
ಮಡಿಕೇರಿ NEWS DESK ಆ.27 : ರೌಳತುಲ್ ಉಲೂಮ್ ದರ್ಸ್ ಸಂಘಟನೆಯ ಲಿವಾವ್ ಶರಿಯಾ ಸ್ಟುಡೆಂಟ್ ಅಸೋಸಿಯೇಷನ್ ವತಿಯಿಂದ ಸೆ.3ರಂದು ಬೆಳಿಗ್ಗೆ 10 ಗಂಟೆಯಿ0ದ ರಾತ್ರಿ 10ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಕೋಶಾಧಿಕಾರಿ ರಶೀದ್ ಮುಸ್ಲಿಯಾರ್ ಪಯ್ಯಡಿ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 10 ಗಂಟೆಗೆ ದರ್ಸ್ ವಿದ್ಯಾರ್ಥಿಗಳಿಂದ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7 ಗಂಟೆಗೆ ಬೃಹತ್ ಮೌಲಿದ್ ಮಜ್ಲಿಸ್ ಹಾಗೂ ದುಆ ಮಜ್ಲಿಸ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹಲವು ಸಾದಾತ್, ಉಲಮಾ, ಉಮರಾ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ದಾರಿ ತಪ್ಪುತ್ತಿರುವ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಮಹಿಳೆಯರಿಗಾಗಿ ಎಲ್ಸಿಡಿ ವ್ಯವಸ್ಥೆಯೊಂದಿಗೆ ಪ್ರತ್ಯೇಕ ಸ್ಥಳದ ಸೌಕರ್ಯ ಕಲ್ಪಿಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಖ್ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಸೈಖುನಾ ಇಂಬಿಚಿ ಕೊಯ ಅಲ್ ಮಶ್ಹೂರ್ ವಳವಟ್ಟಣಮ್, ಸೈಖುನಾ ಅಬೂ ಹನೀಫಲ್ ಫೈಝಿ ತೆನ್ನಲ, ಸೈಖುನಾ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮಾರಾಯಮಂಗಳಮ್, ಸೈಖುನಾ ಇಝ್ಝುದ್ದೀನ್ ಸಖಾಫಿ ಕೊಲ್ಲಂ, ಸೈಖುನಾ ಹಸ್ಸನ್ ಭಾಖವಿ ಪಲ್ಲಾರ್, ಸೈಖುನಾ ಬೀರಾನ್ ಕುಟ್ಟಿ ಮುಸ್ಲಿಯಾರ್, ಉಸ್ತಾದ್ ಹಂಸ ಸಖಾಫಿ, ಉಸ್ತಾದ್ ಸ್ವಾಲಿಹ್ ಅಹ್ಸನಿ, ಉಸ್ತಾದ್ ಅಬ್ದುಲ್ ರಸಾಖ್ ಫೈಝಿ, ಉಸ್ತಾದ್ ಯೂಸುಫ್ ಭಾಖವಿ, ಉಸ್ತಾದ್ ಅಬ್ದುಲ್ಲ ಖಾಸಿಮಿ ಉಸ್ತಾದ್ ಹುಸೈನ್ ಮುಸ್ಲಿಯಾರ್, ಉಸ್ತಾದ್ ಹುಸೈನ್ ಸಖಾಫಿ ಎರುಮಾಡ್, ಉಸ್ತಾದ್ ಅಶ್ರಫ್ ಅಹ್ಸನಿ ಅನ್ವಾರ್, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮಾಂಡೂರ್, ಇಸ್ಮಾಯಿಲ್ ಸಖಾಫಿ ಮರ್ಕಜ್, ಅಶ್ರಫ್ ಸಹದಿ ಕಕ್ಕಡಿಪ್ಪುರಂ, ಅಬ್ದುಲ್ ಸಲಾಂ ಸಹದಿ ಕಕ್ಕಡಿಪ್ಪುರಂ, ಸಯ್ಯಿದ್ ಅಲವಿ ನಿಜಾಮಿ ಆಲೂರ್, ಪಯ್ನರಿ ಕುಂಜಿಲ ಜಮಾಅತ್ ಅಧ್ಯಕ್ಷ ಸಫಾ ಮುಹಮ್ಮದ್, ದರ್ಸ್ ಕುಂಜಿಲ ಅಧ್ಯಕ್ಷ ಹಾರಿಸ್ ಝೈನಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ರಶೀದ್ ಮುಸ್ಲಿಯಾರ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ದರ್ಸ್ ಕಾರ್ಯದರ್ಶಿ ಸಾಜಿದ್ ಪಯ್ಯಡಿ, ಜಲಾಲಿಯ್ಯ ಅಧ್ಯಕ್ಷ ರಶೀದ್ ಮಕ್ಕಿ, ಸದಸ್ಯರಾದ ಮಜೀದ್ ಎಡೆಕೀರ, ರಾಶಿದ್ ಪಯ್ಯಡಿ ಹಾಗೂ ದರ್ಸ್ ವಿದ್ಯಾರ್ಥಿ ಆಶೀರ್ ಉಪಸ್ಥಿತರಿದ್ದರು.










