ನಾಪೋಕ್ಲು, NEWS DESK ಸೆ.28: ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) 2026-27ನೇ ಸಾಲಿನ ಘಟಕದ ಉದ್ಘಾಟನೆ ಹಾಗೂ ‘ಕಾವೇರಿ ದರ್ಶಿನಿ’ ವಾರ್ಷಿಕ ಸಂಚಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ, ಕೊಡಗು ಸಪೋರ್ಟ್ ಹೋಪ್ ಫಂಡ್ ಸೇವಾ ಆ್ಯಪ್‌ನ ಸ್ಥಾಪಕರಾದ ನಾಪೋಕ್ಲುವಿನ ನಿವಾಸಿ ಕೇಳೇಟಿರ ದೀಪು ದೇವಯ್ಯ ಅವರ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾವೇರಿ ಎಜುಕೇಶನ್ ಸೊಸೈಟಿಯ ಖಜಾಂಚಿ ಸಿ.ಡಿ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ. ಕಾವೇರಪ್ಪ, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್. ಮಾದಯ್ಯ, ವಾರ್ಷಿಕ ಸಂಚಿಕೆಯ ಸಂಚಾಲಕರಾದ ಮತಿ ಪಿ.ಸಿ. ಮೀನಾಕ್ಷಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಯಾದ ವಿಪ್ರಾ ನೀಲಮ್ಮ ಹಾಗೂ ಚೇತನ್ ಚಿನ್ನಪ್ಪ ಉಪಸ್ಥಿತರಿದ್ದರು.
ಶ್ರೇಯಾ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು. ಉಪನ್ಯಾಸಕಿ ಜಶ್ಮಿ ಕೆ.ಎ. ಹಾಗೂ ವಿದ್ಯಾರ್ಥಿನಿ ಫಿಧಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಕರೀಷ್ಮಾ ಸುಧೀರ್ ವಂದಿಸಿದರು.
ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದುಗ್ಗಳ ಸದಾನಂದ








