
ಮಡಿಕೇರಿ ಜು.3 NEWS DESK : ದೇಶದ ಪ್ರಧಾನಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೊನ್ನಂಪೇಟೆ ಪೋಲಿಸ್ ಠಾಣೆಯಲ್ಲಿ ಬಿಜೆಪಿ ದೂರು ದಾಖಲಿಸಿದೆ. ಪ್ರಧಾನಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಎಸ್‍ಎನ್‍ಎಲ್ ನ ಮಾಜಿ ಕೆಲಸಗಾರನೊಬ್ಬನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ದೂರು ದಾಖಲಿಸುವ ಸಂದರ್ಭ ವಿರಾಜಪೇಟೆ ಮಂಡಲ ಕಾರ್ಯದರ್ಶಿ ಕೋಟೆರ ಕಿಶನ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ದಿನೇಶ್ ಚೋಡುಮಾಡ, ರೈತ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಅಲೆಮಾಡ, ಪೊನ್ನಂಪೇಟೆ ಗ್ರಾಮ ಪಂಚಾಯತ್ ಸದಸ್ಯ ಮಧು ಮೂಕೇಳೆರ ಹಾಜರಿದ್ದರು.









