ಕುಶಾಲನಗರ, NEWS DESK ನ.5: ಕುಶಾಲನಗರ ಯೋಜನಾ ಪ್ರಾಧಿಕಾರದ (ಕೂಡಾ) ನೂತನ ಸದಸ್ಯ ಕಾರ್ಯದರ್ಶಿಯಾಗಿ ಮೈಸೂರಿನ ಮಹಾನಗರ ಪಾಲಿಕೆಯಿಂದ ವರ್ಗಾವಣೆಗೊಂಡು ಆಗಮಿಸಿದ ಪಿ.ವಿ.ದೀಪಕ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಪ್ರಾಧಿಕಾರದ ಹಿಂದಿನ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಬಿ.ಸಜಿತ್ ಅವರಿಂದ ಪಿ.ವಿ.ದೀಪಕ್ ಅವರು ಅಧಿಕಾರ ಹಸ್ತಾಂತರಿಸಿಕೊಂಡರು. ಈ ಮೂಲಕ ಕುಶಾಲನಗರ ಯೋಜನಾ ಪ್ರಾಧಿಕಾರದ ನೂತನ ಸದಸ್ಯ ಕಾರ್ಯದರ್ಶಿಯಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು.

















