Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಫ್ಯಾಪ್ ಕಪ್ ಹಾಕಿ ಪಂದ್ಯಾವಳಿ: ವಿವಿಧ ತಂಡಗಳಿಂದ ಭರ್ಜರಿ ಪ್ರದರ್ಶನ; ನ.1ರಂದು ಸಮಾರೋಪ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಫ್ಯಾಪ್ ಕಪ್ ಹಾಕಿ ಪಂದ್ಯಾವಳಿ: ವಿವಿಧ ತಂಡಗಳಿಂದ ಭರ್ಜರಿ ಪ್ರದರ್ಶನ; ನ.1ರಂದು ಸಮಾರೋಪ

ಅಕ್ಟೋಬರ್ 31, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ಅ.31: ಕೂರ್ಗ್ ಹ್ಯಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿರುವ 2ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಯಲ್ಲಿ ವಿವಿಧ ವಿಭಾಗಗಳ ಪಂದ್ಯಾಟಗಳು ರೋಚಕವಾಗಿ ನಡೆದಿದ್ದು, ಹಲವು ತಂಡಗಳು ಭರ್ಜರಿ ಪ್ರದರ್ಶನ ನೀಡಿವೆ.

ಪುರುಷರ ವಿಭಾಗ

ಪುರುಷರ ವಿಭಾಗದ ಪಂದ್ಯದಲ್ಲಿ ಅಪ್ಪಚ್ಚಕವಿ ವಿದ್ಯಾಲಯ ತಂಡವು ಯುಟಿಎಸ್‌ಸಿ ಅಕಾಡೆಮಿ ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿತು. ಪ್ರೀತಂ ಗೆಲುವಿನ ಗೋಲು ದಾಖಲಿಸಿದರು. ಎಂಆರ್‌ಎಫ್ ಮೂರ್ನಾಡು ತಂಡವು ಪಡಿಯಾಡ್ ತಂಡವನ್ನು 4-0 ಗೋಲುಗಳಿಂದ ಮಣಿಸಿತು. ಮಣಿಕಂಠ ಎರಡು, ಕೌಶಿಕ್ ಹಾಗೂ ಶ್ರೇಯಸ್ ತಲಾ ಒಂದು ಗೋಲು ಗಳಿಸಿದರು.

ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ತಂಡವು ಮುಂಬೈ ರಿಪಬ್ಲಿಕನ್ ವಿರುದ್ಧ 3-0 ಗೋಲುಗಳ ಜಯ ಸಾಧಿಸಿತು. ವೇದಾಂತ್, ಅಧ್ರೇಶ್ ಹಾಗೂ ಸಚಿನ್ ತಲಾ ಒಂದು ಗೋಲು ದಾಖಲಿಸಿದರು.

ಬರ್ಲಿ ಟೈಗರ್ಸ್ ಮತ್ತು ಕೊಡವ ಹಾಕಿ ಅಕಾಡೆಮಿ ನಡುವಿನ ಪಂದ್ಯದಲ್ಲಿಯೂ ಉತ್ತಮ ಪೈಪೋಟಿ ಕಂಡುಬಂದಿತು. ಉಮೇಶ್ ಮುರುಗಾರ್ ಎರಡು ಹಾಗೂ ಭರತ್ ಕೆ.ಕೆ. ಒಂದು ಗೋಲು ದಾಖಲಿಸಿದರು.

ಕೂರ್ಗ್ ಡೈನಾಮಿಕ್ಸ್ ತಂಡವು ಭಗವತಿ 11 ವಿರುದ್ಧ ಉತ್ತಮ ಪ್ರದರ್ಶನ ನೀಡಿತು. ಕೂರ್ಗ್ ಡೈನಾಮಿಕ್ಸ್ ಪರ ಚೇತನ್ ಎರಡು ಹಾಗೂ ಕುಟ್ಟಪ್ಪ ಒಂದು ಗೋಲು ಗಳಿಸಿದರೆ, ಭಗವತಿ 11 ಪರ ಬೋಸ್ ಚೆಂಗಪ್ಪ ಮತ್ತು ಸಚಿನ್ ಅಯ್ಯಪ್ಪ ತಲಾ ಒಂದು ಗೋಲು ದಾಖಲಿಸಿದರು.

ಕೇರಳ ಮಾಸ್ಟರ್ಸ್ ಮೆನ್ ಮತ್ತು ಭಗವತಿ 11 ನಡುವಿನ ಪಂದ್ಯವು 1-1 ಗೋಲುಗಳಿಂದ ಸಮಬಲಗೊಂಡಿತು. ಕೇರಳ ಪರ ಅಹಿಲ್ ಗೋಲು ದಾಖಲಿಸಿದರು.

ಮಹಿಳೆಯರ ವಿಭಾಗ

ಮಹಿಳೆಯರ ವಿಭಾಗದಲ್ಲಿ ಕೂರ್ಗ್ ವಂಡರ್ ವುಮೆನ್ ತಂಡವು ಕೇರಳ ಮಾಸ್ಟರ್ಸ್ ವಿರುದ್ಧ 2-0 ಗೋಲುಗಳಿಂದ ಗೆಲುವು ಸಾಧಿಸಿತು. ಪ್ರೇಮಾ ಹಾಗೂ ಕೃತಿಕಾ ತಲಾ ಒಂದು ಗೋಲು ಗಳಿಸಿದರು.

ರಾಯಲ್ ಚಾಲೆಂಜರ್ಸ್ ತಂಡವು ಕೇರಳ ಮಾಸ್ಟರ್ಸ್ ವಿರುದ್ಧ 5-0 ಗೋಲುಗಳ ಭರ್ಜರಿ ಜಯ ದಾಖಲಿಸಿತು. ಲಕ್ಷ್ಮಿ, ಮಾನಸ, ಎಲಿನಾ, ಸರಿತಾ ಹಾಗೂ ಹರಿಣಾಕ್ಷಿ ತಲಾ ಒಂದು ಗೋಲು ಗಳಿಸಿದರು.

ಕೂರ್ಗ್ ವಂಡರ್ ವುಮೆನ್ ತಂಡದ ಮತ್ತೊಂದು ಪಂದ್ಯದಲ್ಲಿ ಕೃತಿಕಾ ಒಂದು, ಉಷಾ ಎರಡು ಹಾಗೂ ಶೃತಿ ಒಂದು ಗೋಲು ದಾಖಲಿಸಿದರು. ಆರ್‌ಸಿಬಿ ಮತ್ತು ಕೇರಳ ನಡುವಿನ ಮತ್ತೊಂದು ಪಂದ್ಯದಲ್ಲಿ ಬಬಿತಾ ಹಾಗೂ ಮಾನಸ ತಲಾ ಒಂದು ಗೋಲು ಗಳಿಸಿದರು.

ಇತರೆ ಪಂದ್ಯಗಳು

ಟೈಗರ್ಸ್ ಬಾಳೆಲೆ ಮತ್ತು ಯುವ ಮಾಸ್ಟರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿಯೂ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಸಂತೋಷ್ ಕೆ.ಕೆ. ಒಂದು ಗೋಲು ದಾಖಲಿಸಿದರು.

ನ.1ರಂದು ಸಮಾರೋಪ

ಪಂದ್ಯಾವಳಿಯ ಸಮಾರೋಪ ಸಮಾರಂಭವು ನವೆಂಬರ್ 1ರಂದು ಮಧ್ಯಾಹ್ನ 2.15ಕ್ಕೆ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಟರ್ಫ್ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಹಾಗೂ ಕೇರಳ ಹಾಕಿ ಕಾರ್ಯದರ್ಶಿ ನಿಯಾಜ್ ಕೆ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಗೌರವ ಅತಿಥಿಗಳಾಗಿ ವಿಶ್ವಕಪ್ ಚಿನ್ನದ ಪದಕ ವಿಜೇತ ಪೈಕೇರ ಕಾಳಯ್ಯ, ಒಲಿಂಪಿಯನ್ ಕರ್ನಲ್ ಬಿ.ಕೆ. ಸುಬ್ರಮಣಿ, ಒಲಿಂಪಿಯನ್ ಸಿ.ಎಸ್. ಪೂಣಚ್ಚ, ವಿಶ್ವಕಪ್ ಆಟಗಾರ ಕೆ.ಕೆ. ಪೂಣಚ್ಚ, ಕ್ರೀಡಾ ಬರಹಗಾರ ಹಾಗೂ ವ್ಯಾಖ್ಯಾನಕಾರ ಚೆಪ್ಪುಡಿರ ಕಾರ್ಯಪ್ಪ, ಕೂರ್ಗ್ ಹೊಟೇಲ್‌ಗಳು ಮತ್ತು ರೆಸಾರ್ಟ್‌ಗಳ ಸಂಘದ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಕೂರ್ಗ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಧನ್ಯ ಸುಬ್ಬಯ್ಯ, ಕೇರಳ ಹಾಕಿ ಉಪಾಧ್ಯಕ್ಷ ಹಶೀರ್ ಪೊನ್ಮಾನಿಚಿ ಹಾಗೂ ಯುಟಿಎಸ್‌ಸಿ ಸಮಿತಿ ಸದಸ್ಯ ಜಿನೋಸ್ ಬಶೀರ್ ಉಪಸ್ಥಿತರಿರಲಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಾವೇರಿ ತೀರ್ಥೋದ್ಭವದ ಪ್ರಸಾದ ವಿತರಣೆ

ಅಕ್ಟೋಬರ್ 31, 2026

ಭರತನಾಟ್ಯ ಪರೀಕ್ಷೆ : ವಿರಾಜಪೇಟೆ ‘ನಾಟ್ಯಾಂಜಲಿ ನೃತ್ಯ ಸಂಸ್ಥೆ’ಗೆ ಶೇ.100 ಫಲಿತಾಂಶ

ಅಕ್ಟೋಬರ್ 31, 2026

ಡಿಪ್ಲೋಮಾ ಇನ್ ಕೋ-ಆಪರೇಟಿವ್ ಆಡಿಟ್ ತರಬೇತಿಗೆ ಅರ್ಜಿ ಆಹ್ವಾನ

ಅಕ್ಟೋಬರ್ 31, 2026

ಭರತನಾಟ್ಯ ಪರೀಕ್ಷೆ : ವಿರಾಜಪೇಟೆ ‘ನಾಟ್ಯಾಂಜಲಿ ನೃತ್ಯ ಸಂಸ್ಥೆ’ಗೆ ಶೇ.100 ಫಲಿತಾಂಶ

ಅಕ್ಟೋಬರ್ 31, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಅ.31 NEWS DESK : ಇತ್ತೀಚೆಗೆ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆದ…

ಡಿಪ್ಲೋಮಾ ಇನ್ ಕೋ-ಆಪರೇಟಿವ್ ಆಡಿಟ್ ತರಬೇತಿಗೆ ಅರ್ಜಿ ಆಹ್ವಾನ

ಅಕ್ಟೋಬರ್ 31, 2026

ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವೈಟ್‍ಕೋಟ್ ಸಮಾರಂಭ

ಅಕ್ಟೋಬರ್ 31, 2026

ಪೊನ್ನಂಪೇಟೆಯಲ್ಲಿ ನ್ಯಾಯಾಲಯದ ಉದ್ಘಾಟನೆ : ನ್ಯಾಯಾಂಗ ವ್ಯವಸ್ಥೆ ಬಲಯುತವಾಗಿದ್ದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎ.ಎಸ್.ಪೊನ್ನಣ್ಣ

ಅಕ್ಟೋಬರ್ 31, 2026

ಕೂಗ್೯ ಹೋಟೆಲ್, ರೆಸಾಟ್೯ ಅಸೋಸಿಯೇಷನ್ ವಾಷಿ೯ಕ ಮಹಾಸಭೆ : ಪ್ರವಾಸೋದ್ಯಮ ಪ್ರಗತಿಗೆ ಸಂಬಂಧಿಸಿದಂತೆ ಮಹತ್ವದ ಚಚೆ೯

ಅಕ್ಟೋಬರ್ 31, 2026

ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರಪೇಟೆ ಪಿ.ಎಂ.ಶ್ರೀ ಜಿ.ಎಂ.ಪಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಅಕ್ಟೋಬರ್ 31, 2026

ಹಾಕತ್ತೂರು-ಬಿಳಿಗೇರಿ ಮಖಾಮ್ ಉರೂಸ್ ಮೇ 2ರಿಂದ 4ರವರೆಗೆ

ಅಕ್ಟೋಬರ್ 31, 2026

ದೇಚೂರು ಶ್ರೀ ರಾಮ ಮಂದಿರದ ದಸರಾ ಕಲಾಕೃತಿಗಳಿಗೆ ಶಾಂತಿ ಪೂಜೆ

ಅಕ್ಟೋಬರ್ 31, 2026

ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣೆ: ಮಡಿಕೇರಿಯಲ್ಲಿ ಅರ್ಥಪೂರ್ಣ ಆಚರಣೆ; ಸ್ವಾತಂತ್ರ್ಯ ಹೋರಾಟಗಾರನಿಗೆ ಗಣ್ಯರಿಂದ ಗೌರವ ನಮನ; ಅಪ್ಪಯ್ಯ ಗೌಡರ ತ್ಯಾಗ, ಬಲಿದಾನ ಸ್ಮರಣೆ

ಅಕ್ಟೋಬರ್ 31, 2026

ಫ್ಯಾಪ್ ಕಪ್ ಹಾಕಿ ಪಂದ್ಯಾವಳಿ: ವಿವಿಧ ತಂಡಗಳಿಂದ ಭರ್ಜರಿ ಪ್ರದರ್ಶನ; ನ.1ರಂದು ಸಮಾರೋಪ

ಅಕ್ಟೋಬರ್ 31, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.