ಮಡಿಕೇರಿ, NEWS DESK ಅ.2: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಮೂರನೇ ವರ್ಷದ ಕಾಫಿ ದಸರಾ ಆಯೋಜಿಸಲಾಗುತ್ತಿದ್ದು, ಇದರ ಅಂಗವಾಗಿ ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಅಕ್ಟೋಬರ್ 14ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ‘ಫ್ಲೇವರ್ಸ್ ಆಫ್ ಕಾಫಿ’ ಹೆಸರಿನಲ್ಲಿ ಖಾದ್ಯ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಯಲ್ಲಿ ಕಾಫಿ ಫ್ಲೇವರ್ ಕೇಕ್, ಕಾಫಿ ಫ್ಲೇವರ್ ಕಪ್ ಕೇಕ್, ಕಾಫಿ ಫ್ಲೇವರ್ ಬ್ರೌನಿ, ಕಾಫಿ ಫ್ಲೇವರ್ ಚಾಕೊಲೇಟ್, ಪುಡ್ಡಿಂಗ್, ಕಾಫಿ ಫ್ಲೇವರ್ ಪಾನೀಯ ಹಾಗೂ ಕಾಫಿ ಫ್ಲೇವರ್ನಲ್ಲಿ ಹೊಸ ಪ್ರಯತ್ನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.
ಆಸಕ್ತ ಸ್ಪರ್ಧಿಗಳು ಅಕ್ಟೋಬರ್ 10ರೊಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೇಪಾಡಂಡ ಸವಿತಾ ಕೀರ್ತನ್ – 6366 462413 ಅವರನ್ನು ಸಂಪರ್ಕಿಸಬಹುದು.








