Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಡಾ.ಶೋಭಾ ಎಂ.ಎಸ್. ಅಧಿಕಾರ ಸ್ವೀಕಾರ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಡಾ.ಶೋಭಾ ಎಂ.ಎಸ್. ಅಧಿಕಾರ ಸ್ವೀಕಾರ

ನವೆಂಬರ್ 24, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, ನ.24 NEWS DESK : ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಶೋಭಾ ಎಂ.ಎಸ್. ಅವರು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಖಾಯಂ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದು, ನ.24ರಂದು ಅಧಿಕಾರ ಸ್ವೀಕರಿಸಿದರು. ಕರ್ನಾಟಕ ಸರ್ಕಾರದ ವತಿಯಿಂದ ನಡೆದ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಡಾ. ಶೋಭಾ ಅವರು, ಒಟ್ಟು 215 ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ. ಶಿವಶಂಕರ್ ಮತ್ತು ಕಮಲಮ್ಮ ದಂಪತಿಯ ಪುತ್ರಿಯಾದ ಡಾ. ಶೋಭಾ ಅವರ ತಂದೆ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾಗಿ ಹಾಗೂ ಚಾಮರಾಜ ಅಕಾಡೆಮಿ ಆಫ್ ವಿಷುವಲ್ ಆರ್ಟ್ಸ್‌ನ ಡೀನ್ ಆಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾದ ಡಾ. ಶೋಭಾ ಅವರು 2006ರಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ಸುಮಾರು 16 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ ಅವರು, 2019ರಲ್ಲಿ ಸಹ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ನಂತರ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಮೈಸೂರಿಗೆ ಮರಳಿದ ಅವರು, ಮಹಾರಾಣಿ ವಿಜ್ಞಾನ ಕಾಲೇಜಿನ ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥೆಯಾಗಿ ಹಾಗೂ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 21 ವರ್ಷಗಳ ಬೋಧನಾ ಅನುಭವ ಹೊಂದಿರುವ ಡಾ. ಶೋಭಾ ಅವರು ಇದೀಗ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಖಾಯಂ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಖ್ಯಾತ ವಕೀಲರಾದ ಡಾ. ಮನೋಜ್ ಬೋಪಯ್ಯ ಯಲದಾಳು ಅವರ ಧರ್ಮಪತ್ನಿಯಾಗಿರುವ ಡಾ. ಶೋಭಾ ಅವರು, ದಿವಂಗತ ವೈ.ಟಿ. ಬೋಪಯ್ಯ ಮತ್ತು ದಿವಂಗತ ಕಮಲಾ ಬೋಪಯ್ಯ ಅವರ ಸೊಸೆಯಾಗಿದ್ದಾರೆ. ಅವರ ನೇಮಕಾತಿಗೆ ಕುಟುಂಬದವರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಡಾ. ಶೋಭಾ ಅವರ ಅಪಾರ ಬೋಧನಾ ಅನುಭವ ಹಾಗೂ ಮಾರ್ಗದರ್ಶನದಿಂದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂಬ ಆಶಯ ವ್ಯಕ್ತವಾಗಿದೆ.

Follow us Follow us
Share. WhatsApp Facebook Twitter Email Telegram Copy Link

Related Posts

ನ.30 ರಂದು ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ

ನವೆಂಬರ್ 24, 2026

ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ: ನ್ಯಾಯಾಧೀಶೆ ಶುಭ

ನವೆಂಬರ್ 24, 2026

ಮಡಿಕೇರಿ ಮಹಿಳಾ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಪ್ರೊ. ದಯಾನಂದ ಕೆ.ಸಿ. ಅಧಿಕಾರ ಸ್ವೀಕಾರ

ನವೆಂಬರ್ 24, 2026

ನ.30 ರಂದು ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ

ನವೆಂಬರ್ 24, 2026 ಇತ್ತೀಚಿನ ಸುದ್ದಿಗಳು ಉದ್ಯೋಗ ಭಾಗ್ಯ ಕೊಡಗು ಜಿಲ್ಲೆ

ಮಡಿಕೇರಿ ನ.24 NEWS DESK : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳವು…

ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ: ನ್ಯಾಯಾಧೀಶೆ ಶುಭ

ನವೆಂಬರ್ 24, 2026

ಮಡಿಕೇರಿ ಮಹಿಳಾ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಪ್ರೊ. ದಯಾನಂದ ಕೆ.ಸಿ. ಅಧಿಕಾರ ಸ್ವೀಕಾರ

ನವೆಂಬರ್ 24, 2026

ಮಡಿಕೇರಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ನವೆಂಬರ್ 24, 2026

ಚಿಕ್ಕಳುವಾರದಲ್ಲಿ ಡಿ.13 ಮತ್ತು14ರಂದು ‘ಸ್ಟಾರ್ ಗೇಸಿಂಗ್ ಫೆಸ್ಟಿವಲ್’

ನವೆಂಬರ್ 24, 2026

ಹುದಿಕೇರಿಯಲ್ಲಿ ಸಿಎನ್‌ಸಿ 11ನೇ ಮಾನವ ಸರಪಳಿ : ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕೊಡವರ ಜನ್ಮಸಿದ್ಧ ಹಕ್ಕು: ಎನ್.ಯು.ನಾಚಪ್ಪ

ನವೆಂಬರ್ 24, 2026

ದೇವರಕೊಲ್ಲಿ : ಕಾರು ಕಂದಕಕ್ಕೆ ಉರುಳಿ ಯುವಕ ಸಾವು : ಇಬ್ಬರಿಗೆ ಗಾಯ

ನವೆಂಬರ್ 24, 2026

ನ.26 ರಂದು ಸಿಎನ್‍ಸಿಯಿಂದ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ : ಡಾ.ಎಂ.ಎ.ಕಲಾಂ, ನ್ಯಾಯವಾದಿ ಕಿರಣ್ ನಾರಾಯಣ್, ಡಾ.ಮಾತಂಡ ಅಯ್ಯಪ್ಪ, ಪ್ರೊ.ಪಿ.ಎಚ್.ಮೊಹಮ್ಮದ್ ಭಾಗಿ

ನವೆಂಬರ್ 24, 2026

ಎಸ್ ಎಸ್ ಆಸ್ಪತ್ರೆ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ನವೆಂಬರ್ 24, 2026

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಭೆ : ಕ್ರಿಸ್‌ಮಸ್ ಗೀತ ಗಾಯನ ಸ್ಪರ್ಧೆಯ ಕುರಿತು ಚರ್ಚೆ : ಮಡಿಕೇರಿ ಅಧ್ಯಕ್ಷರಾಗಿ ಪಿಯೂಷ್ ಪೆರೆರಾ ಆಯ್ಕೆ

ನವೆಂಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.