ಮಡಿಕೇರಿ, NEWS DESK ಆ.27: ಮಾನ್ಯ ಶಾಸಕರ ತಂದೆಯವರಾದ ದಿವಂಗತ ಶ್ರೀ ಎ.ಕೆ ಸುಬ್ಬಯ್ಯರವರ ಪುಣ್ಯ ಸ್ಮರಣೆಯ ದಿನದಂದು, ದಿವಂಗತರ ಸಮಾಧಿಗೆ ತೆರಳಿದ ವಿರಾಜಪೇಟೆ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ಪೂಜ್ಯನೀಯರ ಸಮಾಧಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಬಳಿಕ ತಮ್ಮ ಪೂಜನೀಯ ತಾಯಿಯವರ ಸಮಾಧಿಗೂ ಪುಷ್ಪ ನಮನ ಸಲ್ಲಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಹಿರಿಯ ಸಹೋದರರಾದ ಶ್ರೀ ಎ.ಎಸ್ ನರೇನ್ ಕಾರ್ಯಪ್ಪ, ಶಾಸಕರ ದೊಡ್ಡಮ್ಮ ಮಾಚಮಾಡ ಗಂಗಮ್ಮ, ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ಪೊನ್ನಪ್ಪ, ಆದಿತ್ಯ ಪೆಮ್ಮಯ್ಯ, ಬಾಳೇಯಡ ಕರುಣ್ ಕಾಳಪ್ಪ, ಮಾನ್ಯ ಶಾಸಕರ ಸಿಬ್ಬಂದಿ ವರ್ಗದವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.








