ಮಡಿಕೇರಿ, NEWS DESK ನ.2: ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘ, ಯುವ ಘಟಕ, ಮಹಿಳಾ ಘಟಕ ಹಾಗೂ ಮಡಿಕೆಬೀಡಿನ ಕುಲಾಲ ಕುಂಬಾರ ಬಾಂಧವರ ಸಂಯುಕ್ತ ಆಶ್ರಯದಲ್ಲಿ ಮಾಯಮಡಿಯಲ್ಲಿ ಆಯೋಜಿಸಲಾಗಿದ್ದ ಕುಲಾಲ ಕ್ರಿಕೆಟ್ ಚಾಂಪಿಯನ್ ಟ್ರೋಫಿ ಸೀಸನ್-2 ಪಂದ್ಯಾವಳಿಯಲ್ಲಿ ಗೆಳೆಯರ ಬಳಗ ಕುಶಾಲನಗರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಫೈನಲ್ ಪಂದ್ಯದಲ್ಲಿ ಗೆಳೆಯರ ಬಳಗ ಕುಶಾಲನಗರ ತಂಡವು ಸೂಪರ್ ಮಾಸ್ಟರ್ ಬರಡಿ ತಂಡದ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸೂಪರ್ ಮಾಸ್ಟರ್ ಬರಡಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ವೈಯಕ್ತಿಕ ಪ್ರಶಸ್ತಿಗಳು:
-
ಉದಯೋನ್ಮುಖ ಆಟಗಾರ: ಆಕಾಶ್ (ಮಡಿಕೆಬೀಡು)
-
ಅತ್ಯುತ್ತಮ ಬ್ಯಾಟ್ಸ್ಮನ್: ದಯಾ (ಚೇರಂಬಾಣೆ)
-
ಅತ್ಯುತ್ತಮ ಬೌಲರ್: ಮಂಜುನಾಥ್ (ಮಡಿಕೆಬೀಡು)
-
ಅತ್ಯುತ್ತಮ ಫೀಲ್ಡರ್: ಶ್ರೇಯಸ್ (ಮಡಿಕೆಬೀಡು)
-
ಅತ್ಯುತ್ತಮ ವಿಕೆಟ್ ಕೀಪರ್: ಸ್ಯಾಮ್ಜಿತ್ (ಬರಡಿ)
-
ಫೈನಲ್ ಪಂದ್ಯದ ಪಂದ್ಯಶ್ರೇಷ್ಠ: ಜೋಗಿಶೆಟ್ಟಿ (ಕುಶಾಲನಗರ)
-
ಅತ್ಯುತ್ತಮ ತಂಡ: ಟೀಂ ಶ್ರೀದೇವಿ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಲಯನ್ ದಾಮೋದರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಟ್ವಾಳ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಸಂಪಾಜೆ, ಮಂಗಳೂರು ಆಂತರಿಕ ಭದ್ರತಾ ವಿಭಾಗದ ಎಎಸ್ಐ ಚಂದ್ರಶೇಖರ್ ಕೆ.ಬಿ., ಕೊಡಗು ಜಿಲ್ಲಾ ಸಂಘದ ಉಪಾಧ್ಯಕ್ಷ ಸುರೇಶ್ ಕುಲಾಲ್, ಮಡಿಕೆಬೀಡು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಆರ್. ಚಂದ್ರ, ಮಡಿಕೆಬೀಡು ಕುಂಬಾರ ಕುಲಾಲ ಸಂಘದ ಅಧ್ಯಕ್ಷ ಕೆ.ಎನ್. ಶಿವು, ಮಾಯಮುಡಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಮಾಯಮುಡಿ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಆರ್.ಶ್ರೀನಿವಾಸ್, ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕಾಂತಿಮಣಿ, ಯುವ ಘಟಕದ ಅಧ್ಯಕ್ಷ ಜಿ.ಪಿ. ಕುಲಾಲ್ ಸೇರಿದಂತೆ ಹಲವು ಗಣ್ಯರು, ಕ್ರೀಡಾಪಟುಗಳು, ಸಮುದಾಯದ ಮುಖಂಡರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಎಂ.ಡಿ. ಶಾಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು.

















