
ಮಡಿಕೇರಿ NEWS DESK ಜು.21 : ಇದೇ ಜು.29 ರಿಂದ 31 ರ ವರೆಗೆ ನೇಪಾಳದ ಕಾಟ್ಮಂಡ್ ನಲ್ಲಿ ನಡೆಯುವ ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ಕರ್ನಾಟಕ ರಾಜ್ಯದಿಂದ 21 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ನ ಪ್ರಧಾನÀ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಿಂದ ಮಿಥಶ್ ಜೆ., ರೀತನ್ ಡಿ.ಎಸ್,, ಅಜಯ್ ಎನ್.ಎಸ್., ಶ್ರಿಯಾನ್ ಗೌಡ, ಯಾಸಿನ್, ಹಫೀಸ್, ಕೌಶಿಕ್ ಕುಮಾರ್ ಯು.ಸಿ., ಮನ್ಸಿತ್ ಮೋಹನ್ ಹಾಗೂ ಸ್ವಾತಿಕ್ ಬಿ.ಎಸ್ ಆಯ್ಕೆಯಾಗಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.








