
ಮಡಿಕೇರಿ NEWS DESK ಜು.1 : ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ವತಿಯಿಂದ ಅಬಕಾಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಗರದಲ್ಲಿ ನಡೆಯಿತು. ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ಸಂಭ್ರಮದಿಂದ ಜರುಗಿದ ಕಾರ್ಯಕ್ರಮದಲ್ಲಿ 22ನೇ ಬ್ಯಾಚ್ ನ 36 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಎರಡೂವರೆ ವರ್ಷ 10 ಹಂತಗಳಿರುವ ಅಬಕಾಸ್ ಕೋರ್ಸ್ ನ್ನು ಈ ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ. ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ ಇಲ್ಲಿಯವರೆಗೆ ಕೇಂದ್ರದಿಂದ ಒಟ್ಟು 736 ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಿದ್ದಾರೆ ಎಂದರು. ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರು ಮಾತನಾಡಿ ಮಡಿಕೇರಿ ಕೇಂದ್ರದ ಅಲುಫ್ ಎ.ಆರ್ ಅವರು ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿದ್ದಾರೆ. ಈ ಬ್ಯಾಚ್ ನ ಹಲವು ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದ ಅಬಕಾಸ್ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಈ ಕೇಂದ್ರಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿ.ರಮ್ಯ ಪ್ರಸಾದ್ ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಅವರಿಗೆ ಮಾಪಂಗಡ ಕವಿತಾ ಕರುಂಬಯ್ಯ ಅವರ ಪತಿ ಮಾಪಂಗಡ ಮೋಹನ್ ಕರುಂಬಯ್ಯ ಅವರು ಕೊಡವ ಲಾಂಛನದ ನೆನಪಿನ ಫಲಕ ನೀಡಿ ಗೌರವಿಸಿದರು. *ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು* ಸುಬ್ಬಯ್ಯ ಕೆ.ಸಿ, ಕೋಸಗಿ ಸಮರ್ಥ್ ಸಾಮ್ರಾಟ್, ಕೋಸಗಿ ಸಾತ್ವಿಕ್ ಸಾಮ್ರಾಟ್, ಮಿಯಾ ಅರುಣ್, ಜಾರ್ಜ್ ಮ್ಯಾಥ್ಯು, ಶಿವಕುಮಾರ್ ಯು.ಆರ್, ಗಾನವಿ ಗಂಗಮ್ಮ ಸಿ.ವಿ, ನಿಶ್ಚಲ್.ಆರ್, ಆಹಾನ್ ಬರನ್ವಾಲ್, ಭುವನ್ ತಿಮ್ಮಯ್ಯ ಎಂ, ಅಲುಫ್.ಎ.ಆರ್, ಆಲ್ಫಾ .ಎ.ಆರ್, ಲಿಖಿತ್ ಸೋಮಣ್ಣ ಕೆ.ಎಲ್, ರಿಯಾಂಕ ಎಸ್.ವಿ, ಯಜತ್ ಗಣಪತಿಪಿ.ಕೆ, ರೋನಿತ್ ತಮ್ಮಯ್ಯ ಪಿ.ಕೆ, ಅನೀಸನ್ ಪಿ., ಯಶಿಕ.ಎಸ್, ನಮನ್ ಎಂ.ಗೌಡ, ಎ.ಎಲ್.ಕಿಶಿ ಕಾವೇರಮ್ಮ, ಹೆಚ್.ಎಲ್.ವಿವಿನ್ ಗಣಪತಿ, ಸಿದ್ದಾರ್ಥ್ ಕೃಷ್ಣ ಪಿ., ಸಮರ್ಥ್ ಆರ್., ಸೃಷ್ಟಿ ಎಂ.ಆರ್, ಅದಿತ್ ಗೌತಮ್ ಕೆ., ಪ್ರೇಕ್ಷಾ ಟಿ.ಎಂ, ಲಾಲಿತ್ಯ ಅಶೋಕ್ ಸಿ., ಪ್ರಧಾನ್ ಸತಾಯುಷ್, ಕುಶಿ ಬಿ.ಡಿ, ತೇಜಸ್ ಕಾಮತ್, ಶಿಶಿರ್ ಆರ್., ಲಿನಿತ್ ಬಿ.ಎಲ್, ಮನ್ವಿತ.ಎಸ್, ಯಶಸ್ ಕೆ.ಯು, ದಿಗಂತ್ ಎಸ್. ಅನ್ವೇಕರ್ ಹಾಗೂ ಜೀವಿಕ ಕೆ.ಎನ್.










