Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*
  • *ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*
  • *VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*
  • *ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*
  • *ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*
  • *ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*
  • *ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅರೆಸೇನಾ ಪಡೆಯ ನಿವೃತ್ತ ಯೋಧರ ಕಡೆಗಣನೆ ಸರಿಯಲ್ಲ : ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟ ಬೇಸರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅರೆಸೇನಾ ಪಡೆಯ ನಿವೃತ್ತ ಯೋಧರ ಕಡೆಗಣನೆ ಸರಿಯಲ್ಲ : ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟ ಬೇಸರ*

ಜುಲೈ 13, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜು.13 : ದೇಶ ಸೇವೆ ಮಾಡಿ ತವರಿಗೆ ಮರಳಿದ ಅರೆಸೇನಾ ಪಡೆಯ ನಿವೃತ್ತ ಯೋಧರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಕೊಡಗು ಜಿಲ್ಲಾ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟ ಬೇಸರ ವ್ಯಕ್ತಪಡಿಸಿದೆ. ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದ 14ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಜಿ.ಯತೀಶ್ ಅವರು ಅರೆಸೇನಾ ಪಡೆಯ ನಿವೃತ್ತ ಯೋಧರಿಗೆ ನಿವೇಶನ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ದೇಶ ಸೇವೆ ಮಾಡಿದ ನಿವೃತ್ತ ಯೋಧರಿಗೆ ನ್ಯಾಯಯುತವಾಗಿ ಸಿಗಬೇಕಾದ ಭೂಮಿಯನ್ನು ಹಂಚಿಕೆ ಮಾಡದೆ ತೊಂದರೆ ನೀಡುತ್ತಿರುವುದು ವಿಪರ್ಯಾಸ. ಅರೆಸೇನಾಪಡೆಯ ಯೋಧರ ಸ್ಮಾರಕ ಭವನ, ಕ್ಯಾಂಟೀನ್ ವ್ಯವಸ್ಥೆ ಮತ್ತು ಕಚೇರಿಗಾಗಿ ಸ್ವಂತ ನಿವೇಶನದ ಅಗತ್ಯವಿದ್ದು, ಸರಕಾರ ಯಾವುದೇ ತಕರಾರಿಲ್ಲದೆ ಜಾಗ ಮಂಜೂರಾತಿ ಮಾಡಬೇಕೆಂದು ಮನವಿ ಮಾಡಿದರು. ನಿವೃತ್ತ ಯೋಧರಿಗೆ ಕೇಂದ್ರ ಸರಕಾರದ ಮೂಲಕ ದೊರೆಯುವ ಆರೋಗ್ಯ ಸೇವೆ ಮತ್ತು ವಿವಿಧ ಸೌಲಭ್ಯಗಳ ಕುರಿತು ಎಂ.ಜಿ.ಯತೀಶ್ ವಿವರಿಸಿದರು. ಕೊಡಗು ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಅರೆಸೇನಾಪಡೆಯ ಹಾಲಿ ಹಾಗೂ ಮಾಜಿ ಯೋಧರಿದ್ದಾರೆ. ಒಕ್ಕೂಟ ರಚನೆಯಾಗಿ 13 ವರ್ಷಗಳಾಗಿದ್ದರೂ 850 ಮಂದಿ ಮಾತ್ರ ಸದಸ್ಯತ್ವ ಪಡೆದಿದ್ದಾರೆ. ಸರ್ವರೂ ಸದಸ್ಯತ್ವ ಪಡೆದುಕೊಳ್ಳುವಂತೆ ಕೋರಿದರು. ಒಕ್ಕೂಟದ ಉಪಾಧ್ಯಕ್ಷ ಪುಲಿಯಂಡ ಎಂ.ಚAಗಪ್ಪ, ಪದಾಧಿಕಾರಿಗಳಾದ ಜಿ.ಕೆ.ದಿನೇಶ್ ಕುಮಾರ್ ಹಾಗೂ ನೂರೇರಾ ಎಂ.ಭೀಮಯ್ಯ ಅವರುಗಳು ಮಾತನಾಡಿ ನಿವೃತ್ತ ಯೋಧರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.  ಮಹಾಸಭೆಯಲ್ಲಿ ನಿವೃತ್ತ ಹಿರಿಯ ಯೋಧರಾದ ಬಿ.ಡಿ.ಗೋಪಾಲ, ಎಂ.ಎ.ಪೂಣಚ್ಚ, ಸಿ.ಜೆ.ಬೋಪಯ್ಯ, ಪಿ.ಎಂ.ಪೂವಯ್ಯ ಹಾಗೂ ಎಂ.ಕೆ.ಅಪ್ಪಯ್ಯ ಅವರುಗಳÀನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಮಾಜಿ ಯೋಧ ಮರ್ವಿನ್ ಕೊರಿಯಾ ಅವರು ರೂ.60 ಸಾವಿರ ಮೌಲ್ಯದ ಗಣಕ ಯಂತ್ರವನ್ನು ಉಚಿತವಾಗಿ ಒಕ್ಕೂಟಕ್ಕೆ ನೀಡಿದರು. ಒಕ್ಕೂಟದ ನೂತನ ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಗೌಡ ಅವರು ಅವಿರೋಧವಾಗಿ ಆಯ್ಕೆಯಾದರು. ಪುಟ್ಟೇಗೌಡ, ಮನೋಹರ, ಲೋಕೇಶ್, ತಿಮ್ಮಯ್ಯ, ಹರೀಶ್ ಕುಮಾರ್ ಗೌಡ, ನಳಿನಿ, ಗೋಪಾಲಕೃಷ್ಣ, ಅಶೋಕ್, ಕಾರ್ಯಪ್ಪ, ಪಿ.ಎಂ.ಲೋಕೇಶ್, ಕುದುಪಜೆ ಚಂದ್ರೇಶ್ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ನಿರ್ದೇಶಕ ಬಿ.ಎನ್.ರಾಜಶೇಖರ್ ಸ್ವಾಗತಿಸಿ, ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಬಿ.ಎಂ.ರವೀoದ್ರ ಲೆಕ್ಕ ಪರಿಶೋಧನೆಯ ವರದಿ ಮಂಡಿಸಿದರು. ತಂಗಮ್ಮ ನಿರೂಪಿಸಿ, ನಿರ್ದೇಶಕಿ ಎಸ್.ಎಸ್.ಲೀಲಾವೇಣಿ ವಂದಿಸಿದರು. ಮೃತಪಟ್ಟ ಒಕ್ಕೂಟದ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*

ಆಗಷ್ಟ್ 27, 2026

*ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026

*ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.27: ಮಾನ್ಯ ಶಾಸಕರ ತಂದೆಯವರಾದ ದಿವಂಗತ ಶ್ರೀ ಎ.ಕೆ ಸುಬ್ಬಯ್ಯರವರ ಪುಣ್ಯ ಸ್ಮರಣೆಯ ದಿನದಂದು, ದಿವಂಗತರ…

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026

*VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*

ಆಗಷ್ಟ್ 27, 2026

*ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*

ಆಗಷ್ಟ್ 27, 2026

*ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*

ಆಗಷ್ಟ್ 27, 2026

*ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*

ಆಗಷ್ಟ್ 27, 2026

*ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*

ಆಗಷ್ಟ್ 27, 2026

*ಕಸ್ತೂರಿರಂಗನ್ ವರದಿ ಸಂವಾದ : ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್ ಅಭಯ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.