ಕುಶಾಲನಗರ ಜ.20 : ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಒಂಭತ್ತು ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಆಚರಿಸುತ್ತಿರುವ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿಸುರೇಶ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 15 ಕ್ಲಸ್ಟರ್‍ಗಳಿದ್ದು, ಎಲ್ಲೆಡೆ ಕಲಿಕಾ ಹಬ್ಬಾಚರಣೆ ನಡೆಯುತ್ತಿದೆ. ಮಕ್ಕಳ ಆಂತರಿಕ ಪ್ರಜ್ಞೆ ಹಾಗೂ ಅಂತಸ್ಸತ್ವವನ್ನು ಬೆಳೆಸುವಂತಹ ಕಾರ್ಯಕ್ರಮವಿದು.
ಮಕ್ಕಳಲ್ಲಿ ಇರುವ ಅದ್ಭುತ ಶಕ್ತಿಯನ್ನು ಉದ್ದೀಪನಗೊಳಿಸುವ ಮೂಲಕ ಮುಂದಿನ ಸಮಾಜದ ರೂವಾರಿಗಳಾಗಿಸುವುದು ನೂತನ ಶಿಕ್ಷಣ ನೀತಿಯ ಭಾಗವಾಗಿದೆ ಎಂದು ಸುರೇಶ್ ಹೇಳಿದರು.
ಕೆ.ಎಸ್.ಮೂರ್ತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಕುಶಾಲನಗರ ಪುರಸಭೆ ಉಪಾಧ್ಯಕ್ಷೆ ಸುರಯ್ಯಾ ಭಾನು, ಶಿಕ್ಷಣ ಸಂಯೋಜಕರಾದ ರಾಧಾಕೃಷ್ಣ, ಕ್ಷೇತ್ರ ಸಂಪನ್ಮೂಲ ಶಿಕ್ಷಕ ಲೋಕೇಶ್, ಸಂತೋμï, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರಾಣಿ, ಮೌಲಾನ ಶಾಲೆಯ ಮುಖ್ಯ ಶಿಕ್ಷಕಿ ಶ್ವೇತಾ, ಕುಶಾಲನಗರದ ಸರ್ಕಾರಿಸಂಯುಕ್ತ ಪ್ರೌಢಶಾಲೆ ಉಪಪ್ರಾಂಶುಪಾಲ ಪರಮೇಶ್ವರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಮೀರಾ, ದಾನಿಗಳಾದ ಸೂದನ ರತ್ನಾವತಿ, ಕೆ.ಎನ್.ದೇವರಾಜು, ಕಲಿಕಾ ಹಬ್ಬದ ಸಂಯೋಜಕರಾದ ಜಲಜಾಕ್ಷಿ, ನಂದಿನಿ, ಭಾರತಿ, ಭಾಗ್ಯಮ್ಮ, ಶಿವಣ್ಣ ಇದ್ದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಮುಖ್ಯ ಶಿಕ್ಷಕಿ ಬಿ.ಎನ್‍ಪುಷ್ಪ ಸ್ವಾಗತಿಸಿದರು.







