ಮಡಿಕೇರಿ, NEWS DESK ಅ.31: ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಸೋಮವಾರಪೇಟೆಯ ಪಿ.ಎಂ.ಶ್ರೀ ಜಿ.ಎಂ.ಪಿ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಭವೀಶ್ ಎಸ್.ಎ., ಮೊಹಮ್ಮದ್ ಹಫೀಜ್, ವಿಜಯ್ ಸೂರ್ಯ, ಪ್ರಥಮ್ ಜಿ. ಗೌಡ, ಸೃಜನ್ ಸಿ.ಪಿ., ಹೃದಯ, ರಿತನ್ ಡಿ.ಎಸ್., ರಿಷಿ ಡಿ.ಎಸ್., ಮಿಥೇಶ್, ಸಾನ್ವಿಕ್, ಲಕ್ಷಿತ್ ಗೌಡ, ಹನ್ಸಿಕಾ ಹಾಗೂ ವರುಣ್ ಎಸ್. ಅವರು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತುದಾರರು, ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

















