ಧಿಗೆ ಒತ್ತು : ಶಾಸಕ ಡಾ.ಮಂತರ್ ಗೌಡ*
  • *ಆರು ಪತ್ರಕರ್ತರಿಗೆ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ*
  • *ಮಡಿಕೇರಿಯಲ್ಲಿ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ : ಗಮನ ಸೆಳೆದ ಪ್ರಾಚೀನ ನಾಣ್ಯಗಳ ಪ್ರದರ್ಶನ*
  • *ಕೊಡಗು : ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ : ರಿವರ್ ರ‍್ಯಾಫ್ಟ್ ಫಿಟ್‌ನೆಸ್ ಪ್ರಮಾಣ ಪತ್ರ ಕಡ್ಡಾಯ : ಎಡಿಸಿ ಡಾ.ಸಹನಾ ಎಸ್.ಹಾದಿಮನಿ ಸೂಚನೆ*
  • *ಆನೆಗಳ ಸ್ನಾನ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ : ಸಚಿವ ಈಶ್ವರ ಖಂಡ್ರೆ ಸೂಚನೆ*
  • *ಗೌರವ ಧನ ಮತ್ತು ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ : ಮಡಿಕೇರಿಯಲ್ಲಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪ್ರತಿಭೆ ಪ್ರದರ್ಶನಕ್ಕೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿ : ರೆ.ಫಾ.ಜೇಮ್ಸ್ ಡೊಮಿನಿಕ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಪ್ರತಿಭೆ ಪ್ರದರ್ಶನಕ್ಕೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿ : ರೆ.ಫಾ.ಜೇಮ್ಸ್ ಡೊಮಿನಿಕ್*

ಮೇ 18, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link


ವಿರಾಜಪೇಟೆ ಮೇ 18 NEWS DESK : ಪ್ರತಿಭಾ ಪ್ರದರ್ಶನಕ್ಕೆ ಕ್ರೀಡಾಕೂಟಗಳು ವೇದಿಕೆಗಳಾಗಿವೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ.ಫಾ.ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ಮಹಿಳಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಕ್ರಿಶ್ಚಿಯನ್ ಕಪ್ ಸೀಸನ್ 1 ಪ್ರಯುಕ್ತ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಗೆ ಶುಭಹಾರೈಸಿ ಅವರು, ಮಾತನಾಡಿದರು. ನಮ್ಮ ಧರ್ಮ ಕೇಂದ್ರದ ವತಿಯಿಂದ ಪ್ರಪ್ರಥಮ ಬಾರಿಗೆ ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯನ್ನು ಮಹಿಳೆಯರೇ ಆಯೋಜಿಸಿದ್ದು ಗಮನಾರ್ಹವಾಗಿದೆ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸಲು ಇಂತಹ ಕ್ರೀಡಾಕೂಟಗಳ ಅಗತ್ಯವಿದೆ ಎಂದು ಹೇಳಿದರು. ಅಮ್ಮತ್ತಿಯ ಸಂತ ಅಂತೋಣಿ ಚರ್ಚ್ ನ ಗುರುಗಳು ಹಾಗೂ ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ರೆ.ಫಾ.ಮದಲೈ ಮುತ್ತು ಅವರು ಮಾತನಾಡಿ, ಇಂದು ಸಮಾಜದಲ್ಲಿ ಅನೇಕ ಕ್ಲಬ್ ಗಳನ್ನು ಕಾಣುತ್ತಿದ್ದೇವೆ. ಮಹಿಳೆಯರೇ ಒಂದು ಕ್ಲಬ್ ನ್ನು ರಚಿಸಿ ಮೊದಲ ಬಾರಿಗೆ ಮಹಿಳಾ ಕ್ರೀಡಾಕೂಟವನ್ನು ಇಂದು ಇಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಈ ಮಹಿಳಾ ಕ್ಲಬ್ ಮತ್ತಷ್ಟು ಕಾರ್ಯಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಿ ಎಂದು ಶುಭ ಕೋರಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ಮಾಳೆಟೀರ ತೃಪ್ತಿ ಬೋಪಣ್ಣ ಮಾತನಾಡಿ, ಮಹಿಳೆಯರು ಇಂದು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗದೆ ಸಮಾಜದ ವಿವಿಧ ರಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾಳೆ. ಕ್ರೀಡಾ ಕ್ಷೇತ್ರದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು, ಗಮನಾರ್ಹವಾಗಿದೆ ಎಂದರು. ಮಹಿಳೆಯರು ಯಶಸ್ವಿಯಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮರಿಯಾ ಸಿಕ್ವೇರಾ ಅವರು, ಮಹಿಳಾ ಸ್ಪೋರ್ಟ್ಸ್ ಕ್ಲಬ್ ನ್ನು ಉದ್ಘಾಟಿಸಿ, ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು. ಕಾಂಗ್ರೆಸ್ ಸೇವಾದಳದ ರಾಜ್ಯ ಜಂಟಿ ಕಾರ್ಯದರ್ಶಿ ತೆರೆಸಾ ವಿಕ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮರಿಯಾ ಸಿಕ್ವೇರಾ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಮಹಿಳಾ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷೆ ಲೀಲಾ ಮ್ಯಾಥ್ಯೂ, ಉಪಾಧ್ಯಕ್ಷೆ ಅನಿತಾ ಶಾಮ್, ಸಂತ ಅನ್ನಮ್ಮ ಶಾಲೆಯ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ರೋಸಿ ಡೈಸಾ, ಸಿಸ್ಟರ್ ವಂದನಾ ಲೋಬೋ, ಶಿನಿ ಲೇಡೀಸ್ ಸ್ಪೋರ್ಟ್ ಕ್ಲಬ್ ಸದಸ್ಯರುಗಳು, ಧರ್ಮ ಕೇಂದ್ರದವರು, ಆಟಗಾರರು ಉಪಸ್ಥಿತರಿದ್ದರು. ಶಿಕ್ಷಕಿ ಸುನೀತಾ ಲೋಬೋ ನಿರೂಪಿಸಿ, ಮಿಲನ ಜೇಮ್ಸ್ ಸ್ವಾಗತಿಸಿ, ಶೈನಿ ಕೆ ಆರ್ ವಂದಿಸಿದರು. ಜಿಲ್ಲಾ ಮಟ್ಟದ ಥ್ರೋ ಬಾಲ್ ಕ್ರೀಡಾಕೂಟದಲ್ಲಿ ವಿರಾಜಪೇಟೆ,ಸಿದ್ದಾಪುರ, ಮಡಿಕೇರಿ ಹಾಗೂ ಪೊನ್ನಂಪೇಟೆ ಧರ್ಮಕೇಂದ್ರದ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯಾಟದಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಧರ್ಮಕೇಂದ್ರದ ತಂಡವು ಜಯಗಳಿಸಿ ಪ್ರಥಮ ಸ್ಥಾನ ಪಡೆಯಿತು. ಸಿದ್ದಾಪುರ ಧರ್ಮಕೇಂದ್ರದ ಲಕ್ಕಿ ಲೇಡೀಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಮಡಿಕೇರಿಯ ಸಂತ ಮೈಕಲರ ಧರ್ಮಕೇಂದ್ರದ ಮಿಶಾಲ್ ಲೋಪೆಸ್ ರವರು ಪಡೆದುಕೊಂಡರು. ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ರವರು ಹಾಗೂ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 4th ಸಬ್ ಜೂನಿಯರ್ ಸಿಸ್ಟೋಬಾಲ್ ವಿಜೇತ ತಂಡದ ಕೋಚ್ ಹಾಗೂ ಕುಶಾಲನಗರ ಫಾತಿಮಾ ಶಾಲೆಯ ದೈಹಿಕ ಶಿಕ್ಷಕರಾದ ಜಾನ್ ಸನ್ ರವರು ವಿಜೇತ ತಂಡಗಳಿಗೆ ಟ್ರೋಫಿ, ವೈಯುಕ್ತಿಕ ಬಹುಮಾನಗಳನ್ನು ವಿತರಿಸಿದರು. ವಿಜೇತ ತಂಡಕ್ಕೆ ಐದು ಸಾವಿರ ರೂ ನಗದು ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ಮೂರು ಸಾವಿರ ರೂ ನಗದು ಹಾಗೂ ಟ್ರೋಫಿ ಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಿಸ್ಟೋಬಾಲ್ ಕೋಚ್ ಜಾನ್ ಸನ್ ರವರನ್ನು ಸನ್ಮಾನಿಸಲಾಯಿತು. ಸಂತ ಅನ್ನಮ್ಮ ಧರ್ಮ ಕೇಂದ್ರದ ಲೇಡೀಸ್ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಭಿನಯ ನೃತ್ಯ ಕೇಂದ್ರದ ನೂತನ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಕಾರ್ಯಕ್ರಮ*

ಮೇ 18, 2026

*ಮೇ 19 ಮತ್ತು 20 ರಂದು ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 18, 2026

*ಮತಾಂತರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ : ಜಿಲ್ಲಾಧಿಕಾರಿ, ಎಸ್ಪಿಗೆ ಹೇರೂರು ಗ್ರಾಮಸ್ಥರಿಂದ ಮನವಿ* 

ಮೇ 18, 2026

*ಮೇ 19 ಮತ್ತು 20 ರಂದು ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 18 NEWS DESK : ವಿರಾಜಪೇಟೆ 66/33/11 ಕೆ.ವಿ.ವಿದ್ಯುತ್ ವಿತರಣಾ ಉಪ ಕೇಂದ್ರ ಮಗ್ಗುಲದಲ್ಲಿ ಮೇ, 19…

*ಮತಾಂತರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ : ಜಿಲ್ಲಾಧಿಕಾರಿ, ಎಸ್ಪಿಗೆ ಹೇರೂರು ಗ್ರಾಮಸ್ಥರಿಂದ ಮನವಿ* 

ಮೇ 18, 2026

*ಪ್ರತಿಭೆ ಪ್ರದರ್ಶನಕ್ಕೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿ : ರೆ.ಫಾ.ಜೇಮ್ಸ್ ಡೊಮಿನಿಕ್*

ಮೇ 18, 2026

*ಕಿರಗಂದೂರು : ಮಕ್ಕಳಗುಡಿ ಬೆಟ್ಟ ಅಭಿವೃದ್ಧಿಗೆ ಒತ್ತು : ಶಾಸಕ ಡಾ.ಮಂತರ್ ಗೌಡ*

ಮೇ 18, 2026

*ಆರು ಪತ್ರಕರ್ತರಿಗೆ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ*

ಮೇ 18, 2026

*ಮಡಿಕೇರಿಯಲ್ಲಿ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ : ಗಮನ ಸೆಳೆದ ಪ್ರಾಚೀನ ನಾಣ್ಯಗಳ ಪ್ರದರ್ಶನ*

ಮೇ 18, 2026

*ಕೊಡಗು : ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ : ರಿವರ್ ರ‍್ಯಾಫ್ಟ್ ಫಿಟ್‌ನೆಸ್ ಪ್ರಮಾಣ ಪತ್ರ ಕಡ್ಡಾಯ : ಎಡಿಸಿ ಡಾ.ಸಹನಾ ಎಸ್.ಹಾದಿಮನಿ ಸೂಚನೆ*

ಮೇ 18, 2026

*ಆನೆಗಳ ಸ್ನಾನ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ : ಸಚಿವ ಈಶ್ವರ ಖಂಡ್ರೆ ಸೂಚನೆ*

ಮೇ 18, 2026

*ಗೌರವ ಧನ ಮತ್ತು ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ : ಮಡಿಕೇರಿಯಲ್ಲಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ*

ಮೇ 18, 2026

*ಮತದಾರರ ಪಟ್ಟಿಯಿಂದ ಅಕ್ರಮ ವಲಸಿಗ ನುಸುಳುಕೋರರನ್ನು ಕೈಬಿಡಲು ಸಿಎನ್‌ಸಿ ಆಗ್ರಹ : ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಕೆ*

ಮೇ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.