ಮಡಿಕೇರಿ, NEWS DESK ಆ.27 – ನಗರದ ಶ್ರುತಿ-ಲಯ ತಂಡದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸಹಯೋಗದೊಂದಿಗೆ ವಿಶ್ವ ಸಂಗೀತ ದಿನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆಯ ಪ್ರಯುಕ್ತ ಆ.30 ರಂದು ಭಾನುವಾರ ದಾಸರ ಕೀರ್ತನೆ ಗಾಯನ ಕಾರ್ಯಕ್ರಮ ಆಯೋಜಿತವಾಗಿದೆ.
ನಗರದ ,ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪ ದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ದಾಸರ ಕೀತ೯ನೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಡಿಕೇರಿಯ ವೈದ್ಯಸಾಹಿತಿ ಡಾ. ನಡಿಬೈಲು ಉಯಶಂಕರ್ , ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್. ಟಿ., ಶೖತಿಲಯ ತಂಡದ ಪ್ರಧಾನ ಕಾಯ೯ದಶಿ೯ ಗೀತಾ ಎಸ್.ಸಂಪತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ೆ ಎಂದು ಶೖತಿಲಯ ತಂಡದ ಅಧ್ಯಕ್ಷೆ ವೀಣಾ ಎಸ್. ಹೊಳ್ಳ ಮಾಹಿತಿ ನೀಡಿದ್ದಾರೆ.
ದಾಸರ ಕೀತ೯ನೆಯಲ್ಲಿ ಪಾಲ್ಗೊಳ್ಳುವ ತಂಡಗಳು – ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು. ಜಯಲಕ್ಷ್ಮಿ ಕೆ ಮತ್ತು ತಂಡ. ಮಡಿಕೇರಿ., ಆರ್ಯ ವೈಷ್ಯ ಭಜನಾ ತಂಡ, ಕುಶಾಲನಗರ, ವಿಜಯ ವಿನಾಯಕ ತಂಡ, ಮಡಿಕೇರಿ. ದೇವರಕೊಲ್ಲಿ ಭಜನಾ ತಂಡ, ಭಗವತಿ ವಿಪ್ರ ಮಹಿಳಾ ಸಂಘ, ಗೋಣಿಕೊಪ್ಪ, ಮೇಘಾ ಭಟ್ ಮತ್ತು ತಂಡ, ಮಡಿಕೇರಿ. ಕೋದಂಡ ರಾಮ ಭಜನಾ ತಂಡ. ಮಡಿಕೇರಿ , ಪ್ರಜ್ಞಾ ಕಲಾ ಕೇಂದ್ರ ಮಡಿಕೇರಿ, ಶ್ರೀ ವತ್ಸ ಸಂಘ, ಮಡಿಕೇರಿ, ಕನ್ನಿಕಾ ಪರಮೇಶ್ವರಿ ತಂಡ ಮಡಿಕೇರಿ., ನೃತ್ಯ ಭಜನೆ ತಂಡ ಉಡುವತ್ ಮೊಟ್ಟೆ (ಎ ), ನೃತ್ಯ ಭಜನೆ ತಂಡಉಡುವತ್ ಮೊಟ್ಟೆ(ಬಿ ), ರಾಮಾಂಜನೇಯ ಭಜನಾ ಮಂಡಳಿ ಮಹಿಳೆಯರ ತಂಡ , ರಾಮಾಂಜನೇಯ ಭಜನಾ ಪುರುಷರ ತಂಡ. ಮಡಿಕೇರಿ.







