Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಸುಂಟಿಕೊಪ್ಪದಲ್ಲಿ ನವರಾತ್ರಿ ಉತ್ಸವದ ಸಂಭ್ರಮ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಸುಂಟಿಕೊಪ್ಪದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

ಅಕ್ಟೋಬರ್ 11, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಸುಂಟಿಕೊಪ್ಪ, NEWS DESK ಅ.10: ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಸುಂಟಿಕೊಪ್ಪದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೊಡಗರಹಳ್ಳಿಯಲ್ಲಿ ನವರಾತ್ರಿ ಪೂಜೆ

ಕೊಡಗರಹಳ್ಳಿಯ ಶ್ರೀ ಭೈತೊರಪ್ಪ ಪೊವ್ವದಿ ಬಸವೇಶ್ವರ ದೇವಸ್ಥಾನದಲ್ಲಿ ಅ.11ರಿಂದ 19ರವರೆಗೆ ನವರಾತ್ರಿ ಪೂಜೆ ನಡೆಯಲಿದೆ. ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ ಶ್ರೀ ರಂಗಪೂಜೆ, ಪುಷ್ಪಾರ್ಚನೆ, ಸಹಸ್ರನಾಮ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಹಾಗೂ ಶ್ರೀಸೂಕ್ತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.

ಕಂಬಿಬಾಣೆಯಲ್ಲಿ 71ನೇ ದಸರಾ ಉತ್ಸವ

ಕಂಬಿಬಾಣೆಯಲ್ಲಿ 71ನೇ ದಸರಾ ಉತ್ಸವದ ಅಂಗವಾಗಿ ಅ.11ರಿಂದ 20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ. ಅ.11ರಂದು ಮಂಜನಾಡಿ, ಮಂಗಳೂರಿನ ಸುಘೋಷ ಪಾಂಚಜನ್ಯ ಯಕ್ಷ ನಾಟ್ಯಾಲಯದ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಅ.13ರಂದು ಚಾಮುಂಡೇಶ್ವರಿ ಭಜನಾ ಮಂಡಳಿ, ಕೊಡಗರಹಳ್ಳಿ ತಂಡದಿಂದ ಭಜನಾ ಕಾರ್ಯಕ್ರಮ, ಅ.15ರಂದು ಓಂ ಶಕ್ತಿ ಭೂತನಕಾಡು ತಂಡದಿಂದ ಭಜನೆ, ಅ.16ರಂದು ದುರ್ಗಾಹೋಮ, ಅ.17ರಂದು ಕಂಬಿಬಾಣೆಯ ಶ್ರೀರಾಮ ಮತ್ತು ಚಾಮುಂಡೇಶ್ವರಿ ಮಹಿಳಾ ಭಜನಾ ಕಾರ್ಯಕ್ರಮ ಹಾಗೂ ಅ.18ರಂದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅ.19ರಂದು ವಾಹನ ಪೂಜೆ ನೆರವೇರಲಿದ್ದು, ಅ.20ರಂದು ದೇವಿಯ ಶೋಭಾಯಾತ್ರೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಸುಂಟಿಕೊಪ್ಪದಲ್ಲಿ 10ನೇ ವರ್ಷದ ನವರಾತ್ರಿ ಉತ್ಸವ

ಸುಂಟಿಕೊಪ್ಪದ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ 10ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ಅ.11ರಿಂದ 19ರವರೆಗೆ ಪ್ರತಿದಿನ ದೇವಿಗೆ ವಿವಿಧ ವಿಶೇಷ ಅಲಂಕಾರ ಹಾಗೂ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಅ.11ರಂದು ಅರಿಶಿನ ಅಲಂಕಾರ, ಅ.12ರಂದು ಕುಂಕುಮ ಅಲಂಕಾರ, ಅ.13ರಂದು ಗಂಧದ ಅಲಂಕಾರ, ಅ.14ರಂದು ಭಸ್ಮ ಅಲಂಕಾರ, ಅ.15ರಂದು ಕಡಲೆ ಅಲಂಕಾರ, ಅ.16ರಂದು ಬೆಣ್ಣೆ ಅಲಂಕಾರ, ಅ.17ರಂದು ದ್ರಾಕ್ಷಿ ಮತ್ತು ಗೋಡಂಬಿ ಅಲಂಕಾರ, ಅ.18ರಂದು ಅರಿಶಿನ-ಕುಂಕುಮ ಅಲಂಕಾರ ಹಾಗೂ ಅ.19ರಂದು ಆಭರಣ ಮತ್ತು ಹೂವಿನ ಅಲಂಕಾರ ಮಾಡಲಾಗುವುದು.

ಅ.18ರಂದು ಸಂಜೆ ಆಯುಧಪೂಜೆಯ ಅಂಗವಾಗಿ ವಾಹನ ಪೂಜೆಯನ್ನೂ ನೆರವೇರಿಸಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ರೂ.10 ಕೋಟಿ ವೆಚ್ಚದ ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಘಟಕ : ನವೆಂಬರ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆ : ಶಾಸಕ ಡಾ. ಮಂತರ್ ಗೌಡ ಪರಿಶೀಲನೆ

ಅಕ್ಟೋಬರ್ 11, 2026

ಮಡಿಕೇರಿ ದಸರಾ ಕರಗೋತ್ಸವಕ್ಕೆ ಚಾಲನೆ: ನಾಲ್ಕು ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಆರಂಭ

ಅಕ್ಟೋಬರ್ 11, 2026

ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಸಂಕಷ್ಟ: ಟಿಕೆಟ್ ರೋಲ್ ಕೊರತೆ, 3–4 ಪ್ರಯಾಣಿಕರಿಗೆ ಒಂದೇ ಟಿಕೆಟ್!

ಅಕ್ಟೋಬರ್ 11, 2026

ಮಡಿಕೇರಿ ದಸರಾ ಕರಗೋತ್ಸವಕ್ಕೆ ಚಾಲನೆ: ನಾಲ್ಕು ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಆರಂಭ

ಅಕ್ಟೋಬರ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.11: ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ ಭಾನುವಾರ…

ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಸಂಕಷ್ಟ: ಟಿಕೆಟ್ ರೋಲ್ ಕೊರತೆ, 3–4 ಪ್ರಯಾಣಿಕರಿಗೆ ಒಂದೇ ಟಿಕೆಟ್!

ಅಕ್ಟೋಬರ್ 11, 2026

ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌: ದಾಖಲೆ ಮರುಪರಿಶೀಲನೆಗೆ ಅ.31ರವರೆಗೆ ಗಡುವು ವಿಸ್ತರಣೆ

ಅಕ್ಟೋಬರ್ 11, 2026

ಹಿಂದೂ ಗೆಳೆಯರ ಬಳಗದ ಅಧ್ಯಕ್ಷರಾಗಿ ಟಿ.ವಿ. ಪ್ರಕಾಶ್ ನೇಮಕ

ಅಕ್ಟೋಬರ್ 11, 2026

ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಸುಂಟಿಕೊಪ್ಪದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

ಅಕ್ಟೋಬರ್ 11, 2026

ಭಾಗಮಂಡಲ–ತಲಕಾವೇರಿ ಮಾರ್ಗದಲ್ಲಿ ಬಸ್ ಸೇವೆ ಆರಂಭ: ಶಾಸಕರಿಗೆ ಗ್ರಾಮಸ್ಥರ ಅಭಿನಂದನೆ; ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ

ಅಕ್ಟೋಬರ್ 11, 2026

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ : ಯುವ ಸಮೂಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರಾಯಭಾರಿಗಳಾಗಬೇಕು : ಆನಂದ ಕರಂದ್ಲಾಜೆ ಕರೆ

ಅಕ್ಟೋಬರ್ 11, 2026

ಗೌರಮ್ಮ ದತ್ತಿ ಕಥಾ ಸ್ಪರ್ಧೆ: ಆಕಾಂಕ್ಷ ಎಂ.ಎಸ್.ಗೆ ಪ್ರಥಮ ಬಹುಮಾನ

ಅಕ್ಟೋಬರ್ 11, 2026

ವೃದ್ಧಾಪ್ಯದಲ್ಲಿ ಪೋಷಕರಿಗೆ ಪ್ರೀತಿ, ಆರೈಕೆ ನೀಡಿ: ಬಿಲ್ಲರಿ ಕುಟ್ಟಡ ಪ್ರಭು ಅಯ್ಯಪ್ಪ; ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಹಿರಿಯರ ಸಮಸ್ಯೆ ಆಲಿಸಿ, ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ

ಅಕ್ಟೋಬರ್ 11, 2026

ಪ್ರಜಾಪ್ರಭುತ್ವ ಉಳಿಸಿ, ಮತದಾನದ ಹಕ್ಕು ರಕ್ಷಿಸಿ: ಸಿದ್ದಾಪುರದಲ್ಲಿ ಪ್ರತಿಭಟನೆ; ಎಸ್‌ಐಆರ್‌ ಪ್ರಕ್ರಿಯೆ ವಿರುದ್ಧ ಆಕ್ರೋಶ; ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ

ಅಕ್ಟೋಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.