
ಮಡಿಕೇರಿ ಜು.3 NEWS DESK : ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಮತ್ತು ಕಾಯ೯ದಶಿ೯ಯಾಗಿ ಮೃಣಾಲಿನಿ ಚಿಣ್ಣಪ್ಪ ಅಧಿಕಾರ ಸ್ವೀಕರಿಸಿದರು. ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿಗೆ ಇನ್ನರ್ ವೀಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಡಾ.ಜಯಲಕ್ಷ್ಮಿ ಪಾಟ್ಕರ್ ಪದಗ್ರಹಣ ನೆರವೇರಿಸಿದರು. ಇನ್ನರ್ ವೀಲ್ ಜಿಲ್ಲಾ ಸಮಿತಿಯ ನಿದೇ೯ಶಕಿ ದಿವ್ಯಮುತ್ತಣ್ಣ, ನಿಕಟಪೂವ೯ ಅಧ್ಯಕ್ಷೆ ಲಲಿತಾ ರಾಘವನ್ , ನಿಕಟಪೂವ೯ ಕಾಯ೯ದಶಿ೯ ನಮಿತಾರೈ ವೇದಿಕೆಯಲ್ಲಿದ್ದರು. ಆರೋಗ್ಯ ಚಿಕಿತ್ಸೆಗಾಗಿ ಸಿ.ಕೆ.ನಂದೀಶ್ ಕುಮಾರ್ ಅವರಿಗೆ 5 ಸಾವಿರ ರು. ಮತ್ತು ಶೈಕ್ಷಣಿಕ ನೆರವಾಗಿ ಬಿ.ಯು. ಹಿತಶ್ರೀ ಅವರಿಗ 5 ಸಾವಿರ ರು ಗಳ ಆಥಿ೯ಕ ನೆರವನ್ನು ಇದೇ ಸಂದಭ೯ ಇನ್ನರ್ ವೀಲ್ ನಿಂದ ನೀಡಲಾಯಿತು. ಮಡಿಕೇರಿ ರೋಟರಿ ಅಧ್ಯಕ್ಷ ಮನೋಹರ್ ಕಾಮತ್ ಅವರು ಇನ್ನರ್ ವೀಲ್ ವಾತಾ೯ಸಂಚಿಕೆ ಗಿರಿಶೖಂಗವನ್ನು ಲೋಕಾಪ೯ಣೆಗೊಳಿಸಿದರು. ವಿಜಯಲಕ್ಷ್ಮಿ ಚೇತನ್, ದೇಚು ಶ್ಯಾಮ್, ರೇಣುಕಾ ಸುಧಾಕರ್ ಪ್ರಾಥಿ೯ಸಿ, ಗುಲಾಬಿ ಜನಾಧ೯ನ್ ವಂದಿಸಿದರು. ಖಜಾಂಜಿ ಡಾ.ಶುಭಾ ರಾಜೇಶ್ ಸುಮಾತಿಮ್ಮಯ್ಯ, ನಿಶಾಮೋಹನ್, ಅಗ್ನೇಸ್ ಮುತ್ತಣ್ಣ, ತೖಪ್ತಿ ಕಾಮತ್ ಕಾಯ೯ಕ್ರಮ ನಿವ೯ಹಿಸಿದರು.









