ಮಡಿಕೇರಿ NEWS DESK ಅ.17 : ರೋಟರಿ ಮಡಿಕೇರಿ ವತಿಯಿಂದ ರವಿ ಆರ್ಥೋಪೆಡಿಕ್ ಸೆಂಟರ್ ಸಹಯೋಗದಲ್ಲಿ ಅ.19ರಂದು ನಗರದ ಗಾಂಧಿ ಮೈದಾನದಲ್ಲಿರುವ ಮಹಿಳಾ ದಸರಾ ವೇದಿಕೆಯಲ್ಲಿ ಉಚಿತ ಮೂಳೆ ಮತ್ತು ನರರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ಮೂಳೆ ಖನಿಜ ಸಾಂದ್ರತೆ ಪರೀಕ್ಷೆ ಮೂಲಕ ಆಸ್ಟಿಯೊಪೊರೋಸಿಸ್ ಕಾಯಿಲೆಯ ಆರಂಭಿಕ ಪತ್ತೆ ಹಾಗೂ ಮೂಳೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಮಧುಮೇಹದಿಂದ ಉಂಟಾಗುವ ನರಗಳ ಹಾನಿಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಮುಂದಿನ ತೊಡಕುಗಳನ್ನು ತಡೆಗಟ್ಟಲು ಅಗತ್ಯ ತಪಾಸಣೆ ನಡೆಸಲಾಗುತ್ತದೆ. ಇದರೊಂದಿಗೆ ಎತ್ತರ, ತೂಕ, ರಕ್ತದೊತ್ತಡ ಮತ್ತು ರಕ್ತದ ಸಕ್ಕರೆ ಪರೀಕ್ಷೆಗಳನ್ನು ನಡೆಸಿ, ಸಾರ್ವಜನಿಕರ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ರವಿ ಆರ್ಥೋಪೆಡಿಕ್ ಸೆಂಟರ್ ಸಹಯೋಗದಲ್ಲಿ ನಡೆಯುವ ಈ ಉಚಿತ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ರೋಟರಿ ಮಡಿಕೇರಿ ಅಧ್ಯಕ್ಷ ರೋ.ಮನೋಹರ್ ಕಾಮತ್, ಕಾರ್ಯದರ್ಶಿ ರೋ.ಆದರ್ಶ ಸೋಮಣ್ಣ ಹಾಗೂ ಸಮುದಾಯ ಸೇವಾ ನಿರ್ದೇಶಕ ರೋ.ಸುದಯ್ ನಾಣಯ್ಯ ಅವರು ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9880561430 ಸಂಖ್ಯೆಯನ್ನು ಸಂಪರ್ಕಿಸಬಹುದು.




































