ಮಡಿಕೇರಿ, ನ.2 NEWS DESK : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತಿ ವರ್ಷದ ರೂಢಿ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ “ವಿಷ್ಣುಮೂರ್ತಿ ಕೋಲ” (ಚಾಮುಂಡಿ ಉತ್ಸವ)ವು ನ.6 ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು “ವಿಷ್ಣುಮೂರ್ತಿ ಕೋಲ”ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪ್ರಥ್ಯೂ ಬಿ.ಎನ್. ಅವರು ಕೋರಿದ್ದಾರೆ.

















