Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*
  • *ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*
  • *VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*
  • *ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*
  • *ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*
  • *ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*
  • *ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*

ಆಗಷ್ಟ್ 27, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಆ.27 : ಗ್ರಾಮೀಣ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಆತಂಕವನ್ನು ಸೃಷ್ಟಿಸಿರುವ ಕಸ್ತೂರಿ ರಂಗನ್ ವರದಿ ಇದೀಗ ಮಡಿಕೇರಿ ನಗರಸಭೆಯನ್ನು ಕೂಡ ಕಾಡಿದೆ. ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಪಿ. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು.

ಕಸ ವಿಲೇವಾರಿಗಾಗಿ 2ನೇ ಮೊಣ್ಣಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಿರುವ 10 ಎಕರೆ ಪ್ರದೇಶವು ಕಸ್ತೂರಿ ರಂಗನ್ ವರದಿಯಲ್ಲಿ ಸೇರ್ಪಡೆಗೊಂಡಿರುವುದರಿಂದ ನಗರಸಭೆ ಪರ್ಯಾಯ ಜಾಗದಲ್ಲಿ ಕಸ ವಿಲೇವಾರಿಗೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ನಗರಸಭೆಯ ವಿರೋಧ ಪಕ್ಷದ ನಾಯಕ ಅಮಿನ್ ಮೊಹಿಸಿನ್ ಮಾತನಾಡಿ, 2ನೇ ಮೊಣ್ಣಂಗೇರಿಯಲ್ಲಿ ಕಸ ವಿಲೇವಾರಿ ಘಟಕಕ್ಕಾಗಿ ಗುರುತಿಸಲಾಗಿದ್ದ 10 ಎಕರೆ ಜಾಗಕ್ಕೆ ಈಗಾಗಲೇ ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಆದರೆ ಇದೀಗ ಆ ಜಾಗವನ್ನು ಕೈಬಿಟ್ಟು ಕಾಟಗೇರಿಯಲ್ಲಿ 5 ಎಕರೆ ಜಾಗ ಗುರುತಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಕಾಳಚಂಡ ಅಪ್ಪಣ್ಣ ಮಾತನಾಡಿ, 2ನೇ ಮೊಣ್ಣಂಗೇರಿ ಜಾಗಕ್ಕೆ ಬದಲಿಯಾಗಿ ಕಾಟಗೇರಿಯಲ್ಲಿ 5 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ್ದಾರೆ. ಆದರೆ ಕಸ ವಿಲೇವಾರಿಗೆ ಅಗತ್ಯವಿರುವಷ್ಟು ಸಮತಟ್ಟಾದ ಪ್ರದೇಶ ಅಲ್ಲಿ ಲಭ್ಯವಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, 2ನೇ ಮೊಣ್ಣಂಗೇರಿಯಲ್ಲಿ ಈಗಾಗಲೇ ಗುರುತಿಸಿರುವ 10 ಎಕರೆ ಜಾಗವನ್ನು ನಗರಸಭೆಗೆ ಒದಗಿಸಲು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ, 3 ಎಕರೆ ಜಾಗದ ಆರ್‌ಟಿಸಿಯೂ ನಗರಸಭೆಗೆ ದೊರೆತಿದೆ. ಹೀಗಾಗಿ ಅದೇ ಜಾಗವನ್ನು ಕಸ ವಿಲೇವಾರಿಗೆ ಬಳಸಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ನಗರಸಭಾ ಆಯುಕ್ತ ಹೆಚ್. ಆರ್. ರಮೇಶ್ ಮಾತನಾಡಿ, ಪ್ರಸ್ತುತ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಕಸವನ್ನು ವಿಲೇವಾರಿ ಮಾಡಲು ಸ್ವಲ್ಪವೂ ಜಾಗವಿಲ್ಲ. ಆದ್ದರಿಂದ ಅಗತ್ಯ ಜಾಗವನ್ನು ಪಡೆಯಲು ಸರ್ವ ಸದಸ್ಯರ ಸಭೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಗರಸಭಾ ಇಂಜಿನಿಯರ್ ಮಾಹಿತಿ ನೀಡಿ, 2ನೇ ಮೊಣ್ಣಂಗೇರಿ ಗ್ರಾಮವು ಕಸ್ತೂರಿ ರಂಗನ್ ವರದಿಯ ಸೂಕ್ಷ್ಮ ಪರಿಸರ ವಲಯದ ಗ್ರಾಮಗಳ ಪಟ್ಟಿಯಲ್ಲಿ ಬರುವುದರಿಂದ ಪರಿಸರ ಇಲಾಖೆಯ ಒಪ್ಪಿಗೆ ಪಡೆಯುವುದು ಕಠಿಣವಾಗಲಿದೆ ಎಂದರು.

ಸುದೀರ್ಘ ಚರ್ಚೆಯ ನಂತರ ಸಮಸ್ಯೆ ಬಗೆಹರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಅರಣ್ಯ ಸಚಿವರನ್ನು ಭೇಟಿಯಾಗಲು ಸಭೆ ನಿರ್ಧರಿಸಿತು.

ಎಸ್‌ಡಿಪಿಐ ಅಸಮಾಧಾನ

“ಅಧ್ಯಕ್ಷರೇ–ಉಪಾಧ್ಯಕ್ಷರೇ, ಕುರ್ಚಿ ಬಿಟ್ಟು ತೊಲಗಿ” ಎಂಬ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಸದಸ್ಯರು ಬಿಜೆಪಿ ನೇತೃತ್ವದ ನಗರಸಭೆಯ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ನಗರಸಭೆಯ ಆಡಳಿತಾವಧಿ ಅ. 28ರಂದು ಮುಕ್ತಾಯಗೊಳ್ಳಲಿದ್ದು, ಇಷ್ಟು ವರ್ಷ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಇನ್ನೊಂದು ತಿಂಗಳಲ್ಲಿ ಹೇಗೆ ಪೂರ್ಣಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.

ಎಸ್‌ಡಿಪಿಐ ಸದಸ್ಯರಾದ ಮನ್ಸೂರ್, ನೀಮಾ ಅರ್ಷದ್, ಮೇರಿ ವೆಗಾಸ್ ಹಾಗೂ ಬಷೀರ್ ಅಹಮದ್ ಅವರು ಪ್ರತಿಭಟನೆ ನಡೆಸಿದರು.

ಸಭೆ ಸಮರ್ಪಕವಾಗಿ ನಡೆಯದಿರುವುದಕ್ಕೆ ಎಸ್‌ಡಿಪಿಐ ಸದಸ್ಯರೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಹಾಗೂ ನಾಮನಿರ್ದೇಶಿತ ಸದಸ್ಯರು ಸಭಾತ್ಯಾಗ ಮಾಡಿದರು.

ಉಪಾಧ್ಯಕ್ಷ ಮಹೇಶ್ ಜೈನಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*

ಆಗಷ್ಟ್ 27, 2026

*ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026

*ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.27: ಮಾನ್ಯ ಶಾಸಕರ ತಂದೆಯವರಾದ ದಿವಂಗತ ಶ್ರೀ ಎ.ಕೆ ಸುಬ್ಬಯ್ಯರವರ ಪುಣ್ಯ ಸ್ಮರಣೆಯ ದಿನದಂದು, ದಿವಂಗತರ…

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026

*VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*

ಆಗಷ್ಟ್ 27, 2026

*ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*

ಆಗಷ್ಟ್ 27, 2026

*ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*

ಆಗಷ್ಟ್ 27, 2026

*ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*

ಆಗಷ್ಟ್ 27, 2026

*ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*

ಆಗಷ್ಟ್ 27, 2026

*ಕಸ್ತೂರಿರಂಗನ್ ವರದಿ ಸಂವಾದ : ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್ ಅಭಯ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.