ಮಡಿಕೇರಿ ಅ.14 NEWS DESK : 66/11 ಕೆ.ವಿ. ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಈ2 ಓಂಕಾರೇಶ್ವರ ಫೀಡರ್ನಲ್ಲಿ ದಸರಾ ಹಬ್ಬದ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ದಿನಾಂಕ ಅಕ್ಟೋಬರ್ 15 ರಂದು ಬೆಳಿಗ್ಗೆ 10.00 ರಿಂದ 04.00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಕನ್ನಂಡಬಾಣೆ, ಗೌಡಸಮಾಜ, ಜೂನಿಯರ್ ಕಾಲೇಜು ರಸ್ತೆ, ದಾಸವಾಳ ರಸ್ತೆ, ಗಣಪತಿ ಬೀದಿ, ಓಂಕಾರೇಶ್ವರ ದೇವಸ್ಥಾನ, ಓಂಕಾರೇಶ್ವರ ರಸ್ತೆ, ಬ್ರಾಹ್ಮಣರ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
















