ಸೋಮವಾರಪೇಟೆ ಜ.3 : ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಾರ್ಥ ನಗರದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಈ. ಜಯೇಂದ್ರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಘಟಕದ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಸುಜಿತ್, ಬಿ.ಬಿ. ಆನಂದ್, ಬ್ಲಾಕ್ ಅಧ್ಯಕ್ಷ ಎಚ್.ಬಿ. ರಾಜಪ್ಪ, ಸೋಮವಾರಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ನಾಗರಾಜು, ಬಿ.ಕೆ. ದೇವರಾಜು ಮತ್ತಿತರರು ಇದ್ದರು.
ಇದೇ ಸಂದರ್ಭ ಬೆಟ್ಟದಳ್ಳಿ ವಲಯದ ಪರಿಶಿಷ್ಟ ಜಾತಿ ಘಟಕವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಿ.ಆರ್. ಯೋಗೇಂದ್ರ, ಉಪಾಧ್ಯಕ್ಷರಾಗಿ ಬಿ.ಆರ್. ಧರ್ಮಪ್ಪ, ಬಿ.ಬಿ. ಜಯೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಿ. ಆದರ್ಶ್, ಖಜಾಂಚಿಯಾಗಿ ಬಿ.ಈ. ದಿಲೀಪ, ಸಮಿತಿ ಸದಸ್ಯರಾಗಿ ಬಿ.ಎ. ಅಭಿಷೇಕ್, ಬಿ.ಅರ್. ಧರ್ಮೇಂದ್ರ, ಬಿ.ಪಿ. ರಾಜು, ಬಿ.ಎಸ್. ಸುದೀಶಾ, ಬಿ.ಯು. ಲವಕುಶ, ಬಿ.ಎಸ್. ಭರತ್, ಬಿ.ಬಿ. ರಾಜ. ಬಿ.ಸಿ. ಚಂದ್ರ ಹಾಗೂ ಬಿ.ಈ. ಜಯಪ್ಪ ಆಯ್ಕೆಯಾದರು.









