ಸುಂಟಿಕೊಪ್ಪ, NEWS DESK ಆ.31: ಸುಂಟಿಕೊಪ್ಪ ಮಾಲಯಾಳಿ ಸಮಾಜದ 2026-27ನೇ ಸಾಲಿನ ಅಧ್ಯಕ್ಷರಾಗಿ ಕೆ.ಕೆ. ವಾಸುದೇವ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ. ಕಮಲಾಸನ್ ಆಯ್ಕೆಯಾಗಿದ್ದಾರೆ.
ಭಾನುವಾರ ಶ್ರೀ ಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ವಿ.ಕೆ. ರಾಜು, ಸಹ ಕಾರ್ಯದರ್ಶಿಗಳಾಗಿ ವೇಲಾಯುಧನ್, ಶಶಿಕುಮಾರ್ ಹಾಗೂ ಟಿ.ಕೆ. ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ಕೆ. ಕನೀಷ್ ಕುಮಾರ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಕೆ.ಪಿ. ವಿನೋದ್, ಭಾಸ್ಕರನ್, ವಿ.ಎ. ಸಂತೋಷ್ ಕುಮಾರ್, ರಮೇಶ್ ಪಿಳ್ಳೆ ಹಾಗೂ ಪಿ.ಸಿ. ಮೋಹನ್ ಅವರನ್ನು ಆಯ್ಕೆ ಮಾಡಲಾಯಿತು. ಕ್ರೀಡಾ ಕಾರ್ಯದರ್ಶಿಯಾಗಿ ಪಿ.ಸಿ. ಸುರೇಶ್ ಆಯ್ಕೆಯಾಗಿದ್ದಾರೆ.
ಮಹಿಳಾ ವಿಭಾಗದ ಅಧ್ಯಕ್ಷರಾಗಿ ವಿ. ಶೈಜಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುಧಾ ಆಯ್ಕೆಯಾಗಿದ್ದು, ಸದಸ್ಯರಾಗಿ ತುಳಸಿ, ಶೋಭಾ, ಅಕ್ಷತಾ, ಸುಜಿತಾ, ಚಂದ್ರಿಕಾ, ರಂಜಿನಿ, ಗೀತಾದೇವಿ, ಕವಿತಾ, ಪ್ರಭಾಕರ್, ಮಂಜುಳಾ ಸುಕುಮಾರ್, ಸುಜಾತ, ಶ್ಯಾಮಲ ಹಾಗೂ ಸ್ವರ್ಣ ಅವರನ್ನು ಆಯ್ಕೆ ಮಾಡಲಾಯಿತು.








