ಕುಶಾಲನಗರ, NEWS DESK ಆ.25 : ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು
ದುಬಾರೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ ಸೇರಿದಂತೆ 5 ಆನೆಗಳು ತೆರಳಿದವು.
ಶಿಬಿರದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿ ನಂತರ ಅಧಿಕಾರಿ ಸಿಬ್ಬಂದಿಗಳು ಆನೆಗಳನ್ನು ಬೀಳ್ಕೊಟ್ಟರು.
ಈ 5 ಆನೆಗಳು ಕಳೆದ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದವು.
ಮೈಸೂರಿನಿಂದ ಬಂದ ಲಾರಿಗಳಲ್ಲಿ ಆನೆಗಳೊಂದಿಗೆ ಅವುಗಳ ಮಾವುತ ಕಾವಾಡಿಗರು ಮತ್ತು ಕುಟುಂಬ ಸದಸ್ಯರು ತೆರಳಿದರು.








