ಮಡಿಕೇರಿ, NEWS DESK ನ.20: ಎರಡನೇ ಮೊಣ್ಣಂಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಸಿಂಚನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮದೆನಾಡು ಗ್ರಾಮದ ಯುವ ಯೋಗ ಸಾಧಕಿ ಸಿಂಚನಾ ಅವರು ವಿವಿಧ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಹಾಗೂ ಸಹಶಿಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸಿದರು. ಸಿಂಚನಾ ಅವರ ಪೋಷಕರಾದ ಕೀರ್ತಿ ಕುಮಾರ್ ಮತ್ತು ರೇಣುಕಾ ಉಪಸ್ಥಿತರಿದ್ದರು.
















