ಮಡಿಕೇರಿ ಅ.12 NEWS DESK : ಕೊಡಗು ಮತ್ತು ದ.ಕ ಜಿಲ್ಲೆಯ ಅರೆಭಾಷಿಕ ಗೌಡರಿಗೆ ಪೂಜಾರಿ ಮೊಣ್ಣಪ್ಪ ನವರು ಮಾದರಿಯಾಗಿದ್ದು, ಅಪರೂಪದ ವ್ಯಕ್ತಿತ್ವದ ಅವರು ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ದುಡಿದ ಭೀಷ್ಮನೆಂದು ಖ್ಯಾತರಾಗಿದ್ದು, ಅರೆಭಾಷೆ ಅಕಾಡೆಮಿಯವರು ಅವರನ್ನು ನೆನಪಿಸಿ ಸ್ಮರಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಇತರ ಸಂಘ-ಸಂಸ್ಥೆಗಳಿಗೆ ಮಾದರಿರಾಗಿದ್ದಾರೆ ಎಂದು 97ರ ಹರೆಯದ ವೃದ್ದ ಹಾಗೂ ಅರೆಭಾಷಿಕ ಜನಾಂಗದ ಹಿರಿಯ ವ್ಯಕ್ತಿ ಡಾ.ಕಾವೇರಿಮನೆ ಬೋಜಪ್ಪ ಅವರು ಅಭಿಪ್ರಾಯ ಪಟ್ಟರು. ಬೆಂಗಳೂರಿನ ಚೌಡೇಶ್ವರಿ ನಗರದಲ್ಲಿರುವ ಪೂಜಾರಿರ ಮೊಣ್ಣಪ್ಪ ಲಾಯರ್ ಲೇಔಟ್‍ನ ಕೊಡಗು ಮತ್ತು ದ.ಕ ಗೌಡ ಸಮಾಜದ ‘ನಮ್ಮನೆ ಸಾಂಸ್ಕøತಿಕ ಕಲಾಕೇಂದ್ರದಲ್ಲಿ ಆಯೋಜಿಸಲಾದ ಸಭೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಬೆಮಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಕೊಡಗು ಗೌಡ ಸಮಾಜ ಹಾಗೂ ಯಲಹಂಕ ಗೌಡ ಸಮಾಜದವರು ಸೇರಿ ಆಯೋಜಿಸಲಾದ ಸ್ಮರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ನಂಗಾರು ನಾಣಯ್ಯ ಅವರು ಮಾತನಾಡಿ, ಬೆಂಗಳೂರಿನ ಲಗ್ಗೇರೆ, ಜಕ್ಕೂರು ಮತ್ತು ಶ್ರೀ ಗಂಧ ಕಾವಲು ಭಾಗಗಳಲ್ಲಿ ಪೂಜಾರಿ ಮೊಣ್ಣಪ್ಪನವರು ಕಾಯರ್‍ಮಾರ್ ವೀರಪ್ಪ ಗೌಡ, ಪೂಜಾರಿ ಪೂವಯ್ಯ, ಹೊದ್ದೆಟ್ಟಿ ಭವಾನಿಶಂಕರ್ ಸೇರಿ ಸುಮಾರು 18 ಏಕ್ರೆ ಜಾಗವನ್ನು ಸರಕಾರದಿಂದ ಮಂಜೂರಾತಿಗೊಳಿಸಿ ಅರೆಭಾಷಿಕ ಗೌಡರಿಗೆ ನಿವೇಶನ ಕೊಡಿಸುವಲ್ಲಿ ಶ್ರಮಿಸಿರುವುದನ್ನು ಈ ಸಂದರ್ಭ ನೆನೆಸಿಕೊಂಡರು.
‘ಹಿರಿಯ ಅರೆಭಾಷೆಯ ಸಾಹಿತಿ ಹೊದ್ದೆಟಿ ಭವಾನಿಶಂಕರ್ ಅವರು ಮಾತನಾಡಿ ಸರಳ ಸಜ್ಜನಿಕೆಯ ವಕೀಲರಾದ ಪೂಜಾರಿ ಮೊಣ್ಣಪ್ಪನವರು ತಮ್ಮ ಜೀವನವನ್ನು ಸಾಹಿತ್ಯ, ಸಂಸ್ಕøತಿ ಮತ್ತು ಅರೆಭಾಷಿಕ ಜನಾಂಗದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿರುವುದು ನೆನಪಿಸಿಕೊಂಡರು. ನಿವೃತ್ತ ಪ್ರಾಂಶುಪಾಲರು ಹಾಗೂ ಸಮಾಜದ ದುರೀಣಿ ಡಾ|| ನಂಗಾರು ನಿಂಗರಾಜು ಮಾತನಾಡಿ, ಅರೆಭಾಷೆ ಅಕಾಡೆಮಿಯವರು ಪೂಜಾರಿ ಮೊಣ್ಣಪ್ಪನವರನ್ನು ಸ್ಮರಿಸಿಕೊಳ್ಳುವ ಕಾರ್ಯವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಅಕಾಡೆಮಿ ಸದಸ್ಯ ಸಂಚಾಲಕ ಸೂದನ ಈರಪ್ಪ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಅರೆಭಾಷಿಕ ತೆರೆಮರೆ ವ್ಯಕ್ತಿಗಳನ್ನು ಅಕಾಡೆಮಿ ಗುರುತಿಸುವ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ, ಅಕಾಡೆಮಿಯ ಅತ್ಯಂತ ಹೆಮ್ಮೆಯ ಕಾರ್ಯಕ್ರಮ ಇದಾಗಿದು,್ದ ಇದು ಇತರ ಸಮಾಜಗಳಿಗೆ ಮಾದರಿ ಎಂದರು. ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪಾಣತಲೆ ಪಳಂಗಪ್ಪ ಅವರು ಮಾತನಾಡಿ, ನಮಗೆಲ್ಲ ದಿ|| ಮೊಣ್ಣಪ್ಪ ಮಾದರಿಯಾಗಿದ್ದು ನಾವು ಅವರ ಹೆಜ್ಜೆಯಲ್ಲಿ ಸಾಗ ಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು, ಭಾಷೆ – ಸಂಸ್ಕøತಿ ಮತ್ತು ಅರೆಭಾಷಿಕರ ಅಭಿವೃದ್ಧಿಗಾಗಿ ಮೊಣ್ಣಪ್ಪನವರು ಶ್ರಮಿಸಿದ್ದಾರೆ ಅಂತಹ ಸಾಧಕರನ್ನು ನೆನೆಸಿ ಕೊಳ್ಳುವುದು ನಮ್ಮ ಕರ್ತವ್ಯವೆಂದು ಪ್ರತಿಪಾದಿಸಿದರು. ಇನ್ನು ಮಂದಕ್ಕೂ ನಾವು ಅರೆಭಾಷಿಕ ಜನಾಂಗದವರಲ್ಲಿ ಸಾಹಿತ್ಯ – ಸಂಸ್ಕøತಿ ಮುಂತಾದ ನೆಲೆಗಟ್ಟಿನಲ್ಲಿ ದುಡಿದವರನ್ನು ನೆನೆಸಿ ಸನ್ಮಾನಿಸಿ ಪುರಸ್ಕರಿಸುತ್ತೇವೆ ಎಂದರು. ಸಮಾರಂಭದಲ್ಲಿ ಅಕಾಡೆಮಿ ಸದಸ್ಯರಾದ ಕೆ.ಎಸ್.ಕಾರ್ಯಪ್ಪ ಗೌಡ, ಚಂದ್ರಾವತಿ ಬಡ್ಡಡ್ಕ, ಕುದುಪಜೆ ಪ್ರಕಾಶ್, ಮೊಣ್ಣಪ್ಪನವರ ಪುತ್ರ ಪೂಜಾರಿರ ಗಣೇಶ್ ಉಪಸ್ಥಿತರಿದ್ದರು. ಕುಂಭಗೌಡನ ಲೀಲಾವತಿ ಸೋಮಣ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ಸದಸ್ಯ ಸಂಚಾಲಕರಾದ ಸೂದನ ಈರಪ್ಪ ಸ್ವಾಗತಿಸಿದರು, ಸದಸ್ಯರಾದ ಪೊನ್ನಚನ ಮೋಹನ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಗೌರವಾನ್ವಿತರ್ನು ಅಕಾಡೆಮಿ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಾಂಸ್ಕøತಿಕ ಕಲಾ ತಂಡದವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು ಅರೆಭಾಷಿಕರ ಅಭಿವೃದ್ಧಿಗಾಗಿ ದುಡಿದ ಸಮಾಜದ ವಿವಿಧ ಗಣ್ಯರನ್ನು ಹಾಗೂ ಸಾಧಕರನ್ನು ಈ ಸಂಧರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


















