ವಿರಾಜಪೇಟೆ, NEWS DESK ನ.28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ವಿರಾಜಪೇಟೆ ತಾಲೂಕು ವತಿಯಿಂದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಹುಟ್ಟುಹಬ್ಬದ ಪ್ರಯುಕ್ತ ವಿರಾಜಪೇಟೆ ವಲಯದ ಕೆದಮುಳ್ಳೂರಿನ ‘ಕಿತಾರಿನ ಚಿತ್ತದಿನಿ ಮಕ್ಕಳ ಮನೆಯಲ್ಲಿ’ ವಿಶೇಷ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಕ್ಕಳಿಗೆ ಹಣ್ಣುಹಂಪಲು ಹಾಗೂ ಹೊದಿಕೆಗಳನ್ನು ವಿತರಿಸಲಾಯಿತು. ಅಲ್ಲದೆ, ಮಕ್ಕಳಿಗೆ ರಾತ್ರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳ ಮನೆಯ ಪಾಲಕರಾದ ಟ್ರೀಸಾ ಮತ್ತು ಮೇರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್ ಪಿ., ವಲಯ ಮೇಲ್ವಿಚಾರಕ ಶಿವಕುಮಾರ್, ಸೇವಾಪ್ರತಿನಿಧಿಗಳಾದ ಪುಷ್ಪ, ತೇಜಸ್ವಿನಿ, ಮೀನಾಕ್ಷಿ, ಬಿಂದು, ಸಬಿತಾ, ಶಿಲ್ಪಾ, ಸುನಿತಾ, ಸಿ.ಎಸ್.ಸಿ. ಸೇವಾದಾರರಾದ ಯಕ್ಷಿತಾ, ಲವ್ಲಿ ಹಾಗೂ ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು.


































