ಮಡಿಕೇರಿ, NEWS DESK ಆ.25: ಪ್ರತಿಯೊಬ್ಬರೂ ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನ ಮಾಡಬೇಕು ಎಂದು ಪೊನ್ನಂಪೇಟೆ ಶ್ರೀ ರಾಮ ಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾ ನಂದ ಮಹಾರಾಜ್ ಅವರು ಕರೆ ನೀಡಿದರು.
ವಿಶ್ವ ವೇದಾಂತ ವೇದಿಕೆ ಅಧ್ಯಕ್ಷ ಸ್ವಾಮಿ ಸೋಮನಾಥಾನಂದಪುರಿ ಅವರು ರಚಿಸಿರುವ ಓಂಕಾರ ಲೋಕ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಪೊನ್ನಂಪೇಟೆ ಆಶ್ರಯದಲ್ಲಿ ಇಂದು ಪುಸ್ತಕ ಬಿಡುಗಡೆ ಮಾಡಿ ಆಶೀರ್ವಚನ ನೀಡಿದ ಸ್ವಾಮೀಜಿ ಈ ಕಾಲಘಟ್ಟದಲ್ಲಿ ಎಲ್ಲರೂ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ದಿಸೆಯಲ್ಲಿ ಸ್ವಾಮಿ ಸೋಮನಾಥಾನಂದ ಪುರಿ ಅವರು ಬರೆದಿರುವ ಓಂಕಾರ ಲೋಕ ಕೃತಿಯನ್ನು ಸಾಕಷ್ಟು ಪ್ರಮುಖ ವಿಷಯಗಳನ್ನು ಸಂಗ್ರಹಿಸಿ ರಚಿಸಿರುವುದು ಶ್ಲಾಘನೀಯ ಎಂದು ನುಡಿದರು.
ಇದೊಂದು ಉತ್ತಮ ವಿಷಯಗಳ ಸಂಗ್ರಹ ಯೋಗ್ಯ ಕೃತಿ ಎಂದು ಪರಹಿತಾನಂದಜೀ ಪ್ರಶಂಸೆಯ ನುಡಿ ಆಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕ್ ಹಾಗೂ ವನವಾಸಿ ಕಲ್ಯಾಣ ಆಶ್ರಯದ ರಾಜ್ಯ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಅವರು ಆಶಯ ನುಡಿ ಯೊಂದಿಗೆ ಸೋಮವಾರ ನಂದ ಪುರಿ ಅವರು ಪೂರ್ವಾಶ್ರಮದಲ್ಲಿ ಓರ್ವ ಸ್ವಯಂಸೇವಕ ಆಗಿ ಪ್ರಸ್ತುತ ಸ್ವಾಮೀಜಿ ಮುಖ್ಯ ಕೆಲಸ ಮಾಡಲು ಮೂಂದಾಗಿರುವದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ
ಮಾತಂಡ ಟಾಟಾ ಬೋಪಯ್ಯ ಅವರು ಈ ವೇಳೆ ಶುಭ ಹಾರೈಸಿ ಮಾತನಾಡಿ ಚಿ. ನಾ ಸೋಮೇಶ್ ಅವರು ಕೊಡಗು ವಿಹಿಂಪ ಕಾರ್ಯದರ್ಶಿ ಆಗಿ ಸಂಘಟನೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿ ಜನತೆಯ ಪ್ರೀತಿ ಪಾತ್ರರಾಗಿದ್ದಾರೆ. ಈಗ ಓರ್ವ ಸ್ವಾಮೀಜಿ ಆಗಿ ನಮ್ಮ ಸಮಾಜದಲ್ಲಿ ಯುವ ಪೀಳಿಗೆಗೆ ಸ್ಪೂರ್ತಿ ಆಗಿದ್ದಾರೆ ಎಂದು ಮುಕ್ತ ಅನಿಸಿಕೆ ವ್ಯಕ್ತಪಡಿಸಿದರು. ಈಗ ಓಂಕಾರ ಲೋಕ ಸೇರಿದಂತೆ ಈಗಾಗಲೇ 9 ಕೃತಿಗಳನ್ನು ಬಿಡುಗಡೆ ಮಾಡಿ ಓದುಗರ ಮನ್ನಣೆ ಪಡೆದಿದ್ದಾರೆ ಎಂದು ನೆನಪಿಸಿಕೊಂಡರು.
ಈ ವೇಳೆ ಸ್ವಾಮಿ ಸೋಮನಾಥಾನಂದಪುರಿ, ಆಶ್ರಮದ ಸ್ವಾಮಿ ಮಹಾ ಪ್ರೇಮಾನಂದರು ಹಾಗೂ ಉದ್ಯಮಿ ಸುರೇಶ್ ಬಾಬು ಎಂ. ಬಿ. ಪುನೀತ್ ಚಂಗಪ್ಪ ಸೇರಿದಂತೆ ಶ್ರೀ ಮಠದ ಅನುಯಾಯಿಗಳು ಉಪಸ್ಥಿತರಿದ್ದರು.








