ವಿರಾಜಪೇಟೆ ನ.2 NEWS DESK : ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಕರ್ನಾಟಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ. ಬೆಲ್ಲು ಬೋಪಯ್ಯ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಪ್ರಮುಖ ಜವಾಬ್ದಾರಿಯಾಗಿದೆ. ಗಡಿಭಾಗದಲ್ಲಿಯೂ ಕನ್ನಡದ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ನಿರಂತರವಾಗಿ ಶ್ರಮಿಸುತ್ತಿದೆ. ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡಪರ ಚಟುವಟಿಕೆಗಳನ್ನು ಮುನ್ನಡೆಸುವ ಮೂಲಕ ಭಾಷೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಚೇನಂಡ ಈ. ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡಿಯೋಳಂದ ಕುಸುಮ ಸೋಮಣ್ಣ, ಕೋಶಾಧಿಕಾರಿ ಕೋಟೇರ ಯು. ಗಣೇಶ್ ತಮ್ಮಯ್ಯ ಹಾಗೂ ನಿರ್ದೇಶಕರಾದ ಚಿಲ್ಲವಂಡ ಪಿ. ಕಾವೇರಪ್ಪ, ಚೇನಂಡ ಎಂ. ಸುರೇಶ್ ನಾಣಯ್ಯ, ಪುಗ್ಗೇರ ಎಸ್. ನಂದ, ಮುಂಡಂಡ ರಾಣಿ ಮಂದಣ್ಣ, ಬಿ.ಎಂ. ಸುರೇಶ್, ಬಾಚೀರ ಗಣೇಶ್ ಬಿದ್ದಪ್ಪ, ಕಂಜಿತಂಡ ಎಂ. ಮೊಣ್ಣಪ್ಪ (ಗಿಣಿ), ಮೂಕಚಂಡ ಬಿ. ದೇವಯ್ಯ (ಚುಮ್ಮಿ), ಚಾರಿಮಂಡ ಯು. ಶರಣು ನಂಜಪ್ಪ, ಬಲ್ಲಡಿಚಂಡ ಜಿ. ವಿಜು ಕುಶಾಲಪ್ಪ ಮತ್ತು ಪೋರೇರ ಎಂ. ಬಿದ್ದಪ್ಪ, ಕಚೇರಿ ಸಿಬ್ಬಂದಿ ಪವಿತ್ರ ಉಪಸ್ಥಿತರಿದ್ದರು.


















