
ಮಂಗಳೂರು NEWS DESK ಜು.3 : ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಎಂ. ಎ. ಬಿಸಿನೆಸ್ ಎಕನಾಮಿಕ್ಸ್ ಸ್ನಾತಕೋತ್ತರ ಕೋರ್ಸ್ ಗೆ 2026-27 ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದೆ. ಬಿ. ಎ, ಬಿ. ಕಂ, ಬಿಬಿಎ , ಬಿ. ಎಸ್ಸಿ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅಥವಾ ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ ವನ್ನು ಪದವಿ ತರಗತಿಯಲ್ಲಿ ಒಂದು ಕೋರ್ಸ್ ಆಗಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಂ. ಎ. ಬಿಸಿನೆಸ್ ಎಕನಾಮಿಕ್ಸ್ ಕೋರ್ಸ್ ಗೆ ಪ್ರವೇಶಾತಿ ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ. ಶಿಕ್ಷಣದ ಜೊತೆಯಲ್ಲಿ ವಿಭಾಗವು ವೃತ್ತಿಪರ ಉದ್ಯೋಗ ತರಬೇತಿ, ಹೂಡಿಕೆ , ಬಂಡವಾಳ, ಹಾಗೂ ಹಣಕಾಸಿನ ವಿಶ್ಲೇಷಣೆ, ಅಂತರಾಷ್ಟ್ರೀಯ ಮಟ್ಟದ ವ್ಯವಹಾರ ವಿಶ್ಲೇಷಣೆಯ ಮಾರ್ಗದರ್ಶನ, ಹಣಕಾಸು ವಲಯದಲ್ಲಿರುವ ಅವಕಾಶಗಳು ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಸಂಬಂಧಿಸಿದ ಶಿಕ್ಷಣಕ್ಕೆ ಮಹತ್ವವನ್ನು ನೀಡಿರುತ್ತದೆ. ಅಂತರಾಷ್ಟ್ರೀಯ ಮಟ್ಟದ ವ್ಯವಹಾರ ವಿಶ್ಲೇಷಣೆಯ ಬಗ್ಗೆ ನಿರಂತರವಾಗಿ ವಿಶ್ಲೇಷಣೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುತ್ತ ಬಂದಿರುತ್ತದೆ. ನುರಿತ ಅನುಭವಿ ಪ್ರಾದ್ಯಾಪಕರು, ವೃತ್ತಿ ಅವಕಾಶಗಳು, ಜಾಗತಿಕ ಮಟ್ಟದ ಅಧ್ಯಯನ, ಹೊಸದಾದ ಅನುಭವಾತ್ಮಕ ಕಲಿಕೆ , ಮುಂತಾದ ವೈವಿಧ್ಯಮಯ ಸೌಲಭ್ಯಗಳನ್ನು ವಿಭಾಗವು ಹೊಂದಿದೆ. ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮುಂದಿದ್ದು ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ಮೂಲಕ ವರ್ಷಂಪ್ರತಿ ಸಾಧನೆಯನ್ನು ಮಾಡುತ್ತ ಬಂದಿರುತ್ತಾರೆ. ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಇಂಡಸ್ಟ್ರಿಯಲ್ಲಿ ವಿಸಿಟ್, ಇಂಟರ್ನ್ಶಿಪ್, ಪ್ರೊಜೆಕ್ಟ್ ಮುಂತಾದ ಹಲವಾರು ಚಟುವಟಿಕೆಗಳಿಗೆ ಮಹತ್ವವನ್ನು ನೀಡಲಾಗಿದೆ.ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದರ ಜೊತೆಗೆ ಕೌಶಲ್ಯ ಹಾಗೂ ಉತ್ತಮ ಉದ್ಯೋಗವನ್ನು ಪಡೆಯಲು ಮಾರ್ಗದರ್ಶನವನ್ನು ನೀಡುವ ಉದ್ದೇಶವನ್ನು ಸಂಸ್ಥೆ ಹಾಗೂ ವಿಭಾಗವು ಹೊಂದಿದೆ.ವಿದ್ಯಾಸಂಸ್ಥೆಯ ಕಚೇರಿಯ ವೇಳೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಪ್ರವೇಶಾತಿಯನ್ನು ಪಡೆದುಕೊಳ್ಳುವಂತೆ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಕಟಣೆ ಕೋರಿದೆ.








