Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಕೊಠಡಿ ಉದ್ಘಾಟನೆ*
  • *ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*
  • *ಕೊಡಗಿನಿಂದ ಲೋಕಾಯುಕ್ತಕ್ಕೆ 207 ಪ್ರಕರಣಗಳು ಬಾಕಿ : ಇತ್ಯರ್ಥಕ್ಕೆ ಕ್ರಮ : ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ*
  • *ಮಡಿಕೇರಿ : ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ : ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಕೆ.ಎನ್.ಫಣೀಂದ್ರ ಸೂಚನೆ*
  • *ನಿವೃತ್ತ ಯೋಧ ಹೆಚ್.ಎ.ಸತೀಶ್ ರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ*
  • *ಕುಶಾಲನಗರ : ಕಾವೇರಿ ನದಿ ನೀರಿನ ಮಟ್ಟ ಏರಿಕೆ*
  • *ಪ್ರಧಾನಿಗೆ ಅವಾಚ್ಯ ಶಬ್ದ ಪ್ರಯೋಗ : ಪೊನ್ನಂಪೇಟೆಯಲ್ಲಿ ದೂರು*
  • *ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ 51ನೇ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಅಧಿಕಾರ ಸ್ವೀಕಾರ*
  • *ಎಸ್‌ಬಿಐ ಪಿಒ 1,500 ಹುದ್ದೆಗಳ ನೇಮಕಾತಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!*
  • *ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರೊ.ಡಾ.ಎಂ.ಪಿ.ಕೃಷ್ಣ ಅವರಿಗೆ ಬೀಳ್ಕೊಡುಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಎಸ್‌ಬಿಐ ಪಿಒ 1,500 ಹುದ್ದೆಗಳ ನೇಮಕಾತಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

*ಎಸ್‌ಬಿಐ ಪಿಒ 1,500 ಹುದ್ದೆಗಳ ನೇಮಕಾತಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!*

ಜುಲೈ 3, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಂಪರ್ ಕೊಡುಗೆ ನೀಡಿದೆ. 2026ರ ಸಾಲಿನ ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಒಟ್ಟು 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 588 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 234 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 144, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 144 ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 390 ಹುದ್ದೆಗಳನ್ನು ಮೀಸಲಿಡಲಾಗಿದೆ.ಜುಲೈ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ಹೋಲಿಕೆ: ಕಳೆದ ವರ್ಷ ವರ್ಸಸ್ ಈ ವರ್ಷ

ಕಳೆದ ವರ್ಷ (2025ರಲ್ಲಿ) ಎಸ್‌ಬಿಐ ಕೇವಲ 541 ಪಿಒ ಹುದ್ದೆಗಳಿಗೆ ಮಾತ್ರ ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಬಾರಿ ಹುದ್ದೆಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಒಟ್ಟು 1,500 ಹುದ್ದೆಗಳಿಗೆ (1446 ರೆಗ್ಯುಲರ್ + 54 ಬ್ಯಾಕ್‌ಲಾಗ್) ನೇಮಕಾತಿ ನಡೆಯುತ್ತಿದೆ. ಇದು ಅಭ್ಯರ್ಥಿಗಳಿಗೆ ಸಿಕ್ಕಿರುವ ಸುವರ್ಣಾವಕಾಶ.

ಮುಂಬೈನಂತಹ ಮೆಟ್ರೋ ಸಿಟಿಯಲ್ಲಿ ಸಂಬಳ (CTC) ಎಷ್ಟು?

ಎಸ್‌ಬಿಐ ಪಿಒ ಹುದ್ದೆಯ ಆಕರ್ಷಣೆಯೇ ಅದರ ಸಂಬಳ ಮತ್ತು ಸವಲತ್ತುಗಳು. 2026ರ ಹೊಸ ಅಧಿಸೂಚನೆಯಂತೆ ಆರಂಭಿಕ ಮೂಲ ವೇತನವನ್ನು (Basic Pay) ₹56,480 ಕ್ಕೆ ಹೆಚ್ಚಿಸಲಾಗಿದೆ.

ಮುಂಬೈನಂತಹ ಪ್ರಮುಖ ಮೆಟ್ರೋ ನಗರಗಳಲ್ಲಿ ಪೋಸ್ಟಿಂಗ್ ಸಿಕ್ಕರೆ, ಅಲ್ಲಿನ ಲೀಸ್ಡ್ ವಸತಿ ಸೌಕರ್ಯ (Leased Accommodation) ಮತ್ತು ಇತರೆ ಭತ್ಯೆಗಳು (DA, CCA, HRA) ಸೇರಿ ವಾರ್ಷಿಕ ಸಿಟಿಸಿ (CTC) ಅಂದಾಜು ₹21.97 ಲಕ್ಷ ಆಗಲಿದೆ (ಕಳೆದ ವರ್ಷ ಇದು ₹20.43 ಲಕ್ಷ ಇತ್ತು). ಅಂದರೆ ಮಾಸಿಕ ಒಟ್ಟು ಗಳಿಕೆ ಸುಮಾರು ₹1.83 ಲಕ್ಷ ದಾಟಲಿದ್ದು, ಎಲ್ಲಾ ಕಡಿತಗಳ ನಂತರ ಕೈಗೆ ಸಿಗುವ ಇನ್-ಹ್ಯಾಂಡ್ ಸಂಬಳವೇ ₹84,000 ದಿಂದ ₹86,000 ಇರಲಿದೆ.

ಪರೀಕ್ಷಾ ಮಾದರಿ ಮತ್ತು ಬದಲಾವಣೆಗಳು (Pattern & Changes)

ಈ ಬಾರಿಯ ಅಧಿಸೂಚನೆಯಲ್ಲಿ ಮುಖ್ಯವಾಗಿ ಡಿಸ್ಕ್ರಿಪ್ಟಿವ್ ಟೆಸ್ಟ್ (Descriptive Test) ಮಾದರಿಯಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಇಮೇಲ್ ರೈಟಿಂಗ್ (Email Writing) ಮತ್ತು ಪ್ರಬಂಧ ರಚನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಅಂಕಗಳನ್ನು 50 ರಿಂದ 30 ಕ್ಕೆ ಇಳಿಸಲಾಗಿದೆ. ಜೊತೆಗೆ ಆಧಾರ್ ವೆರಿಫಿಕೇಶನ್ ಕಡ್ಡಾಯಗೊಳಿಸಲಾಗಿದೆ. ಸಾಮಾನ್ಯ (UR/EWS) ಅಭ್ಯರ್ಥಿಗಳಿಗೆ ಗರಿಷ್ಠ ಪ್ರಯತ್ನಗಳ ಸಂಖ್ಯೆಯನ್ನು 4 ರಿಂದ 6 ಕ್ಕೆ ಹಾಗೂ OBC ಅಭ್ಯರ್ಥಿಗಳಿಗೆ 7 ರಿಂದ 9ಕ್ಕೆ ನಿಗದಿಪಡಿಸಲಾಗಿದೆ (SC/ST ಗೆ ಯಾವುದೇ ಮಿತಿಯಿಲ್ಲ).2026ರಲ್ಲಿ (Mains ನಲ್ಲಿ appearance ಆದಾಗ ಮಾತ್ರ attempt count).

ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷಾ ಸಮಯ: (Time Norms):

1. ಪ್ರಿಲಿಮಿನರಿ ಪರೀಕ್ಷೆ (ಒಟ್ಟು 1 ಗಂಟೆ – 100 ಅಂಕಗಳು):

* ಇಂಗ್ಲಿಷ್ ಭಾಷೆ: 40 ಪ್ರಶ್ನೆಗಳು, 20 ನಿಮಿಷ
* ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್: 30 ಪ್ರಶ್ನೆಗಳು, 20 ನಿಮಿಷ
* ರೀಸನಿಂಗ್ ಎಬಿಲಿಟಿ: 30 ಪ್ರಶ್ನೆಗಳು, 20 ನಿಮಿಷ
(ಗಮನಿಸಿ: ಪ್ರಿಲಿಮ್ಸ್‌ನಲ್ಲಿ ಯಾವುದೇ ಸೆಕ್ಷನಲ್ ಕಟ್-ಆಫ್ ಇರುವುದಿಲ್ಲ.ಇದು ನಿಮಗೆ ಅನುಕೂಲ. ಕಾರಣ ಸಹಜವಾಗಿ ಇಂಗ್ಲೀಷ್ ನಲ್ಲಿ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.).

2. ಮೇನ್ಸ್ ಪರೀಕ್ಷೆ (ಒಟ್ಟು 3 ಗಂಟೆ 30 ನಿಮಿಷ – 230 ಅಂಕಗಳು):

* ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್: 40 ಪ್ರಶ್ನೆಗಳು, 50 ನಿಮಿಷ,60 ಅಂಕಗಳು
* ಡೇಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಷನ್: 30 ಪ್ರಶ್ನೆಗಳು, 45 ನಿಮಿಷ,60 ಅಂಕಗಳು.
* ಜನರಲ್/ಎಕಾನಮಿ/ಬ್ಯಾಂಕಿಂಗ್ ಅವೇರ್ನೆಸ್: 60 ಪ್ರಶ್ನೆಗಳು, 45 ನಿಮಿಷ,60 ಅಂಕಗಳು.
* ಇಂಗ್ಲಿಷ್ ಭಾಷೆ (ಅಬ್ಜೆಕ್ಟಿವ್): 40 ಪ್ರಶ್ನೆಗಳು, 40 ನಿಮಿಷ,20 ಅಂಕಗಳು.
* ಇಂಗ್ಲಿಷ್ ಡಿಸ್ಕ್ರಿಪ್ಟಿವ್ ಟೆಸ್ಟ್ (Letter/Email & Essay): 3 ಪ್ರಶ್ನೆಗಳು,30 ಅಂಕಗಳು, 30 ನಿಮಿಷ
(ಗಮನಿಸಿ: ಮೆನ್ಸ್ ನಲ್ಲಿ ಸೆಕ್ಷನಲ್ ಕಟ್-ಆಫ್ ಇದೆ).

ಕೊನೆಯಲ್ಲಿ ಗುಂಪು ಚರ್ಚೆಗೆ(20) ಹಾಗೂ ಸಂದರ್ಶನ ಕ್ಕೆ (30) ಅಂಕಗಳನ್ನು ನಿಗದಿಪಡಿಸಲಾಗಿದೆ.

ನಿರೀಕ್ಷಿತ ಕಟ್-ಆಫ್ (Expected Cut-off) ಮತ್ತು ಇತರೆ ವಿವರಗಳು:

ಕಳೆದ ಬಾರಿ ಸಾಮಾನ್ಯ (General) ಕೆಟಗರಿಯ ಪ್ರಿಲಿಮ್ಸ್ ಕಟ್-ಆಫ್ 61.75 ಆಗಿತ್ತು (OBC: 60.50, SC: 55.00, ST: 49.00). ಈ ಬಾರಿ ಹುದ್ದೆಗಳ ಸಂಖ್ಯೆ (1500) ಹೆಚ್ಚಿರುವುದರಿಂದ ಕಟ್-ಆಫ್ ಅಂಕಗಳು ಕಠಿಣತೆ ಹಾಗೂ ಸ್ಪರ್ಧೆಯ ಆಧಾರದ ಮೇಲೆ 58 ರಿಂದ 63ರ ಆಸುಪಾಸಿನಲ್ಲಿ ಇರುವ ಸಾಧ್ಯತೆಯಿದೆ.

ನೆನಪಿರಲಿ.: ತಪ್ಪು ಉತ್ತರಗಳಿಗೆ 1/4 ರಷ್ಟು ನೆಗೆಟಿವ್ ಅಂಕಗಳಿರುತ್ತವೆ. ಮೂರನೇ ಹಂತದಲ್ಲಿ ಸೈಕೋಮೆಟ್ರಿಕ್ ಟೆಸ್ಟ್, ಗ್ರೂಪ್ ಎಕ್ಸಸೈಸ್ ಮತ್ತು ಸಂದರ್ಶನ ನಡೆಯಲಿದೆ.

ಪಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಿಳಿದುಕೊಳ್ಳಬೇಕಾದ ಇನ್ನುಳಿದ ಪ್ರಮುಖ ತಾಂತ್ರಿಕ ವಿವರಗಳು ಮತ್ತು ಅರ್ಹತೆಯ ಮಾನದಂಡಗಳು ಇಲ್ಲಿವೆ:

1. ಶೈಕ್ಷಣಿಕ ಅರ್ಹತೆ (Educational Qualification)
⮚ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation) ಉತ್ತೀರ್ಣರಾಗಿರಬೇಕು.
⮚ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ: ಸದ್ಯ ಪದವಿಯ ಕೊನೆಯ ವರ್ಷ ಅಥವಾ ಸೆಮಿಸ್ಟರ್‌ನಲ್ಲಿರುವ ಅಭ್ಯರ್ಥಿಗಳೂ ಸಹ ಪ್ರೊವಿಜನಲ್ ಆಗಿ ಅರ್ಜಿ ಸಲ್ಲಿಸಬಹುದು. ಆದರೆ, ಸಂದರ್ಶನಕ್ಕೆ ಆಯ್ಕೆಯಾದರೆ 30 ಸೆಪ್ಟೆಂಬರ್ 2026 ರ ಒಳಗಾಗಿ ಪದವಿ ಪೂರ್ಣಗೊಳಿಸಿರುವ ಅಧಿಕೃತ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ.

2. ವಯೋಮಿತಿ (Age Limit – 01 ಏಪ್ರಿಲ್ 2026 ಕ್ಕೆ ಅನ್ವಯಿಸುವಂತೆ)
⮚ಕನಿಷ್ಠ ವಯಸ್ಸು: 21 ವರ್ಷ | ಗರಿಷ್ಠ ವಯಸ್ಸು: 30 ವರ್ಷ.
⮚ಅಭ್ಯರ್ಥಿಗಳು 02.04.1996 ಕ್ಕಿಂತ ಮುಂಚೆ ಮತ್ತು 01.04.2005 ಕ್ಕಿಂತ ತಡವಾಗಿ ಜನಿಸಿರಬಾರದು.
ವಯೋಮಿತಿ ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ (NCL) ಅಭ್ಯರ್ಥಿಗಳಿಗೆ 3 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆ ಇರುತ್ತದೆ.

3. ಅರ್ಜಿ ಶುಲ್ಕ (Application Fee)
⮚ಸಾಮಾನ್ಯ (General), ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ: ₹750
⮚ಎಸ್‌ಸಿ (SC), ಎಸ್‌ಟಿ (ST) ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ (Nil).

4.ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು:

ಪೂರ್ವಭಾವಿ ಪರೀಕ್ಷೆ ಬೆಳಗಾವಿ, ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಮುಖ್ಯ ಪರೀಕ್ಷೆಗೆ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ/ಧಾರವಾಡದಲ್ಲಿ ನಡೆಯಲಿದೆ.

5.ಪರೀಕ್ಷಾ ಪೂರ್ವ ತರಬೇತಿ:

ಪರಿಶಿಷ್ಟ ಜಾತಿ/ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಬ್ಯಾಂಕ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಗೆ ನಿಗದಿ ಪಡಿಸಿದ ಕೇಂದ್ರಗಳಲ್ಲೇ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲಿಚ್ಚಿಸುವವರು ಆನ್‌ಲೈನ್ ಮೂಲಕ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆ ನಡೆಯುವ ಮೊದಲೇ ಜುಲೈನಲ್ಲಿ ಈ ತರಬೇತಿ ನೀಡಲಾಗುತ್ತದೆ ಎಂದು ಎಸ್‌ ಬಿ ಆಯ್ ಪ್ರಕಟಿಸಿದೆ.

6. ಸೇವಾ ಬಾಂಡ್ ಮತ್ತು ತರಬೇತಿ (Service Bond & Training)
⮚ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ಪ್ರೊಬೇಷನರಿ ಅವಧಿಯನ್ನು ಪೂರೈಸಬೇಕಾಗುತ್ತದೆ.
⮚ನೇಮಕಾತಿ ಸಮಯದಲ್ಲಿ ಬ್ಯಾಂಕಿನೊಂದಿಗೆ ₹2 ಲಕ್ಷ ಮೊತ್ತದ ಸೇವಾ ಬಾಂಡ್ (Service Bond) ಸಹಿ ಮಾಡಬೇಕಾಗುತ್ತದೆ. ಕನಿಷ್ಠ 3 ವರ್ಷಗಳ ಅವಧಿಗಿಂತ ಮುಂಚಿತವಾಗಿ ಕೆಲಸ ಬಿಟ್ಟರೆ ಈ ಮೊತ್ತವನ್ನು ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

7. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆ ತಪ್ಪಿಸಲು ಈ ಕೆಳಗಿನವುಗಳನ್ನು ಮೊದಲೇ ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ:
⮚ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿ (ಕಪ್ಪು ಶಾಯಿಯಲ್ಲಿ).
⮚ಎಡಗೈ ಹೆಬ್ಬೆರಳಿನ ಗುರುತು (Left-hand thumb impression).
⮚ಹ್ಯಾಂಡ್-ರಿಟನ್ ಡಿಕ್ಲರೇಷನ್ (Handwritten Declaration): ಬಿಳಿ ಹಾಳೆಯ ಮೇಲೆ ಅಭ್ಯರ್ಥಿಯೇ ಸ್ವತಃ ಇಂಗ್ಲಿಷ್‌ನಲ್ಲಿ ನಿಗದಿತ ಪ್ರತಿಯನ್ನು ಬರೆದು ಸ್ಕ್ಯಾನ್ ಮಾಡಬೇಕು.

ಅರ್ಜಿ ಸಲ್ಲಿಸಲು ವೆಬ್‌ಸೈಟ್:www.sbi.bank.in
ಪರೀಕ್ಷಾ ದಿನಾಂಕಗಳು: ಪ್ರಿಲಿಮ್ಸ್ – ಆಗಸ್ಟ್ 2026, ಮೇನ್ಸ್ – ಸೆಪ್ಟೆಂಬರ್ 2026.

ಆರ್. ಕೆ. ಬಾಲಚಂದ್ರ
ನಿವೃತ್ತ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥರು,
ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು | ಅಂಕಣಕಾರರು

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಕೊಠಡಿ ಉದ್ಘಾಟನೆ*

ಜುಲೈ 3, 2026

*ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*

ಜುಲೈ 3, 2026

*ಕೊಡಗಿನಿಂದ ಲೋಕಾಯುಕ್ತಕ್ಕೆ 207 ಪ್ರಕರಣಗಳು ಬಾಕಿ : ಇತ್ಯರ್ಥಕ್ಕೆ ಕ್ರಮ : ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ*

ಜುಲೈ 3, 2026

*ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*

ಜುಲೈ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.3 NEWS DESK : ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ 4.83 ಕೋಟಿ ರೂ.…

*ಕೊಡಗಿನಿಂದ ಲೋಕಾಯುಕ್ತಕ್ಕೆ 207 ಪ್ರಕರಣಗಳು ಬಾಕಿ : ಇತ್ಯರ್ಥಕ್ಕೆ ಕ್ರಮ : ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ*

ಜುಲೈ 3, 2026

*ಮಡಿಕೇರಿ : ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ : ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಕೆ.ಎನ್.ಫಣೀಂದ್ರ ಸೂಚನೆ*

ಜುಲೈ 3, 2026

*ನಿವೃತ್ತ ಯೋಧ ಹೆಚ್.ಎ.ಸತೀಶ್ ರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ*

ಜುಲೈ 3, 2026

*ಕುಶಾಲನಗರ : ಕಾವೇರಿ ನದಿ ನೀರಿನ ಮಟ್ಟ ಏರಿಕೆ*

ಜುಲೈ 3, 2026

*ಪ್ರಧಾನಿಗೆ ಅವಾಚ್ಯ ಶಬ್ದ ಪ್ರಯೋಗ : ಪೊನ್ನಂಪೇಟೆಯಲ್ಲಿ ದೂರು*

ಜುಲೈ 3, 2026

*ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ 51ನೇ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಅಧಿಕಾರ ಸ್ವೀಕಾರ*

ಜುಲೈ 3, 2026

*ಎಸ್‌ಬಿಐ ಪಿಒ 1,500 ಹುದ್ದೆಗಳ ನೇಮಕಾತಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!*

ಜುಲೈ 3, 2026

*ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರೊ.ಡಾ.ಎಂ.ಪಿ.ಕೃಷ್ಣ ಅವರಿಗೆ ಬೀಳ್ಕೊಡುಗೆ*

ಜುಲೈ 3, 2026

*ಆನೆ ಮಾನವ ಸಂಘರ್ಷ ನಿವಾರಣೆಗೆ ಅಗತ್ಯ ಕ್ರಮ : ಕೇಂದ್ರ ಸರಕಾರ ಭರವಸೆ : ಸಂಸದ ಯದುವೀರ್ ಮನವಿಗೆ ಸ್ಪಂದನೆ*

ಜುಲೈ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.