
ಕುಶಾಲನಗರ NEWS DESK ಜು.6 : ಕುಶಾಲನಗರದ ಹೋಟೆಲ್, ರೆಸಾರ್ಟ್ ಮಾಲೀಕರು, ನಿರ್ದೇಶಕರು ಹಾಗೂ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ನ ಎಲ್ಲಾ ನಿರ್ದೇಶಕರಿಗೆ, ಸದಸ್ಯರಿಗೆ ಆತ್ಮೀಯ ಆಹ್ವಾನ. ಕುಶಾಲನಗರ ಪುರಸಭೆಯಿಂದ ಮನೆಗಳು, ಹೋಟೆಲ್‌ಗಳು ಹಾಗೂ ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ (UGD) ಸಂಪರ್ಕಕ್ಕಾಗಿ ಶುಲ್ಕ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ನಿಗದಿಪಡಿಸಿರುವ ಈ ಶುಲ್ಕವು ಅತ್ಯಂತ ಹೆಚ್ಚಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿಷಯದ ಕುರಿತು ಸಮಾಲೋಚನೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಒಮ್ಮತದ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಅಧಕ್ಷರಾದ ಶ್ರೀಯುತ ಕೆ.ಎಸ್.ನಾಗೇಶ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಸಭೆಯ ವಿವರಗಳು: ದಿನಾಂಕ: 08-07-2026, ಬುದುವಾರ ಸಮಯ: ಬೆಳಿಗ್ಗೆ 11:00 ಗಂಟೆಗೆ ಸ್ಥಳ: ಕನ್ನಿಕಾ ಇಂಟರ್‌ನ್ಯಾಷನಲ್, ಕುಶಾಲನಗರ, ಈ ಮಹತ್ವದ ಸಭೆಗೆ ತಮ್ಮ ಅಮೂಲ್ಯ ಸಮಯ ನೀಡಿ ತಪ್ಪದೇ ಆಗಮಿಸಿ, ತಮ್ಮ ಸಲಹೆ-ಸೂಚನೆಗಳನ್ನು ನೀಡಿ ಸಭೆಯ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಕೆ.ಎಸ್. ನಾಗೇಶ್, ಅಧ್ಯಕ್ಷರು, ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್, ಕುಶಾಲನಗರ








