
ಮಡಿಕೇರಿ NEWS DESK ಜು.3 : ನಗರದ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಎಂ.ಪಿ.ಕೃಷ್ಣ ಅವರನ್ನು ಕಾಲೇಜ್ ನ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಕಾಲೇಜು ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ. ಅವರು ತಮ್ಮ ಹುಟ್ಟೂರಿನ ಈ ಕಾಲೇಜ್ ನಲ್ಲಿ ಪದವಿ ಪಡೆದ ಪ್ರೊ.ಎಂ.ಪಿ.ಕೃಷ್ಣ ಅವರು ಇದೇ ಕಾಲೇಜ್ ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವುದು ಹೆಮ್ಮೆ ಎನಿಸಿದೆ. ಇದು ಇವರಿಗೆ ಲಭಿಸಿದ ಭಾಗ್ಯವಾಗಿದೆ, ಈ ಗೌರವ ಸಿಗುವುದು ಅಪರೂಪ ಎಂದು ಅಭಿಪ್ರಾಯಪಟ್ಟರು. ಕಾಲೇಜ್ ನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವಲ್ಲಿ ಕೈಜೋಡಿಸುತ್ತಿದ್ದ ಪ್ರೊ.ಎಂ.ಪಿ.ಕೃಷ್ಣ ಅವರ ಸೇವೆ ಶ್ಲಾಘನೀಯ. ಸೇವಾ ಮನೋಭಾವ ಮತ್ತು ಬೋಧಕರೊಂದಿಗಿನ ಒಡನಾಟ ಸದಾ ಹಚ್ಚಹಸಿರಾಗಿರಲಿದೆ. ಇವರ ನಿವೃತ್ತಿ ಜೀವನ ಸುಖಕರ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು. ಹಿಂದಿ ವಿಭಾಗದ ಪ್ರೊ.ಶ್ರೀಧರ್ ಆರ್. ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ.ಗಾಯತ್ರಿ ದೇವಿ ಎ. ಅವರು ಪ್ರಾರ್ಥಿಸಿದರು. 31 ವರ್ಷಗಳ ಸುದೀರ್ಘ ಸಾರ್ಥಕ ಸೇವೆ ಸಲ್ಲಿಸಿದ ಪ್ರೊ.ಎಂ.ಪಿ.ಕೃಷ್ಣ ಅವರ ಕುರಿತು ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ.ನಯನ ಕೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ತಿಪ್ಪೇಸ್ವಾಮಿ ಇ, ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ.ಗಾಯತ್ರಿ ದೇವಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜ್ ಕೆ.ಪಿ, ಆಂಗ್ಲಭಾಷಾ ವಿಭಾಗದ ಸಹ ಪ್ರಾಧ್ಯಾಪಕ ರಮೇಶ್ ಹೆಚ್.ಆರ್, ಉಪನ್ಯಾಸಕರಾದ ಡಾ.ನಳಿನಿ ಹಾಗೂ ಮುಖೇಶ್ ಅವರುಗಳು ಅಭಿಪ್ರಾಯ ಹಂಚಿಕೊoಡರು. ಪ್ರೊ.ಎo.ಪಿ.ಕೃಷ್ಣ ಅವರು ತಮ್ಮ ಸುದೀರ್ಘ ಸೇವಾ ಅನುಭವಗಳನ್ನು ಹಾಗೂ ಶೈಕ್ಷಣಿಕ ಒಡನಾಟವನ್ನು ಮನೋಜ್ಞವಾಗಿ ವಿವರಿಸಿದರು. ಕಾಲೇಜ್ ನ ವತಿಯಿಂದ ಇವರನ್ನು ಆತ್ಮೀಯವಾಗಿ ಸನ್ಮಾನಿಸುವ ಮೂಲಕ ಗೌರವಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜ್ ನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಕೊಡಗು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಚೇರಿ ಸಹಾಯಕಿ ಪವಿತ್ರಾವತಿ ಹೆಚ್.ಜಿ ವಂದಿಸಿದರು.








