Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*
  • *ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*
  • *ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*
  • *ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  
  • *ಕೊಡಗು ಜಿಲ್ಲೆಯನ್ನು ಕಡೆಗಣಿಸಿದ ಬಜೆಟ್ : ತೇಲಪಂಡ ಶಿವಕುಮಾರ್ ಟೀಕೆ*
  • *ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*
  • *ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*
  • *ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*
  • *ಹಾರ್ಮುಜ್ ಬಂದ್ ಆದ್ರೂ ತೈಲಕ್ಕೆ ಬರಲ್ಲ ಕಂಟಕ!: ಭಾರತದ ಇಂಧನ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅಪ್ಡೇಟ್*
  • *ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಸಾಧಕರಿಗೆ ಸನ್ಮಾನ :  ಸದಸ್ಯರೇ ರೋಟರಿ ಸಂಸ್ಥೆಯ ಜೀವಾಳ : ಪ್ರಕಾಶ್ ಕಾರಂತ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಸಾಧಕರಿಗೆ ಸನ್ಮಾನ :  ಸದಸ್ಯರೇ ರೋಟರಿ ಸಂಸ್ಥೆಯ ಜೀವಾಳ : ಪ್ರಕಾಶ್ ಕಾರಂತ್

ಜನವರಿ 18, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.18 : ಸದಸ್ಯರೇ ರೋಟರಿ ಸಂಸ್ಥೆಗಳ ಜೀವಾಳವಾಗಿದ್ದು, ಹೊಸಪೀಳಿಗೆಯ ಸದಸ್ಯರ ಸೇಪ೯ಡೆ ಮೂಲಕ ರೋಟರಿಯಲ್ಲಿ ಬದಲಾವಣೆಯ ಗಾಳಿ ಬೀಸುವ ಅಗತ್ಯವಿದೆ ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ನೀಡಿದ ಸಂದಭ೯ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪ್ರಕಾಶ್ ಕಾರಂತ್,  ಅಂತರ ರಾಷ್ಟ್ರೀಯ ರೋಟರಿಯ 118 ವಷ೯ಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯಾದ ಜೆನಿಫರ್ ಜೋನ್ಸ್ ಅಧ್ಯಕ್ಷೆಯಾಗಿದ್ದು, ಈ ಮೂಲಕ ಮಹಿಳೆಯರಿಗೆ ರೋಟರಿ ಸಂಸ್ಥೆ ಪ್ರಾಮುಖ್ಯತೆಯನ್ನು ನೀಡಿದೆ. ಪ್ರತೀ ರೋಟರಿ ಸಂಸ್ಥೆಯಲ್ಲಿಯೂ ಶೇ.30 ರಷ್ಟು ಮಹಿಳಾ ಸದಸ್ಯರು ಇರುವಂತೆ ಗಮನ ಹರಿಸಲಾಗುತ್ತಿದೆ. ಮಹಿಳೆಯರ ಆಡಳಿತದಲ್ಲಿ ಅಭಿವೃದ್ಧಿಪರ ಚಿಂತನೆಗಳು ಹೆಚ್ಚುತ್ತದೆ ಎಂಬುದಕ್ಕೆ ಅನೇಕ ನಿದಶ೯ನಗಳಿದೆ. ಹೀಗಾಗಿ ರೋಟರಿ ಸಂಸ್ಥೆಗಳಲ್ಲಿ ಮಹಿಳಾ ಸದಸ್ಯೆಯರೂ ಸಕ್ರಿಯರಾಗಿ ಪಾಲ್ಗೊಳ್ಳುವಂತಾಗಬೇಕೆಂದು ಕರೆ ನೀಡಿದರು.

ಸದಸ್ಯರೇ ರೋಟರಿಯ ಜೀವಾಳವಾಗಿರುವ ಹಿನ್ನಲೆಯಲ್ಲಿ ರೋಟರಿಯಲ್ಲಿ ಸದಸ್ಯತ್ವ ಹೆಚ್ಚಳಕ್ಕೆ ಪ್ರತೀ ವಷ೯ ಪ್ರಯತ್ನಿಸಲಾಗುತ್ತಿದೆ. ಸೇವಾ ಮನೋಭಾವ ಮತ್ತು ಜೀವನಮೌಲ್ಯಗಳ ಗುಣ ಹೊಂದಿರುವವರನ್ನು ಸದಸ್ಯರನ್ನಾಗಿ ಸೇಪ೯ಡೆ ಮಾಡಲಾಗುತ್ತಿದೆ. ಈ ಮೂಲಕ ರೋಟರಿಯುವ ಮತ್ತಷ್ಟು ಅಧಿಕ ಪ್ರಮಾಣದಲ್ಲಿ ಸಾಮಾಜಿಕ ಸೇವಾ ಯೋಜನೆಗಳನ್ನು ಕಾಯ೯ಗತಗೊಳಿಸಲು ಮುಂದಾಗಿದೆ ಎಂದೂ ಪ್ರಕಾಶ್ ಕಾರಂತ್ ಹೇಳಿದರು.

ರೋಟರಿ ದತ್ತಿನಿಧಿಗೆ ರೋಟರಿ ಸದಸ್ಯರು ನೀಡುವ ದೇಣಿಗೆಯಿಂದಾಗಿ ವಿಶ್ವವ್ಯಾಪಿ ಅನೇಕ ಸಂತ್ರಸ್ತರಿಗೆ ಪ್ರಯೋಜನವಾಗುತ್ತಲೇ ಇದೆ. ಈ ರೀತಿ ದೇಣಿಗೆ ನೀಡಲು ರೋಟರಿ ಸದಸ್ಯರು ಹಿಂದೇಟು ಹಾಕುತ್ತಿಲ್ಲ ಎಂಬುದಕ್ಕೆ ಪ್ರತೀ ವಷ೯ವೂ ದತ್ತಿನಿಧಿಗೆ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ಹರಿದು ಬರುತ್ತಿರುವುದೇ ಉದಾಹರಣೆಯಾಗಿದೆ ಎಂದೂ ಪ್ರಕಾಶ್ ಕಾರಂತ್ ಹಷ೯ ವ್ಯಕ್ತಪಡಿಸಿದರು.

ಮಿಸ್ಟಿ ಹಿಲ್ಸ್ ವಾತಾ೯ಸಂಚಿಕೆ ಸಂಪಾದಕ ಅನಿಲ್ ಎಚ್.ಟಿ. ಸಂಪಾದಕತ್ವದಲ್ಲಿ ಪ್ರಕಟವಾದ ರೋಟೋ ಮಿಸ್ಟ್ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ರೋಟರಿ ಸಹಾಯಕ ಗವನ೯ರ್ ರತನ್ ತಮ್ಮಯ್ಯ, ಇದೇ 24 ರಂದು ಮಡಿಕೇರಿ ರೋಟರಿ ಸಂಸ್ಥೆಯಿಂದ ರೈಡ್ ಫಾರ್ ರೋಟರಿ ಅಭಿಯಾನದಡಿ ಮಡಿಕೇರಿಗೆ ಬರುತ್ತಿರುವ ದೇಶವಿದೇಶಗಳ 24 ಬೈಕ್ ಸವಾರರಿಗೆ ಆತಿಥ್ಯ ವಹಿಸಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣೆಯ ಸಂದೇಶದೊಂದಿಗೆ ಈ ಬೈಕ್ ಜಾಥಾ ಮಡಿಕೇರಿಗೆ ಬರುತ್ತಿದೆ ಎಂದು ತಿಳಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, 18 ವಷ೯ಗಳ ರೋಟರಿ ಮಿಸ್ಟಿ ಹಿಲ್ಸ್ ನಾನಾ ಕಾಯ೯ಯೋಜನೆಗಳ ಮೂಲಕ ಜನತೆಗೆ ಸ್ಪಂದಿಸಿದೆ ಎಂದು ತಿಳಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ ಸಂಸ್ಥೆಯ ವರದಿ ಮಂಡಿಸಿದರು.

ಇದೇ ಸಂದಭ೯ ರೋಟರಿ ಮಿಸ್ಟಿ ಹಿಲ್ಸ್ ಗೆ ನೂತನ ಸದಸ್ಯರಾಗಿ ಡಾ.ಚೇತನ್, ಕಪಿಲ್ ದುಗ್ಗಳ ಮತ್ತು ಸುಮತಿ ವಿಶ್ವನಾಥ್ ಅವರನ್ನು ಸೇಪ೯ಡೆಗೊಳಿಸಲಾಯಿತು. ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವನ್ನು ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್ ನೆರವೇರಿಸಿದರು.

ಪುಪ್ಪೋದ್ಯಾನ ನಿವ೯ಹಣೆಗಾಗಿ ಮಡಿಕೇರಿಯ ಸವಿತಾ ಕೆ.ಭಟ್, ವಿಜ್ಞಾನ ವಾಹಿನಿ ಕಾಯ೯ಕ್ರಮಕ್ಕಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮುಖ್ಯಸ್ಥ ಎಸ್.ಪ್ರವೀಣ್ ಕುಮಾರ್, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾಯ೯ದಶಿ೯ ಅಂಬೆಕಲ್ ಜೀವನ್ ಕುಶಾಲಪ್ಪ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ, ಬೈಕ್ ಮಾದರಿಗಳ ತಯಾರಿಕೆಗಾಗಿ ಬಿಳಿಗೇರಿ ನೀಕ೯ಜೆ ಎಸ್ಟೇಟ್ ನ ಯುವ ಸಾಧಕ ಎನ್.ಕೆ. ಆಕಾಶ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಹಾಯಕ ಗವನ೯ರ್ ರತನ್ ತಮ್ಮಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಮಾ.೬ : ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ, ವಿರಾಜಪೇಟೆ ತಾಲ್ಲೂಕು, ಅಮ್ಮತ್ತಿ ಹೋಬಳಿ ಘಟಕ…

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  

ಮಾರ್ಚ್ 6, 2026

*ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*

ಮಾರ್ಚ್ 6, 2026

*ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*

ಮಾರ್ಚ್ 6, 2026

*ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*

ಮಾರ್ಚ್ 6, 2026

*ಹಾರ್ಮುಜ್ ಬಂದ್ ಆದ್ರೂ ತೈಲಕ್ಕೆ ಬರಲ್ಲ ಕಂಟಕ!: ಭಾರತದ ಇಂಧನ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅಪ್ಡೇಟ್*

ಮಾರ್ಚ್ 6, 2026

*ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?*

ಮಾರ್ಚ್ 6, 2026

*ಕರ್ನಾಟಕದಲ್ಲಿ 16 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ*

ಮಾರ್ಚ್ 6, 2026

*ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾಧ೯  ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್.ಚೇತನ್, ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವಿರೋಧ ಆಯ್ಕೆ*

ಮಾರ್ಚ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.