Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು : ಆದಿವಾಸಿಗಳು ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ಎಚ್ಚರವಹಿಸಿ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ*
  • *ಎಸ್.ಜಾನಕಿಯವರಿಗೆ ‘ಸಮರ್ಥ ಕನ್ನಡಿಗರು’ ಕೊಡಗು ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ*
  • *ಬರಪೊಳೆಯಲ್ಲಿ ಪತ್ರಕರ್ತರ ಸಾಹಸಮಯ ಜಲಕ್ರೀಡೆ*
  • *ಬಿಳಿಗೇರಿಯಲ್ಲಿ ಜು.18 ಮತ್ತು 19 ರಂದು ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ : ನೋಂದಣಿಗೆ ಜು.17 ಕೊನೆಯ ದಿನ*
  • *ಚಂದನಕೇರೆ ಹಾಡಿ ರಸ್ತೆ ಕಾಮಗಾರಿಗೆ ಚಾಲನೆ*
  • *ಮಾನವ ವನ್ಯಜೀವಿಗಳ ಸಂಘರ್ಷ : ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರೊಂದಿಗೆ ಶಾಸಕ ಡಾ.ಮಂತರ್ ಗೌಡ ಸಭೆ*
  • *ಎಸ್.ವಡ್ಡಳ್ಳಿ ಗ್ರಾಮದಲ್ಲಿ ಕ್ಷೇತ್ರೋತ್ಸವ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ*
  • *ಬಿ.ಕೆ.ಹರಿಪ್ರಸಾದ್ ರನ್ನು ಭೇಟಿಯಾದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಕುರಿತು ಚರ್ಚೆ*
  • *ಜ್ಞಾನ ವಿಜ್ಞಾನ ಸಮಿತಿಯ ಕೊಡಗು ಜಿಲ್ಲಾ ಕಾರ್ಯದರ್ಶಿ ಕುಮಾರ್ ಎನ್.ಎಸ್ ಗೆ ಸನ್ಮಾನ*
  • *ಸೆಫ್ಟಿಕ್ ಟ್ಯಾಂಕಿಗೆ ಬಿದ್ದ ಮರಿ ಆನೆ : ತಾಯಾನೆಯಿಂದ ರಕ್ಷಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಾನವ ವನ್ಯಜೀವಿಗಳ ಸಂಘರ್ಷ : ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರೊಂದಿಗೆ ಶಾಸಕ ಡಾ.ಮಂತರ್ ಗೌಡ ಸಭೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಾನವ ವನ್ಯಜೀವಿಗಳ ಸಂಘರ್ಷ : ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರೊಂದಿಗೆ ಶಾಸಕ ಡಾ.ಮಂತರ್ ಗೌಡ ಸಭೆ*

ಜುಲೈ 15, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ ಜು.15 NEWS DESK : ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾನವ ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವ ಕುರಿತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‍ಗೌಡ ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೊರೂರು, ಮೊದ್ದರೂ, ಕೆದಕಲ್ ನೇಗಾದಳ್, ಹಾಲೇರಿ, ಈರಳೆ ಓಳಮುಡಿ ಮತ್ತು ಅತ್ತೂರು ನಲ್ಲೂರು ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳ ರೈತರು ಮತ್ತು ಬೆಳೆಗಾರರು ಸಭೆಯಲ್ಲಿ ಪಾಲ್ಗೊಂಡು ಕಾಡಾನೆ, ಕಾಡಾಮ್ಮೆ ಸೇರಿದಂತೆ ವನ್ಯ ಜೀವಿಗಳ ಹಾವಳಿ ಕುರಿತು ಜೀವಭಯ ಹಾಗೂ ಕೃಷಿ ಬೆಳೆಗಳಿಗೆ ಅಪಾರ ಹಾನಿಯಾಗುತ್ತಿದ್ದು, ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರ ಮುಂದೆ ಆಹಾವಲು ಮಂಡಿಸಿದರು. ಲಿಖಿತ ಮನವಿಯನ್ನು ಸಭೆಯಲ್ಲಿ ಓದಿದ ಮಾಜಿ ಗ್ರಾ. ಪಂ. ಸದಸ್ಯ ವೆಂಕಪ್ಪ ಕೋಟ್ಯಾನ್ ಆನೆಕಾಡು ಮತ್ತು ಮೀನುಕೊಲ್ಲಿ ಅರಣ್ಯ ವಲಯಗಳಲ್ಲಿ ಜಂಟಿಕೊಂಬಿಂಗ್ ಕಾರ್ಯಚರಣೆಯನ್ನು ಅರಣ್ಯ ಇಲಾಖೆಯ ವಿವಿಧ ವಿಭಾಗಗಳ ಸಮನ್ವಯತೆಯಿಂದ ಕೈಗೊಳ್ಳಬೇಕು ಈಗಾಗಲೇ ಸಾಕಷ್ಟು ಬಾರೀ ಬೇಡಿಕೆ ಸಲ್ಲಿಸಿರುವಂತೆ ಚೆಟ್ಟಳ್ಳಿ ಪಾರಂ ಬಳಿಯಿರುವ ಆನೆ ಗೇಟನ್ನು ಶಾಶ್ವತವಾಗಿ ಮುಚ್ಚಬೇಕು. ಆನೆ ಕಾರ್ಯಚರಣೆ ಪಡೆಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿ ಅವರಿಗೆ ಸಂಪೂರ್ಣ ತರಬೇತಿ ಮತ್ತು ಅಗತ್ಯವಾದ ಸುರಕ್ಷತ ಉಪಕರಣಗಳನ್ನು ಒದಗಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನದ 24 ಗಂಟೆಯನ್ನು ನಿಯಂತ್ರಣಕೊಠಡಿಯನ್ನು ಸ್ಥಾಪಿಸಿ ಆನೆ ಓಡಿಸುವ ಸಂದರ್ಭದಲ್ಲಿ ಜೀವ ರಕ್ಷಕ ವಾಹನ ಬೆಂಗಾವಲು ಹಾಗೂ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತು 108 ಅಂಬ್ಯುಲೆನ್ಸ್ ಸೇವೆಯನ್ನು ನಿಯೋಜಿಸುವಂತೆ ಕೋರಿದರು. ಈ ಸಂದರ್ಭ ಶಾಸಕರು ಅರಣ್ಯ ಇಲಾಖೆಯ ಮಡಿಕೇರಿ ಉಪವಿಭಾಗದ ಕುಶಾಲನಗರ ವಲಯ ಅಧಿಕಾರಿಗಳಲ್ಲಿ ವಿವರ ಮತ್ತು ವಾಸ್ತಾವ ವಿಚಾರಗಳನ್ನು ಪ್ರಶ್ನಿಸುತ್ತ ಹೋದಂತೆ ಇಲಾಖೆಯ ಒಳಗೆ ಅಂತರಿಕಾವಗಿ ಸಮನ್ವಯತೆ ಇಲ್ಲದೆ ಇರುವುದು ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದೆ ಇರುವುದು ಹಾಗೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದಾಗ ಆಮೆ ವೇಗದಲ್ಲಿ ಅತ್ಯಅಲ್ಪ ಪರಿಹಾರವನ್ನು ನೀಡುವ ಹಿನ್ನಲೆಯಲ್ಲಿ ಮಾನವ ವನ್ಯಜೀವಿಗಳಿಂದ ಅತಂಕ ಅರಣ್ಯ ಇಲಾಖೆಯ ಕಾರ್ಯವೈಖರಿಯ ಮೇಲೆ ಬೇಸರ ಹೊಂದಿದ್ದಾರೆಂದು ಅವರು ವಿಷಾಧಿಸಿದರು. ಆನೆ ಓಡಿಸುವ ಕಾರ್ಯಚರಣೆಯು ಶೂನ್ಯ ಫಲಿತಾಂಶವನ್ನು ಹೊಂದಿದ್ದು, ಇಲಾಖೆಯಲ್ಲಿ ಸಮನ್ವಯತೆಯ ಕೊರತೆ ಇದೆ. ಆನೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ ಎಂದು ಆರೋಪಿಸಿದರು. ಕುಶಾಲನಗರ ವಲಯ ಅರಣ್ಯಾಧಿಕಾರಿ ನೀಡಿದ ರೂ. 7 ಕೋಟಿಯ ಯೋಜನ ವೆಚ್ಚದ ಬಗ್ಗೆ ಪ್ರತಿಕ್ರಿಯಿಸಿ ಸರಕಾರದಿಂದ ಮಂಜೂರು ಮಾಡಿಸುವ ಜವಾಬ್ಧಾರಿ ತಮ್ಮದಾಗಿದ್ದು, ಯೋಜನೆಯ ಯಶಸ್ವಿನ ಖಾತರಿಯನ್ನು ನೀಡಬಲ್ಲಿರಾ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಮಡಿಕೇರಿ ಉಪ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು, ಮಾಹಿತಿ ನೀಡಿ ಆನೆ ಮಾನವ ಮತ್ತು ಇತರ ವನ್ಯ ಜೀವಿಗಳ ಉಪಟಳವನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲೇ ಒಂದು ಸಮಗ್ರ ಯೋಜನೆಯನ್ನು ತಯಾರಿಸಲಾಗುತ್ತಿದ್ದು ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರದ ನಿಟ್ಟಿನಲ್ಲಿ 3 ರಿಂದ 4 ವರ್ಷಗಳು ಬೇಕೆಂದು ಮಾಹಿತಿ ನೀಡಿದರು. ಕಾಡಾನೆಗಳ ಸಂಚಾರದ ಕುರಿತು ಮಾಹಿತಿ ನೀಡಿದ ಅವರು ವಿರಾಜಪೇಟೆಯಿಂದ ಶನಿವಾರ ಸಂತೆಯವರೆಗೆ ಆನೆ ಕಾರಿಡರ್ ಇದ್ದು ಇದನ್ನು ಮರಳಿ ಸ್ಥಾಪಿಸುವ ನಿಟ್ಟಿನಲ್ಲೂ ಕೂಡ ಪ್ರಯತ್ನಗಳು ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಿಸಿದರು. ಕಾಡುಕೋಣಗಳ ಬಗ್ಗೆ ಮಾತನಾಡಿದ ಅವರು ಕಾಡುಕೋಣಗಳನ್ನು ಹಿಡಿದು ಸ್ಥಳಾಂತರಿಸುವ ಪ್ರಯೋಗಗಳು ಈಗಾಷ್ಟೇ ಆರಂಭವಾಗಿದ್ದು ಇಲ್ಲಿಯೂ ಕೂಡ ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಅವರು ಮಾಹಿತಿ ನೀಡಿದರು. ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಇತ್ತೀಚೆಗೆ ತಮ್ಮ ತೋಟದಲ್ಲಿ ಕಾಡು ಕೋಣ ದಾಳಿ ಮಾಡಿದ ಹಿನ್ನಲೆಯಲ್ಲಿ ತೋಟ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು, ಕೇವಲ ಒಂದು ವಾರದ ಚಿಕಿತ್ಸಾ ರೂ 4.42 ಲಕ್ಷ ವೆಚ್ಚ ದಾಟಿರುವ ಬಗ್ಗೆ ಮಾಹಿತಿ ನೀಡಿ ವನ್ಯ ಜೀವಿಗಳ ದಾಳಿಗೆ ಸಾವು ಸಂಭವಿಸಿದಾಗ ರೂ. 20 ಲಕ್ಷ ನೀಡುವ ಇಲಾಖೆ ಗಾಯಗೊಂಡವರ ಬಗ್ಗೆ ಪರಿಹಾರ ಅಥವಾ ಚಿಕಿತ್ಸಾ ವೇಚ್ಚದ ಬಗ್ಗೆ ತಾತ್ಸರವನ್ನು ತಾಳುತ್ತೀರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಡಿಸಿಎಫ್ ಅಭಿಷೇಕ್ ಗಾಯಾಳುಗಳ ಚಿಕಿತ್ಸಾ ವೆಚ್ಚದ ವಿವರ ನೀಡಿದ್ದಲ್ಲಿ ಭರಿಸಲಾಗುವುದೆಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕರು ವನ್ಯಜೀವಿ ದಾಳಿ ಅಸ್ತಿಪಾಸ್ತಿ ಹಾನಿ ಮೊದಲಾದವುಗಳಿಗೆ ಸರಕಾರ ನಿಗಧಿ ಪಡಿಸಿದ ಸಂಪೂರ್ಣ ವಿವರವನ್ನು ಸಾಮಾಜಿಕ ಜಾಲ ತಾಣದಲ್ಲಿರುವ ಗುಂಪಿನಲ್ಲಿ ಹಂಚಿಕೊಳ್ಳುವಂತೆ ನಿರ್ದೇಶನ ನೀಡಿದರು. ಪುಲ್ಲೇರ ವಸಂತ್ ಅವರು ಮಾತನಾಡಿ ಸರಿ ಸುಮಾರು 70 ಕಾಡುಕೋಣಗಳ ಗುಂಪು 5 ರಿಂದ 6 ತಂಡಗಳಾಗಿದ್ದು, ಇವುಗಳೊಂದಿಗೆ ಕಾಡು ದನಗಳು ಸೇರಿಕೊಂಡಿದ್ದು ಬದುಕು ಮತ್ತು ಕೃಷಿ ದುಸ್ಸತ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುμÁ್ಠನ ಸಮಿತಿಯ ಅದ್ಯಕ್ಷ ತೀತಿರ ಧರ್ಮಜ ಉತ್ತಪ್ಪ,À ಕುಶಾಲನಗರ ತಾಲೂಕು ಗ್ಯಾರಂಟಿ ಅನುμÁ್ಠನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಿ.ಪಂ. ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಸೋಮವಾರಪೇಟೆ ತಹಶೀಲ್ಧಾರ್ ಕೃಷ್ಣಮೂರ್ತಿ, ವಲಯ ಸಂರಕ್ಷಣಾಧಿಕಾರಿ ರಕ್ಷಿತ್, ಮಡಿಕೇರಿ ವಲಯ ಸಂರಕ್ಷಣಾಧಿಕಾರಿ ಶಿವಕುಮಾರ್, ಸಹಾಯಕ ವಲಯ ಸಂರಕ್ಷಣಾಧಿಕಾರಿ ಮಧುಕುಮಾರ್, ಕೆದಕಲ್ ಗ್ರಾ.ಪಂ. ಆಡಳಿತಾಧಿಕಾರಿ ಹರೀಶ್, ಕಾರ್ಯದರ್ಶಿ ಮೋಹನ್, ಸುಂಟಿಕೊಪ್ಪ ಚೆಸ್ಕಾಂ ಅಭಿಯಂತರ ಲವ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸಂಜು ಪೆÇನ್ನಪ್ಪ, ಮಾಜಿ ಸದಸ್ಯರುಗಳಾದ ದೇವಿ ಪ್ರಸಾದ್,ಶಿವಶಂಕರ್, ಬಾಲಕೃಷ್ಣ ರೈ, ಚೆಪ್ಪುಡಿರ ಸತೀಶ್, ಯಂಕನ ಗೋಪಿನಾಥ್ ಮತ್ತಿತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗು : ಆದಿವಾಸಿಗಳು ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ಎಚ್ಚರವಹಿಸಿ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ*

ಜುಲೈ 15, 2026

*ಎಸ್.ಜಾನಕಿಯವರಿಗೆ ‘ಸಮರ್ಥ ಕನ್ನಡಿಗರು’ ಕೊಡಗು ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ*

ಜುಲೈ 15, 2026

*ಬರಪೊಳೆಯಲ್ಲಿ ಪತ್ರಕರ್ತರ ಸಾಹಸಮಯ ಜಲಕ್ರೀಡೆ*

ಜುಲೈ 15, 2026

*ಎಸ್.ಜಾನಕಿಯವರಿಗೆ ‘ಸಮರ್ಥ ಕನ್ನಡಿಗರು’ ಕೊಡಗು ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ*

ಜುಲೈ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

​ ಮಡಿಕೇರಿ ಜು.15 NEWS DESK : ಇತ್ತೀಚೆಗೆ ನಿಧನರಾದ ಭಾರತೀಯ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ, ಸಂಗೀತ ವಿಶಾರದೆ…

*ಬರಪೊಳೆಯಲ್ಲಿ ಪತ್ರಕರ್ತರ ಸಾಹಸಮಯ ಜಲಕ್ರೀಡೆ*

ಜುಲೈ 15, 2026

*ಬಿಳಿಗೇರಿಯಲ್ಲಿ ಜು.18 ಮತ್ತು 19 ರಂದು ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ : ನೋಂದಣಿಗೆ ಜು.17 ಕೊನೆಯ ದಿನ*

ಜುಲೈ 15, 2026

*ಚಂದನಕೇರೆ ಹಾಡಿ ರಸ್ತೆ ಕಾಮಗಾರಿಗೆ ಚಾಲನೆ*

ಜುಲೈ 15, 2026

*ಮಾನವ ವನ್ಯಜೀವಿಗಳ ಸಂಘರ್ಷ : ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರೊಂದಿಗೆ ಶಾಸಕ ಡಾ.ಮಂತರ್ ಗೌಡ ಸಭೆ*

ಜುಲೈ 15, 2026

*ಎಸ್.ವಡ್ಡಳ್ಳಿ ಗ್ರಾಮದಲ್ಲಿ ಕ್ಷೇತ್ರೋತ್ಸವ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ*

ಜುಲೈ 15, 2026

*ಬಿ.ಕೆ.ಹರಿಪ್ರಸಾದ್ ರನ್ನು ಭೇಟಿಯಾದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಕುರಿತು ಚರ್ಚೆ*

ಜುಲೈ 15, 2026

*ಜ್ಞಾನ ವಿಜ್ಞಾನ ಸಮಿತಿಯ ಕೊಡಗು ಜಿಲ್ಲಾ ಕಾರ್ಯದರ್ಶಿ ಕುಮಾರ್ ಎನ್.ಎಸ್ ಗೆ ಸನ್ಮಾನ*

ಜುಲೈ 15, 2026

*ಸೆಫ್ಟಿಕ್ ಟ್ಯಾಂಕಿಗೆ ಬಿದ್ದ ಮರಿ ಆನೆ : ತಾಯಾನೆಯಿಂದ ರಕ್ಷಣೆ*

ಜುಲೈ 15, 2026

*ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ಸಮಿತಿಗೆ ಸುವರ್ಣ ಸಂಭ್ರಮ : ಅಧ್ಯಕ್ಷರಾಗಿ ಶರಣ್ ಪೂಣಚ್ಚ ಆಯ್ಕೆ : ಆಚರಣಾ ಸಮಿತಿಗೆ ಪದಾಧಿಕಾರಿಗಳ ನೇಮಕ*

ಜುಲೈ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.