Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕ್ರಿಯೇಟಿವ್‍ನಲ್ಲಿ ಸ್ಫೂರ್ತಿ ಮಾತು-15 ಸರಣಿ ಕಾರ್ಯಕ್ರಮ : ಓದು ಭಾವನಾತ್ಮಕವಾದಾಗ ಅದು ಸಾರ್ಥಕತೆಯನ್ನು ಪಡೆಯುತ್ತದೆ : ವಾಗ್ಮಿ ಕೆ.ರಾಜೇಂದ್ರ ಭಟ್*
  • *ಬಿಳುಗುಂದ : ಪಿ.ಎಸ್.ಭವ್ಯಗೆ ಸನ್ಮಾನ*
  • *ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಗೈಡ್ಸ್ ವಿದ್ಯಾರ್ಥಿನಿ ದಿಶಾಗೆ ರಾಜ್ಯ ಪುರಸ್ಕಾರ* 
  • *ಮತಾಂತರ ಪ್ರಕರಣ : ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ್ನು ಗುರಿ ಮಾಡದಂತೆ ಮನವಿ*
  • *ಜಾಗ ಮಾರಾಟ ಮಾಡಲು ಅಥವಾ ಅರಣ್ಯ ಇಲಾಖೆಗೆ ಒಪ್ಪಿಸಲು ಸಿದ್ಧ : ಆಧ್ಯಾತ್ಮ ಗುರು ಶ್ರೀ ಎಂ ಸ್ಪಷ್ಟನೆ*
  • *ನೀಟ್ ಪರೀಕ್ಷೆ ಹಗರಣ : ಕೇಂದ್ರ ಸರಕಾರದ ಬೇಜವಾಬ್ದಾರಿತನ ಕಾರಣ : ಕೊಡಗು ಕಾಂಗ್ರೆಸ್ ಆರೋಪ*
  • *ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಜಾಗ ಹಸ್ತಾಂತರಿಸಲು ಕೊಡವಾಮೆರ ಕೊಂಡಾಟ ಒತ್ತಾಯ*
  • *ಮರಗಳ ಹನನ ಮತ್ತು ಪರಿಸರಕ್ಕೆ ಹಾನಿ : ಅರಣ್ಯ, ಗಣಿ ಇಲಾಖೆಗೆ ಮುತ್ತಿಗೆ ಹಾಕುವ ಎಚ್ಚರಿಕೆ*
  • *ಕೊಡಗು ಜಿಲ್ಲಾ ಡೆಕೋರೇಶನ್ ಅಸೋಸಿಯೇಷನ್ ಅಸ್ತಿತ್ವಕ್ಕೆ*
  • *ಸಿಎನ್‌ಸಿ ರಾಷ್ಟ್ರೀಯ ವಿಚಾರ ಸಂಕಿರಣ : ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವ ಅಗತ್ಯವಿದೆ : ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಪ್ರತಿಪಾದನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಿಎನ್‌ಸಿ ರಾಷ್ಟ್ರೀಯ ವಿಚಾರ ಸಂಕಿರಣ : ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವ ಅಗತ್ಯವಿದೆ : ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಪ್ರತಿಪಾದನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಿಎನ್‌ಸಿ ರಾಷ್ಟ್ರೀಯ ವಿಚಾರ ಸಂಕಿರಣ : ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವ ಅಗತ್ಯವಿದೆ : ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಪ್ರತಿಪಾದನೆ*

ಜೂನ್ 26, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜೂ.26 : ಭಾರತದ ಬಹುತ್ವವನ್ನು ಕಾಪಾಡಿಕೊಳ್ಳಲು ಕೊಡವರ ವಿಶಿಷ್ಟ ಗುರುತನ್ನು ರಕ್ಷಿಸುವುದು ಅತ್ಯಗತ್ಯ. ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವ ಅಗತ್ಯವಿದೆ. ಇದು ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ಒಂದು ಕಾನೂನುಬದ್ಧ ಬೇಡಿಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಅವರು ಪ್ರತಿಪಾದಿಸಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ “ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ  ಕಾನೂನು” ವಿಷಯದ ಕುರಿತು ಶುಕ್ರವಾರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ “ಕೊಡವ ಧಾರ್ಮಿಕ ಆಚರಣೆ, ‘ಕೋವಿ-ತೋಕ್” ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ” ಕುರಿತು ವಿಷಯ ಮಂಡಿಸಿದ ವಿಕ್ರಮ್ ಹೆಗ್ಡೆ ಅವರು ಕೊಡಗನ್ನು ವ್ಯವಸ್ಥಿತವಾಗಿ ದೊಡ್ಡ ಕ್ಷೇತ್ರಗಳೊಂದಿಗೆ ವಿಲೀನಗೊಳಿಸಲಾಗಿದೆ. ಮುಂಬರುವ ಕ್ಷೇತ್ರ ಪುನರ್ವಿಂಗಡಣೆಯ ಸಂದರ್ಭ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ಕಲ್ಪಿಸುವುದಕ್ಕೆ ಪೂರಕವಾಗಿ ಚುನಾವಣಾ ಆಯೋಗಕ್ಕೆ ದತ್ತಾಂಶ ಆಧಾರಿತ, ವಸ್ತುನಿಷ್ಠ ವಾದಗಳನ್ನು ಮಂಡಿಸಬೇಕಾಗುತ್ತದೆ ಎಂದರು. ಹಿಂದೆ ತನ್ನದೇ ಆದ 24 ಸದಸ್ಯರ ವಿಧಾನಸಭೆಯನ್ನು ಹೊಂದಿದ್ದ ಸ್ವತಂತ್ರ ಪಾರ್ಟ್-ಸಿ ರಾಜ್ಯವಾಗಿದ್ದ ಕೊಡಗನ್ನು ದೊಡ್ಡ ಕ್ಷೇತ್ರಗಳಲ್ಲಿ ವಿಲೀನಗೊಳಿಸಲಾಗಿದೆ. ಪ್ರಸ್ತುತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ, ಕೊಡಗಿನ ಮತದಾರರಿಗಿಂತ ಮೈಸೂರು ಮತದಾರರು 3:1 ರ ಅನುಪಾತದಲ್ಲಿ ಹೆಚ್ಚಾಗಿದ್ದಾರೆ, ಇದು ಸ್ವತಂತ್ರ ರಾಜಕೀಯ ಪ್ರಾತಿನಿಧ್ಯವನ್ನು ಕೊಡಗಿಗೆ ಅಸಾಧ್ಯವಾಗಿಸಿದೆ ಎಂದು ಅಭಿಪ್ರಾಯಪಟ್ಟರು. ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ಕಲ್ಪಿಸುವುದಕ್ಕೆ ಸಂಬoಧಿಸಿದoತಗೆ ಮೈಸೂರಿನ ಬಯಲು ಸೀಮೆ ಮತ್ತು ಕೊಡಗಿನ ಸೂಕ್ಷ್ಮ, ಪರ್ವತಮಯ ಪಶ್ಚಿಮಘಟ್ಟಗಳ ಭೂಪ್ರದೇಶದ ಪ್ರತ್ಯೇಕವಾದ ಭೂ ಪರಿಸರದ ಚಿತ್ರಣದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಇರೊಂದಿಗೆ ಇಲ್ಲಿನ ವಿಶಿಷ್ಟವಾದ ಜಮ್ಮಾ, ಸಾಗು ಮತ್ತು ಬಾಣೆ ಭೂ ಹಿಡುವಳಿಗಳು ಮತ್ತು ಜಿಲ್ಲೆಯ ತೋಟಗಾರಿಕೆ ಆಧಾರಿತ ಆರ್ಥಿಕತೆಯನ್ನು ದಾಖಲಿಸಬೇಕಾಗುತ್ತದೆ. ಇವೆಲ್ಲವುಗಳೊಂದಿಗೆ ಎಲ್ಲಾ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಲ್ಲಿ ಅಧಿಕೃತ ನಿರ್ಣಯಗಳನ್ನು ಅಂಗೀಕರಿಸುವoತಾಗಬೇಕು ಎಂದು ವಿಕ್ರಮ್ ಹೆಗ್ಡೆ ಸಲಹೆ ನೀಡಿದರು. ಕೊಡವ ಸಾಂಪ್ರದಾಯಿಕ “ಕೋವಿ ಹಕ್ಕು” ಕೊಡವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಗತ್ಯವನ್ನು ವಿಶ್ಲೇಷಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯವು 1959 ರ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 41ರ ಅಡಿಯಲ್ಲಿ ವಿನಾಯಿತಿಯನ್ನು ಎತ್ತಿ ಹಿಡಿದಿದೆ. “ಕೋವಿ ಹಕ್ಕಿ”ಗೆ ಖಾಯಂ ಸಾಂವಿಧಾನಿಕ ರಕ್ಷಣೆಯ ಅಗತ್ಯತೆ ಇದೆ. ಸರಕಾರಿ ಅಧಿಸೂಚನೆಗಳು ಬದಲಾಗಬಹುದಾದ್ದರಿಂದ, ಈ ಹಕ್ಕನ್ನು ವಿಧಿ 25 ರ (ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು) ಅಡಿಯಲ್ಲಿ “ಅತ್ಯಗತ್ಯ ಧಾರ್ಮಿಕ ಆಚರಣೆ” ಎಂದು ಶಾಶ್ವತವಾಗಿ ಸುರಕ್ಷಿತಗೊಳಿಸಬೇಕು ಎಂದರು. ಜನನ, ಮರಣ, ಕೈಲ್ ಪೋವ್ದ್, ಪುತ್ತರಿಯಂತಹ ಕೊಡವ ಸಾಂಪ್ರದಾಯಿಕ ಆಚರಣೆಗಳು ಬಂದೂಕುಗಳಿಲ್ಲದೆ ಸಂಪೂರ್ಣವಾಗುವುದಿಲ್ಲ. ಕೊಡವರ “ಕೋವಿ ಹಕ್ಕು” ಸಿಖ್ಖರು ಧರಿಸುವ ಕೃಪಾನ್ ಸ್ಥಾನಮಾನಕ್ಕೆ ಹೊಂದಿಕೆಯಾಗುತ್ತದೆ. ‘ಕೋವಿ-ಹಕ್ಕು” ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಗೆ ಸೇರ್ಪಡೆಯಾಗಬೇಕು ಎಂದು ತಿಳಿಸಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಿಮಾ ಲಾರೆನ್ಸ್ ವಿಕ್ರಮ್ ಹೆಗ್ಡೆ ಅವರು “ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಕಾನೂನಿನಡಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ ಮತ್ತು ಅದಿಮ ಸಂಜಾತ ಕೊಡವ ಜನಾಂಗೀಯ ಗುರುತು” ವಿಷಯದ ಕುರಿತು ಮಾತನಾಡಿದರು. ತನ್ನದೇ ಆದ ವಿಶಿಷ್ಟ ಭಾಷೆ, ಆಚರಣೆಗಳು, ವಂಶಾವಳಿ ಮತ್ತು ಪವಿತ್ರ ಸ್ಥಳಗಳನ್ನು ಹೊಂದಿರುವ ಸಣ್ಣ ಸಮುದಾಯವನ್ನು ರಾಷ್ಟç ಹೇಗೆ ನಡೆಸಿಕೊಳ್ಳಬೇಕು ಎನ್ನುವುದಕ್ಕೆ ಸಾಂವಿಧಾನಿಕ ಉತ್ತರವೆಂದರೆ, “ನೀವು ತುಂಬಾ ಚಿಕ್ಕವರಾಗಿದ್ದೀರಿ ಎಂದು ಹೇಳುವುದಲ್ಲ, ಬದಲಿಗೆ, ನೀವು ವಿಶಿಷ್ಟರಾಗಿರುವುದರಿಂದ ನಿಮ್ಮ ಧ್ವನಿಯನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದರು. ಕೊಡವ ಭೂಮಿ, ಜಮ್ಮಾ ಹಿಡುವಳಿ, ದೇವರ ಕಾಡುಗಳು, ಕೃಷಿ, ಕಾಫಿ ಬೆಳೆ ಪ್ರಕೃತಿಯೊಂದಿಗೆ, ಕೊಡವ ಸಂಸ್ಕೃತಿಯೊoದಿಗೆ ಬೆಸೆದುಕೊಂಡಿದೆ. ಅಭಿವೃದ್ಧಿಯನ್ನು ಕೇವಲ ರೆಸಾರ್ಟ್ಗಳು ಮತ್ತು ಕಾಂಕ್ರಿಟ್ ಕಟ್ಟಡಗಳಿಂದ ಅಳೆಯಲು ಸಾಧ್ಯವಿಲ್ಲ, ಬದಲಿಗೆ ಪರಿಸರ ಮತ್ತು ಸಂಸ್ಕೃತಿಯ ಉಳಿವಿನೊಂದಿಗೆ ಅಳೆಯಬೇಕು. ಕೊಡವ ಭಾಷೆಯು ಔಪಚಾರಿಕ ಹೆಮ್ಮೆಯನ್ನು ಮೀರಿ ಶಿಕ್ಷಣ, ಡಿಜಿಟಲ್ ಸಂರಕ್ಷಣೆ ಮತ್ತು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದಾಗ ಮಾತ್ರ ಬದುಕುಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವಕೀಲ ಕೆ.ಪಿ.ಬಾಲಸುಬ್ರಹ್ಮಣ್ಯ ಅವರು, ಕೊಡವರು ಅತ್ಯಂತ ಅಪರೂಪದ ಜನಾಂಗವಾಗಿದ್ದು, ಅವರನ್ನು ಸಂವಿಧಾನದ ಅಡಿಯಲ್ಲಿ ರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದರು. ಕೊಡವ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿಯ 36 ವರ್ಷಗಳ ಶಾಂತಿಯುತ ಹೋರಾಟ ಹಾಗೂ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಅಚಲ ಬದ್ಧತೆ ಶ್ಲಾಘನೀಯವಾಗಿದೆ. ಇವರ ಹೋರಾಟವನ್ನು ಕೊಡವರು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರಿಗಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವನ್ನು ಸಾಧಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ಕಳೆದ 36 ವರ್ಷಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಈ ಹೋರಾಟವು, ಅತೀ ಸಣ್ಣ ಹಾಗೂ ಸೂಕ್ಷ್ಮ ಸಮುದಾಯವಾದ ಕೊಡವರಿಗೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಸಾಂವಿಧಾನಿಕ ರಕ್ಷಣೆಯನ್ನು ನೀಡುವವರೆಗೆ ಮುಂದುವರೆಯಲಿದೆ ಎಂದು ತಿಳಿಸಿದರು. ಕೊಡವರ “ಕೋವಿ”ಗೆ 1949 ರಲ್ಲಿ ಸರ್ದಾರ್ ಪಟೇಲರು ನೀಡಿದ ಸಂಸದೀಯ ಮನ್ನಣೆ. ಶಾಸ್ತ್ರೀಯ “ಕೊಡವ” ಗುರುತನ್ನು ಮರುಸ್ಥಾಪಿಸಿದ 2021 ಡಿ.8 ರ ಕರ್ನಾಟಕ ಹೈಕೋರ್ಟ್ನ ತೀರ್ಪು, ಶಸ್ತ್ರಾಸ್ತ್ರ ಕಾಯ್ದೆ 2029 ರ ಅವಧಿ ಮುಗಿದ ನಂತರವೂ “ಕೋವಿ-ತೋಕ್” ಗೆ ಶಾಶ್ವತ ವಿನಾಯಿತಿ ನೀಡುವುದು, ಪರಕೀಯ ರಾಜರು ಮತ್ತು ಬ್ರಿಟಿಷರು ವಶಪಡಿಸಿಕೊಂಡ ವಂಶಪಾರoಪರ್ಯ ಜಮ್ಮಾಬಾಣೆ ಭೂಮಿಯ ಮರುಸ್ಥಾಪನೆ. ಅಂತರಾಷ್ಟಿçÃಯ ಕಾನೂನಿನಡಿ ಕಂದಾಯ ರೈತರು ಮತ್ತು ಆದಿಮ ಸಂಜಾತ ಜನಾಂಗೀಯ ರೈತರ ನಡುವಿನ ವ್ಯತ್ಯಾಸ ಗುರುತಿಸಿಸುವಿಕೆ. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಅಮೂರ್ತ ಕ್ಷೇತ್ರದ ಮಾದರಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲು, ಮುಂಬರುವ 2027 ರ ಭಾರತದ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವ ಜನಾಂಗಕ್ಕೆ ಪ್ರತ್ಯೇಕ “ಕೋಡ್” ಮತ್ತು “ಕಾಲಂ” ನೀಡುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು. ಈ ವಿಚಾರ ಸಂಕಿರಣ ಕೊಡವರ ವಿಶೇಷ ಸ್ಥಾನಮಾನಕ್ಕಾಗಿ ದೀರ್ಘಕಾಲದ ಆಕಾಂಕ್ಷೆಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಪ್ರಸ್ತುತ ಸಂದರ್ಭದಲ್ಲಿ ಸಾಂವಿಧಾನಿಕ ಗಂಭೀರತೆಯನ್ನು ಪ್ರತಿಬಿಂಬಿಸಿದೆ ಎಂದರು. ವಿಚಾರಸoಕಿರಣದ ಸಂದರ್ಭ ಮೂಲನಿವಾಸಿ ಹಾಗೂ ಪ್ರಕೃತಿ ಆರಾಧಕ ಕೊಡವ ಜನಾಂಗಕ್ಕಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸುವ ಕುರಿತು ಎನ್.ಯು.ನಾಚಪ್ಪ ಅವರು ಮಂಡಿಸಿದ ನಿರ್ಣಯವನ್ನು ಸಭೆಯಲ್ಲಿದ್ದವರು ಸರ್ವಾನುಮತದಿಂದ ಅಂಗೀಕರಿಸಿದರು. ಕಾರ್ಯಕ್ರಮದಲ್ಲಿ ನಂದೇಟಿರ ಕವಿತಾ ಸುಬ್ಬಯ್ಯ, ಪುಲ್ಲೇರ ಸ್ವಾತಿ ಕಾಳಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಟ್ಟಮಾಡ ಲಲಿತಾ ಗಣಪತಿ, ಅಪ್ಪಾರಂಡ ನಂದಿನಿ ನಂಜಪ್ಪ, ಅಜ್ಜಿನಿಕಂಡ ಗಾನ ಮಾಚಯ್ಯ, ನಂದಿನೆರವoಡ ನಿಶಾ ಅಚ್ಚಯ್ಯ, ನಂದಿನೆರವoಡ ಸುಮಿತ್ರಾ ದಿನೇಶ್, ಅಚ್ಚಕಾಳೇರ ಸವಿತಾ ಮೊಣ್ಣಪ್ಪ, ಅಮ್ಮಯ್ಯಂಡ ಮೈನಾ, ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ, ನಂದೇಟಿರ ರವಿ ಸುಬ್ಬಯ್ಯ, ಪುಳ್ಳಂಗಡ ನಟೇಶ್, ಜಮ್ಮಡ ಮೋಹನ್, ಮಂದಪoಡ ಮನೋಜ್ ಮಂದಣ್ಣ, ಅರೆಯದ ಗಿರೀಶ್, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಪುಲ್ಲೇರ ಕಾಳಪ್ಪ, ಡಾ.ಚೌರೀರ ಜಗತ್ ತಿಮ್ಮಯ್ಯ, ನಿವೃತ್ತ ಐಎಎಸ್ ಅಧಿಕಾರಿ ಅವರೆಮಾದಂಡ ಮೊಣ್ಣಪ್ಪ, ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ನಂದಿನೆರವoಡ ದಿನೇಶ್, ಕುಕ್ಕೇರ ಜಯ ಚಿಣ್ಣಪ್ಪ, ಚೋಳಪಂಡ ನಾಣಯ್ಯ, ನಂದಿನೆರವoಡ ವಿಜು, ಮೇದುರ ಕಂಠಿ ನಾಣಿಯಪ್ಪ, ನಂದಿನೆರವoಡ ಅಯ್ಯಣ್ಣ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಪಾಲೆಕಂಡ ಪ್ರಧಾನ್ ಪೂಣಚ್ಚ, ಅಚ್ಚಕಾಳೇರ ನವೀನ್ ಮೊನ್ನಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ಮಾಚಯ್ಯ, ಚಂಬoಡ ಜನಥ್ ಕುಮಾರ್, ಮಂಡೆಡ ಪ್ರದೀಪ್, ದೇಯಂಡ ಪ್ರಕಾಶ್, ಪುಲ್ಲೇರ ಬೋಪಯ್ಯ, ಕೊಟ್ಟ್ ಕತ್ತಿರ ಗೌತಮ್ ಪೊನ್ನಣ್ಣ, ಕೇಕಡ ಜೋಯಪ್ಪ, ಚಂಗoಡ ಚಾಮಿ ಪಳಂಗಪ್ಪ, ಮೆಕತ್ತಂಡ ಪ್ರವಿ ಪೂಣಚ್ಚ, ಕುಟ್ಟಂಡ ಸೋಮಣ್ಣ, ಅಚ್ಚಕಾಳೇರ ನವೀನ ಮೊಣ್ಣಪ್ಪ, ಮಣವಟ್ಟಿರ ಸ್ವರೂಪ್ ಪೂವಯ್ಯ, ಮಣವಟ್ಟಿರ ನಂದ ಭೀಮಯ್ಯ, ನಂದಿನೆರವoಡ ಅಚ್ಚಯ್ಯ, ಪೊರಿಮಂಡ ಧ್ಯಾನ್ ಪೊನ್ನಣ್ಣ, ಬದಲೆರ ಕೌಶಿಕ್ ಬೊಳ್ಳಿಯಪ್ಪ, ಐತಿಚಂಡ ಪೂವಣ್ಣ, ಚೆಯ್ಯಂಡ ಸತ್ಯ, ಅಪ್ಪಾರಂಡ ಪ್ರಕಾಶ್, ಪುಡಿಯೊಕ್ಕಡ ಪ್ರಥ್ವಿ ಬೋಪಣ್ಣ, ಪಟ್ಟಮಾಡ ಪ್ರಥ್ವಿ, ಬಲ್ಲಟಿಕಾಳಂಡ ರಾಯ್ ಮಂದಣ್ಣ, ಬಲ್ಲಚಂಡ ಸುನಿಲ್ ಬಿದ್ದಪ್ಪ, ಕಡೆಮಡ ವಿನ್ಸಿ ಅಪ್ಪಯ್ಯ, ಬಿದ್ದಾಟಂಡ ಪವನ್ ಮುತ್ತಪ್ಪ, ಅವರೆಮಾದಂಡ ಚಂಗಪ್ಪ, ಬಡುವಂಡ ವಿಜಯ, ಕುಲ್ಲೇಟಿರ ಬೇಬ ಅರುಣ್, ಮಣವಟ್ಟಿರ ಸೋಮೇಶ್, ಕುಂಡ್ಯೋಳoಡ ದಿನೇಶ್ ಕಾರ್ಯಪ್ಪ, ಮುಕ್ಕಾಟಿರ ಕಿಟ್ಟು, ಕೊಣಿಯಂಡ ಸಂಜು ಸೋಮಯ್ಯ, ತೋಳಂಡ ಸೋಮಯ್ಯ, ಕೆಚಟ್ಟಿರಾ ಶಂಬು ಅಯ್ಯಪ್ಪ, ಕಾಟಿಮಾಡ ಕಾರ್ಯಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹಾಗೂ ಕೊಟ್ಟುಕತ್ತಿರ ಜಗತ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕ್ರಿಯೇಟಿವ್‍ನಲ್ಲಿ ಸ್ಫೂರ್ತಿ ಮಾತು-15 ಸರಣಿ ಕಾರ್ಯಕ್ರಮ : ಓದು ಭಾವನಾತ್ಮಕವಾದಾಗ ಅದು ಸಾರ್ಥಕತೆಯನ್ನು ಪಡೆಯುತ್ತದೆ : ವಾಗ್ಮಿ ಕೆ.ರಾಜೇಂದ್ರ ಭಟ್*

ಜೂನ್ 26, 2026

*ಬಿಳುಗುಂದ : ಪಿ.ಎಸ್.ಭವ್ಯಗೆ ಸನ್ಮಾನ*

ಜೂನ್ 26, 2026

*ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಗೈಡ್ಸ್ ವಿದ್ಯಾರ್ಥಿನಿ ದಿಶಾಗೆ ರಾಜ್ಯ ಪುರಸ್ಕಾರ* 

ಜೂನ್ 26, 2026

*ಬಿಳುಗುಂದ : ಪಿ.ಎಸ್.ಭವ್ಯಗೆ ಸನ್ಮಾನ*

ಜೂನ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಜೂ.26 NEWS DESK : ಬಿಳುಗುಂದ ಸರಕಾರಿ ಪ್ರೌಢಶಾಲೆಯಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 2025-26ನೇ ಸಾಲಿನ…

*ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಗೈಡ್ಸ್ ವಿದ್ಯಾರ್ಥಿನಿ ದಿಶಾಗೆ ರಾಜ್ಯ ಪುರಸ್ಕಾರ* 

ಜೂನ್ 26, 2026

*ಮತಾಂತರ ಪ್ರಕರಣ : ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ್ನು ಗುರಿ ಮಾಡದಂತೆ ಮನವಿ*

ಜೂನ್ 26, 2026

*ಜಾಗ ಮಾರಾಟ ಮಾಡಲು ಅಥವಾ ಅರಣ್ಯ ಇಲಾಖೆಗೆ ಒಪ್ಪಿಸಲು ಸಿದ್ಧ : ಆಧ್ಯಾತ್ಮ ಗುರು ಶ್ರೀ ಎಂ ಸ್ಪಷ್ಟನೆ*

ಜೂನ್ 26, 2026

*ನೀಟ್ ಪರೀಕ್ಷೆ ಹಗರಣ : ಕೇಂದ್ರ ಸರಕಾರದ ಬೇಜವಾಬ್ದಾರಿತನ ಕಾರಣ : ಕೊಡಗು ಕಾಂಗ್ರೆಸ್ ಆರೋಪ*

ಜೂನ್ 26, 2026

*ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಜಾಗ ಹಸ್ತಾಂತರಿಸಲು ಕೊಡವಾಮೆರ ಕೊಂಡಾಟ ಒತ್ತಾಯ*

ಜೂನ್ 26, 2026

*ಮರಗಳ ಹನನ ಮತ್ತು ಪರಿಸರಕ್ಕೆ ಹಾನಿ : ಅರಣ್ಯ, ಗಣಿ ಇಲಾಖೆಗೆ ಮುತ್ತಿಗೆ ಹಾಕುವ ಎಚ್ಚರಿಕೆ*

ಜೂನ್ 26, 2026

*ಕೊಡಗು ಜಿಲ್ಲಾ ಡೆಕೋರೇಶನ್ ಅಸೋಸಿಯೇಷನ್ ಅಸ್ತಿತ್ವಕ್ಕೆ*

ಜೂನ್ 26, 2026

*ಸಿಎನ್‌ಸಿ ರಾಷ್ಟ್ರೀಯ ವಿಚಾರ ಸಂಕಿರಣ : ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವ ಅಗತ್ಯವಿದೆ : ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಪ್ರತಿಪಾದನೆ*

ಜೂನ್ 26, 2026

*ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಕೊಡಗು ಜಿಲ್ಲಾ ಪ್ರವಾಸ ಮುಂದೂಡಿಕೆ*

ಜೂನ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.