
ಭಾಗಮಂಡಲ ಜು.1 NEWS DESK : 2026-2027 ನೇ ಸಾಲಿಗೆ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ (BGS) ಪ್ರಥಮ ಬಾರಿಗೆ ಇವಿಎಂ ಮೂಲಕ ಮತ ಚಲಾಯಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಗಳಾಗಿ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ದಾಮೋಧರ ನಾಯ್ಕ್ ಮತ್ತು ಇತಿಹಾಸ ಉಪನ್ಯಾಸಕರಾದ ಸತೀಶ್ ಕಾರ್ಯ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಹೇಮಂತ್ ಕುಮಾರ್ ಟಿ ಮುಖ್ಯ ಚುನಾವಣಾ ಆಯಕ್ತರಾಗಿ ಕಾರ್ಯನಿರ್ವಹಿಸಿದರು. ಆಡಳಿತಾಧಿಕಾರಿ ಕೀರ್ತಿ ಗೌಡ ಹೆಚ್.ಆರ್. ಉಪಸ್ಥಿತರಿದ್ದರು. ತಾಂತ್ರಿಕ ವ್ಯವಸ್ಥೆಯನ್ನು ನರಸಿಂಹ ಮತ್ತು ಕಿಶೋರ್ ಕೆ.ಬಿ ಯಶಸ್ವಿಯಾಗಿ ನಿರ್ವಹಿಸಿದರು. ಎಲ್ಲಾ ಉಪನ್ಯಾಸಕರು ಮತ್ತು ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು. :: ಸಂಸತ್ತಿನ ನೂತನ ಪದಾಧಿಕಾರಿಗಳು : : ಕಾಲೇಜು ವಿಭಾಗ- ಪ್ರಜ್ವಲ್ ಕುದುಪಜೆ (ಶಾಲಾ ನಾಯಕ), ದರ್ಶಿನಿ ಕೆ. ಎಸ್.(ಕಾರ್ಯದರ್ಶಿ), ರಿಫಾ ಯು. (ಶಿಸ್ತು ನಾಯಕಿ), ಹೇಮಂತ್ ಎಂ ಎನ್.(ಕ್ರೀಡಾ ನಾಯಕ), ಭುವನೇಶ್ವರಿ ಕೆ. ಜೆ (ಆರೋಗ್ಯ ಮತ್ತು ಸ್ವಚ್ಚತಾ ನಾಯಕಿ) :: ಪ್ರೌಢಶಾಲಾ ವಿಭಾಗ :: ಗಜೇಂದ್ರ ಕೆ. ಎಸ್. ( ಶಾಲಾ ಉಪನಾಯಕ), ನಜಾ ಫಾತೀಮ (ಕಾರ್ಯದರ್ಶಿ), ಭರತ್ ಹೆ. ಆರ್ (ಶಿಸ್ತು ನಾಯಕ), ವಿನಯ್ ಟಿ. ಎಸ್.(ಕ್ರೀಡಾ ನಾಯಕ), ಸಫೀದ ಪಿ.ಎ.(ಆರೋಗ್ಯ ಮತ್ತು ಸ್ವಚ್ಚತಾ ನಾಯಕಿ)









