Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ನಾಡಿನಾದ್ಯಂತ ಸಂಭ್ರಮದ ಪುತ್ತರಿ (ಹುತ್ತರಿ) ಆಚರಣೆ : ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ : ದೇವಾಲಯಗಳಲ್ಲಿ ಕದಿರು ವಿತರಣೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಡಿನಾದ್ಯಂತ ಸಂಭ್ರಮದ ಪುತ್ತರಿ (ಹುತ್ತರಿ) ಆಚರಣೆ : ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ : ದೇವಾಲಯಗಳಲ್ಲಿ ಕದಿರು ವಿತರಣೆ

ನವೆಂಬರ್ 25, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ NEWS DESK ನ.25 : ಭತ್ತದ ಫಸಲು ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಕೊಡಗಿನ ವಿಶಿಷ್ಟ ಸಂಸ್ಕೃತಿಯ ಸುಂದರ ಹಬ್ಬ ‘ಪುತ್ತರಿ (ಹುತ್ತರಿ)’ ಯನ್ನು ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಸಂಜೆ 6 ಗಂಟೆ 5 ನಿಮಿಷಕ್ಕೆ ನೆರೆ ಕಟ್ಟಿ, ಸಂಜೆ 7 ಗಂಟೆ 5 ನಿಮಿಷದಲ್ಲಿ ಕದಿರು ತೆಗೆದು ದೇವಾಲಯಕ್ಕೆ ತರಲಾಯಿತು. ಬಳಿಕ ವಿಶೇಷ ಪೂಜೆ ಪ್ರಾರ್ಥನೆಯೊಂದಿಗೆ ಭಕ್ತರಿಗೆ ಕದಿರು ಹಂಚಲಾಯಿತು. ರಾತ್ರಿ 8 ಗಂಟೆ 5 ನಿಮಿಷಕ್ಕೆ ಪ್ರಸಾದ ಸ್ವೀಕರಿಸಲಾಯಿತು. ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲೂ ಪುತ್ತರಿ (ಹುತ್ತರಿ) ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬಳಿಕ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಫಲ ಭರಿತ ಗದ್ದೆಗಳಲ್ಲಿ ಹುಣ್ಣಿಮೆಯ ರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಗಳೊಂದಿಗೆ ಕದಿರು ತೆಗೆದು ಸಂಭ್ರಮದಿಂದ ಮನೆಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡು ಪುತ್ತರಿಯನ್ನು ಆಚರಿಸಲಾಯಿತು. ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಹಗಲಿನಲ್ಲೆ ಕದಿರು ತೆಗೆದು ಹುತ್ತರಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ‍್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇಗುಲದಲ್ಲಿ, ಮಡಿಕೇರಿ ಕೊಡವ ಸಮಾಜ, ಗೌಡ ಸಮಾಜ, ಕನ್ನಂಡಬಾಣೆಯ ದೃಷ್ಠಿ ಗಣಪತಿ ದೇಗುಲದಲ್ಲಿ ಸಾಂಪ್ರದಾಯಿಕವಾಗಿ ರಾತ್ರಿ 6.25 ಕ್ಕೆ ನೆರೆ ಕಟ್ಟಿ, ರಾತ್ರಿ 7.25ಕ್ಕೆ ಕದಿರು ತೆಗೆಯುವ ಮೂಲಕ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ನಗರ ಪ್ರದೇಶ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ದೇವಸ್ಥಾನ, ವಿವಿಧ ಸಮಾಜಗಳಿಗೆ ತೆರಳಿ ಕದಿರು ಸ್ವೀಕರಿಸಿ ಮನೆಗೆ ಕೊಂಡೊಯ್ದರು. ಜಿಲ್ಲೆಯ ಭಾಗಮಂಡಲ, ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆ, ಪೊನ್ನಂಪೇಟೆ ಸೇರಿದಂತೆ ಗ್ರಾಮ ಗ್ರಾಮಗಳಲ್ಲಿ ಹುತ್ತರಿ ಹಬ್ಬವನ್ನು ಕದಿರು ತೆಗೆದು, ಪಟಾಕಿ ಸಿಡಿಸುವ ಮೂಲಕ ಕುಟುಂಬಸ್ಥರನ್ನು ಒಳಗೊಂಡಂತೆ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. *ಹಗಲಿನಲ್ಲಿ ಹುತ್ತರಿ ಸಂಭ್ರಮ*
ಪೊನ್ನಂಪೇಟೆ ತಾಲ್ಲೂಕಿನ ಕಿರುಗೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಮಹಾದೇವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅಲೆಮಾಡ ಸುಧೀರ್ ಅವರ ನೇತೃತ್ವದಲ್ಲಿ ಅರ್ಚಕರಾದ ಸುದರ್ಶನ್ ಭಟ್ ಅವರ ಮುಂದಾಳತ್ವದಲ್ಲಿ ಗುರುವಾರ ಬೆಳಿಗ್ಗೆ 10.30 ಗಂಟೆಗೆ ಗ್ರಾಮಸ್ಥರು ಮೆರವಣಿಗೆಯ ಮೂಲಕ ದೇವರ ಗದ್ದೆಗೆ ತೆರಳಿದರು. ಬಳಿಕ ಭತ್ತದ ಗದ್ದೆಗೆ ವಿಶೇಷ ಪೂಜೆ ಸಲ್ಲಿಸಿ ಹಾಲು ಸುರಿದು ಕದಿರು ತೆಗೆಯಲಾಯಿತು. ನಂತರ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ, ದೇವರಿಗೆ ಕದಿರು ಹಾಕಿ ತೀರ್ಥ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಗ್ರಾಮಸ್ಥ ಗಾಂಡಂಗಡ ಉತ್ತಯ್ಯ ಹಾಗೂ ಆರ್ಚಕರಾದ ಸುದರ್ಶನ್ ಭಟ್ ಅವರು ಪುತ್ತರಿ ಆಚರಣೆ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ಕದನೂರು ಗ್ರಾಮದಲ್ಲಿ ಸಿಎನ್‌ಸಿ ವತಿಯಿಂದ 33ನೇ ವರ್ಷದ ಪುತ್ತರಿ ನಮ್ಮೆ ಆಚರಣೆ

ನವೆಂಬರ್ 25, 2026

ಜ್ಞಾನಗಂಗಾ ವಸತಿ ಶಾಲೆಯ ಪ್ರಾಂಶುಪಾಲೆ ಜೆ.ಎ.ಸಂಜನಾಗೆ ಅತ್ಯುತ್ತಮ ಪ್ರಾಂಶುಪಾಲೆ ಪ್ರಶಸ್ತಿ

ನವೆಂಬರ್ 24, 2026

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಡಾ.ಶೋಭಾ ಎಂ.ಎಸ್. ಅಧಿಕಾರ ಸ್ವೀಕಾರ

ನವೆಂಬರ್ 24, 2026

ಕದನೂರು ಗ್ರಾಮದಲ್ಲಿ ಸಿಎನ್‌ಸಿ ವತಿಯಿಂದ 33ನೇ ವರ್ಷದ ಪುತ್ತರಿ ನಮ್ಮೆ ಆಚರಣೆ

ನವೆಂಬರ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ನ. 25: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ 33ನೇ ವರ್ಷದ ವಾರ್ಷಿಕ ಕೊಡವ ಸಾರ್ವಜನಿಕ…

ಜ್ಞಾನಗಂಗಾ ವಸತಿ ಶಾಲೆಯ ಪ್ರಾಂಶುಪಾಲೆ ಜೆ.ಎ.ಸಂಜನಾಗೆ ಅತ್ಯುತ್ತಮ ಪ್ರಾಂಶುಪಾಲೆ ಪ್ರಶಸ್ತಿ

ನವೆಂಬರ್ 24, 2026

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಡಾ.ಶೋಭಾ ಎಂ.ಎಸ್. ಅಧಿಕಾರ ಸ್ವೀಕಾರ

ನವೆಂಬರ್ 24, 2026

ನ.30 ರಂದು ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ

ನವೆಂಬರ್ 24, 2026

ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ: ನ್ಯಾಯಾಧೀಶೆ ಶುಭ

ನವೆಂಬರ್ 24, 2026

ಮಡಿಕೇರಿ ಮಹಿಳಾ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಪ್ರೊ. ದಯಾನಂದ ಕೆ.ಸಿ. ಅಧಿಕಾರ ಸ್ವೀಕಾರ

ನವೆಂಬರ್ 24, 2026

ಮಡಿಕೇರಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ನವೆಂಬರ್ 24, 2026

ಚಿಕ್ಕಳುವಾರದಲ್ಲಿ ಡಿ.13 ಮತ್ತು14ರಂದು ‘ಸ್ಟಾರ್ ಗೇಸಿಂಗ್ ಫೆಸ್ಟಿವಲ್’

ನವೆಂಬರ್ 24, 2026

ಹುದಿಕೇರಿಯಲ್ಲಿ ಸಿಎನ್‌ಸಿ 11ನೇ ಮಾನವ ಸರಪಳಿ : ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕೊಡವರ ಜನ್ಮಸಿದ್ಧ ಹಕ್ಕು: ಎನ್.ಯು.ನಾಚಪ್ಪ

ನವೆಂಬರ್ 24, 2026

ದೇವರಕೊಲ್ಲಿ : ಕಾರು ಕಂದಕಕ್ಕೆ ಉರುಳಿ ಯುವಕ ಸಾವು : ಇಬ್ಬರಿಗೆ ಗಾಯ

ನವೆಂಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.