
ಮಡಿಕೇರಿ ಜು.3 NEWS DESK : ಕೊಡಗಿನ ನಿವೃತ್ತ ಸೇನಾಧಿಕಾರಿಗಳು, ವಾಯು ಸೇನೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳ ನಿಯೋಗವು ಇಂದು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಮನವಿ ಸಲ್ಲಿಸಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಭೇಟಿಯಾದ ನಿಯೋಗದಲ್ಲಿ ಪದ್ಮಶ್ರೀ ಪುರಸ್ಕೃತ ಭಾರತ ಹಾಕಿ ತಂಡದ ಮಾಜಿ ನಾಯಕ ಡಾ. ಎಂಪಿ ಗಣೇಶ್, ಸೇನಾಧಿಕಾರಿ ನಿವೃತ್ತ ಬ್ರಿಗೇಡಿಯರ್ ಚೇನಂಡ ಚೀಯಣ್ಣ,ವಾಯು ಸೇನೆಯ ಅಧಿಕಾರಿಗಳು ನಿವೃತ್ತ ಏರ್ ಮಾರ್ಷಲ್ ಬಿ ಯು ಚಂಗಪ್ಪ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮಹಾವೀರ ಚಕ್ರ ಪುರಸ್ಕೃತ ಪಿ ಎಸ್ ಗಣಪತಿ, ನಿವೃತ್ತ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ಒಲಂಪಿಯನ್ ಸೋಮಯ್ಯ, ನಿವೃತ್ತ ಮೇಜರ್ ಜನರಲ್ ಬಾಚಮಾಂಡ ಕಾರ್ಯಪ್ಪ, ಬಾಳೇಯಡ ಸುಬ್ರಮಣಿ, ನಿವೃತ್ತ ಬ್ರಿಗೇಡಿಯರ್ ಮಾಳೇಟೀರ ಎ ದೇವಯ್ಯ, ನಿವೃತ್ತ ಕರ್ನಲ್ ಸಿಪಿ ಮುತ್ತಣ್ಣ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.









