Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ*
  • *ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ; ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ – ಡಾ.ಶುಭಾ ಕೆ.ಜಿ.*
  • *ಕಗ್ಗೋಡ್ಲು ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವಾಪ೯ಣೆ*
  • *ಮದೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ*
  • *ಮಾಜಿ ಸಚಿವ ಎಂ.ಸಿ.ನಾಣಯ್ಯ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಭೇಟಿ*
  • *ಕೊಡಗು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ*
  • *ನೇಪಾಳದಲ್ಲಿ ಚಿನ್ನದ ಪದಕ ಗೆದ್ದ ಸೋಮವಾರಪೇಟೆ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಫೀಸ್*
  • **ಆ.30ರಂದು ಕುಶಾಲನಗರದಲ್ಲಿ ಅದ್ದೂರಿ ಫ್ಯಾಷನ್ ಸಂಭ್ರಮ ‘ಕೂರ್ಗ್ ಫ್ಯಾಷನ್ ರನ್ ವೇ 2026’**
  • *25 ವರ್ಗಾವಣೆ, ಒಂದೇ ಖಡಕ್ ನಿಲುವು: ತುಕಾರಾಮ್ ಮುಂಢೆ ಅವರ ಸಂಪೂರ್ಣ ಕಥೆ*
  • *ಕಡಗದಾಳು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮತಾಂತರದ ವಿರುದ್ಧ ಕುಶಾಲನಗರದಲ್ಲಿ ಬೃಹತ್ ಜನಾಂದೋಲನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮತಾಂತರದ ವಿರುದ್ಧ ಕುಶಾಲನಗರದಲ್ಲಿ ಬೃಹತ್ ಜನಾಂದೋಲನ*

ಜೂನ್ 30, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Oplus_16908288
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜೂ.30 : ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ‌ ಮತಾಂತರ ಪ್ರಕರಣ ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಬೃಹತ್ ಜನಾಂದೋಲನ ಜಾಗೃತಿ ಜಾಥಾ ನಡೆಯಿತು. ಕುಶಾಲನಗರದ ವಿವಿಧ ಸಂಘಸಂಸ್ಥೆಗಳು, ವಿವಿಧ ಸಮುದಾಯ ಬಾಂಧವರು ಜಾಥಾದಲ್ಲಿ ಪಾಲ್ಗೊಂಡು ಧರ್ಮ ರಕ್ಷಣೆ ಕಹಳೆ ಮೊಳಗಿಸಿದರು. ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸೇರಿತು. ನಂತರ ಪಟ್ಟಣದ ಕಾರು ನಿಲ್ದಾಣ ಆವರಣದಲ್ಲಿ ಬೃಹತ್ ಸಭೆ ನಡೆಸಿತು. ಸ್ಥಳೀಯರು ಸೇರಿದಂತೆ   ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನ ಜಾಥಾದಲ್ಲಿ ಪ್ರಕರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು.  ಕುಶಾಲನಗರ ಕಾವೇರಿ ನಿಸರ್ಗಧಾಮ ಮುಂಭಾಗದಿಂದ ಕೇಸರಿ ಧ್ವಜ ಹಿಡಿದು ಶಲ್ಯ ಧರಿಸಿ ಧರ್ಮ ಪರ ಘೋಷಣೆಗಳೊಂದಿಗೆ ಹೆದ್ದಾರಿಯಲ್ಲಿ ಬೃಹತ್ ಜಾಗೃತಿ ಜಾಥಾ ಸಾಗಿ ಬಂತು. ಮಾಜಿ ಶಾಸಕದ್ವಯರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮತ್ತಿತರ ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಬಂದ್ ಮಾಡಿ ವರ್ತಕರು, ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಜಾಥಾ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ವರ್ತಕರು ಸ್ವಯಂಪ್ರೇರಣೆಯಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು. ಔಷಧಿ ಅಂಗಡಿಗಳು ಹಣ್ಣಿನ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ವಾಹನಗಳು ಯಾವುದೇ ತೊಡಕಿಲ್ಲದೆ ಸಾಗಿದವು.  ಬೆರಳೆಣಿಕೆಯ ಅಂಗಡಿಗಳು ತೆರೆದು ವಹಿವಾಟು ನಡೆಸಿದ ದೃಶ್ಯಗಳು ಗೋಚರಿಸಿತು.  ಪ್ರಮುಖ ವಾಣಿಜ್ಯ ಬೀದಿ ರಥಬೀದಿ ರಸ್ತೆಯಲ್ಲಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಸಂಪೂರ್ಣ ಅಂಗಡಿಗಳು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಇಬ್ಬರು ಡಿವೈಎಸ್ಪಿ, 5 ಮಂದಿ ಇನ್ಸ್ ಪೆಕ್ಟರ್, 10 ಎಸ್.ಐ  ಒಳಗೊಂಡಂತೆ 150 ಕ್ಕೂ ಅಧಿಕ  ಮಂದಿಯ ಪೊಲೀಸ್ ಸಿಬ್ಬಂದಿಗಳ ಪಡೆ ತೀವ್ರ ನಿಗಾ ವಹಿಸಿತ್ತು. *ಸಭಾ ಕಾರ್ಯಕ್ರಮ* ಕಾರು ನಿಲ್ದಾಣದ ವೇದಿಕೆಯಲ್ಲಿ ನಡೆದ ಜನಾಂದೋಲನ ಜಾಗೃತಿ ಸಭೆಯಲ್ಲಿ  ಪಾಲ್ಗೊಂಡ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕರು ಸತೀಶ್ ದಾವಣಗೆರೆ ದಿಕ್ಸೂಚಿ ಭಾಷಣ ಮಾಡಿದರು. ಜಾತಿ, ಮತ, ಪಕ್ಷ, ಪ್ರಾಂತ ಬೇಧ‌ ಮರೆತು ಹಿಂದೂಗಳು ಒಂದಾದರೆ ಮಾತ್ರ ಮತಾಂತರಕ್ಕೆ ಕಡಿವಾಣ ಹಾಕಬಹುದು ಎಂದರು. ಹಿಂದೂ ಸಮಾಜ ಉಳಿದಿರುವುದೇ ಮಹಿಳೆಯರಿಂದ ಪ್ರತಿ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ  ಪೋಷಕರು ಜಾಗೃತಿ ವಹಿಸಬೇಕು. ಮಕ್ಕಳಿಗೆ ಭಗವದ್ಗೀತೆ, ರಾಮಾಯಣ, ದೇಶದ ಹಿರಿಮೆ ಹೇಳುವ ಕತೆ ಹೇಳಬೇಕು. 1995ರಲ್ಲೇ ಕೊಡಗು ಜಿಲ್ಲೆಯಲ್ಲಿ ಲವ್ ಜಿಹಾದ್ ಶುರುವಾಗಿದೆ. ವೀರ ಸೇನಾನಿಗಳ ನಾಡಿನಲ್ಲಿ ಇಂತಹ ಹುನ್ನಾರ ಹೇಗೆ ಶುರುವಾಯಿತು ಎನ್ನುವುದು ಚಿಂತಿಸಬೇಕು. ಲವ್ ಜಿಹಾದ್  ಹಿಂದೂ ಸಮಾಜಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ನಾವೆಲ್ಲರೂ ಹಿಂದೂ, ನಾವೆಲ್ಲಾ ಒಂದು, ನಾವೆಲ್ಲಾ ಬಂಧು ಎಂಬ ಮನೋಭಾವ ಎಲ್ಲರಿಗೂ ಬರಬೇಕು ಎಂದರು. ರಾಜಕಾರಣಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ತುಷ್ಠೀಕರಣ ಮಾಡಬಾರದು ಎಂದು ಸಲಹೆ ನೀಡಿದರು. ಎಲ್ಲಾ ಮುಸ್ಲಿಂ, ಕ್ರಿಶ್ಚಿಯನ್ನರು ಕೆಟ್ಟವರಲ್ಲ‌. ವಂದೇ ಮಾತರಂ, ರಾಷ್ಟ್ರಗೀತೆಗೆ ಗೌರವ ಕೊಡದವರು ಮಾತ್ರ ರಾಷ್ಟ್ರದೋಹಿಗಳಂತೆ ಭಾಸವಾಗುತ್ತಿದ್ದಾರೆ  ಎಂದ ಅವರು, ನಮ್ಮ ವೀರ ರಕ್ತದ ಪರಿಚಯ ಇರುವವರು ಮತಾಂತರ ಆಗುವುದಿಲ್ಲ. ಧರ್ಮದ ಮೇಲೆ ನಿಷ್ಠೆ ಹೊಂದಬೇಕು ಎಂದರು. ಜನಾಂದೋಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಬಿ.ಅಮೃತ ರಾಜ್ ಮಾತನಾಡಿ, ಮತಾಂತರದ ವಿರುದ್ಧ ಜಾಗೃತಿ ಜಾಥಾ ಯಾವುದೇ‌‌ ಒಂದು ವರ್ಗದ ವಿರುದ್ದ ಅಲ್ಲ. ಈ ಪಿಡುಗಿಗೆ ಬಡವರು, ಶ್ರೀಮಂತರು ಬಲಿಯಾಗುತ್ತಿದ್ದಾರೆ. ದೇಶದ ವಿವಿಧೆಡೆ ನಡೆಯುತ್ತಿದ್ದ ಮತಾಂತರ ಪ್ರಕರಣ ಇದೀಗ ಕೊಡಗು ಜಿಲ್ಲೆಗೂ ಕಾಲಿಟ್ಟಿದೆ. ಭಾರತೀಯರು ಸಂವೇದನಾಶೀಲರು, ಹಾಗಾಗಿ ಮತಾಂತರ ಪ್ರಕರಣಗಳು ಹೆಚ್ಚು ಹೊರಗೆ ಬರುತ್ತಿಲ್ಲ. ಮತಾಂತರ ವಿರುದ್ದ ಹೋರಾಟ ಮುಂದುವರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಹಿಂದೂ ಜಾಗರಣ ವೇದಿಕೆಯ ಮುಖಂಡ ಭರತ್ ಮಾಚಯ್ಯ, ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿದರು. ಜನಾಂದೋಲನ ಸಹ ಸಂಚಾಲಕರಾದ ಚಿಲ್ಲನ ಗಣಿಪ್ರಸಾದ್, ವಸಂತ ರೈ, ಚಂದ್ರಶೇಖರ್ ಹೇರೂರು, ಜ್ಯೋತಿ ಕುದುಪಜೆ, ವಿ.ಹೆಚ್.ಪ್ರಶಾಂತ್ ಮತ್ತಿತರರು‌ ವೇದಿಕೆಯಲ್ಲಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ*

ಆಗಷ್ಟ್ 22, 2026

*ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ; ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ – ಡಾ.ಶುಭಾ ಕೆ.ಜಿ.*

ಆಗಷ್ಟ್ 22, 2026

*ಕಗ್ಗೋಡ್ಲು ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವಾಪ೯ಣೆ*

ಆಗಷ್ಟ್ 22, 2026

*ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ; ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ – ಡಾ.ಶುಭಾ ಕೆ.ಜಿ.*

ಆಗಷ್ಟ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.22- ಕಡಂಗ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ…

*ಕಗ್ಗೋಡ್ಲು ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವಾಪ೯ಣೆ*

ಆಗಷ್ಟ್ 22, 2026

*ಮದೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ*

ಆಗಷ್ಟ್ 22, 2026

*ಮಾಜಿ ಸಚಿವ ಎಂ.ಸಿ.ನಾಣಯ್ಯ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಭೇಟಿ*

ಆಗಷ್ಟ್ 22, 2026

*ಕೊಡಗು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ*

ಆಗಷ್ಟ್ 22, 2026

*ನೇಪಾಳದಲ್ಲಿ ಚಿನ್ನದ ಪದಕ ಗೆದ್ದ ಸೋಮವಾರಪೇಟೆ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಫೀಸ್*

ಆಗಷ್ಟ್ 22, 2026

**ಆ.30ರಂದು ಕುಶಾಲನಗರದಲ್ಲಿ ಅದ್ದೂರಿ ಫ್ಯಾಷನ್ ಸಂಭ್ರಮ ‘ಕೂರ್ಗ್ ಫ್ಯಾಷನ್ ರನ್ ವೇ 2026’**

ಆಗಷ್ಟ್ 22, 2026

*25 ವರ್ಗಾವಣೆ, ಒಂದೇ ಖಡಕ್ ನಿಲುವು: ತುಕಾರಾಮ್ ಮುಂಢೆ ಅವರ ಸಂಪೂರ್ಣ ಕಥೆ*

ಆಗಷ್ಟ್ 22, 2026

*ಕಡಗದಾಳು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*

ಆಗಷ್ಟ್ 22, 2026

*ಜಿಲ್ಲೆಯಾದ್ಯಂತ ಜಾಬ್ ಕಾರ್ಡ್ ಮೇಳ ಆರಂಭ* 

ಆಗಷ್ಟ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.