ರುಚಿಕರವಾದ ಚಿಕನ್ ಚಾಪ್ಸ್ ಮಾಡುವ ವಿಧಾನ

12/01/2023

ಬೇಕಾಗುವ ಸಾಮಾಗ್ರಿಗಳು :  ಬೆಳ್ಳುಳ್ಳಿ – 15-20, ಶುಂಠಿ – ಸ್ವಲ್ಪ, ಹಸಿ ಮೆಣಸಿನಕಾಯಿ – 8-10, ಹೆಚ್ಚಿದ ಈರುಳ್ಳಿ – ಅರ್ಧ ಬಟ್ಟಲು, ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ, ಹೆಚ್ಚಿದ ಪುದೀನ – ಮುಕ್ಕಾಲು ಬಟ್ಟಲು, ದಾಲ್ಚಿನ್ನಿ (ಚಕ್ಕೆ)– ಸ್ವಲ್ಪ, ಲವಂಗ – 8, ಕಾಳುಮೆಣಸು – 1 ಚಮಚ, ದನಿಯಾ ಪುಡಿ – 2 ಚಮಚ, ತುರಿದ ತೆಂಗಿನಕಾಯಿ – ಸ್ವಲ್ಪ, ಚಿಕನ್ ತುಂಡುಗಳು – 3/4 ಕೆಜಿ, ಹೆಚ್ಚಿದ ಈರುಳ್ಳಿ – 1 ಬಟ್ಟಲು, ಹೆಚ್ಚಿದ ಟೊಮೆಟೊ – ಅರ್ಧ ಬಟ್ಟಲು,
ನಿಂಬೆ ಹಣ್ಣು – ಅರ್ಧ, ಎಣ್ಣೆ – 3 ಚಮಚ, ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :  ಮೊದಲಿಗೆ ಮಿಕ್ಸಿ ಜಾರ್’ಗೆ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನ ಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ಚಕ್ಕೆ, ಲವಂಗ, ಕಾಳುಮೆಣಸು, ದನಿಯಾ ಪುಡಿ, ತುರಿದ ತೆಂಗಿನಕಾಯಿ ಹಾಕಿ, ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ.
ನಂತರ ಒಲೆಯ ಮೇಲೆ ಒಂದು ಕಡಾಯಿ ಇಟ್ಟು ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಹುರಿಯಿರಿ.
ಈರುಳ್ಳಿ ಚಿನ್ನದ ಬಣ್ಣ ಬಂದ ಬಳಿಕ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ.
ಈಗ ಚಿಕನ್ ತುಂಡುಗಳನ್ನು ಹಾಕಿ, ಉಪ್ಪು ಸೇರಿಸಿ ಫ್ರೈ ಮಾಡಿ. ಮೊದಲೇ ರುಬ್ಬಿ ಇಟ್ಟುಕೊಂಡಿದ್ದ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್ ಚೆನ್ನಾಗಿ ಬೆಂದ ಬಳಿಕ ನಿಂಬೆ ರಸವನ್ನು ಹಾಕಿದರೆ, ರುಚಿಕರವಾದ ಚಿಕನ್ ಚಾಪ್ಸ್ ಸವಿಯಲು ಸಿದ್ಧ.