Advertisement
12:43 AM Thursday 7-December 2023

ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ

07/02/2023

ಮಡಿಕೇರಿ ಫೆ.7 :  ಶನಿವಾರಸಂತೆ ರೋಟರಿ ಕ್ಲಬ್  ವತಿಯಿಂದ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ  ವ್ಯಕ್ತಿಗಳಿಗೆ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜೋನ್ 6 ರ ಗವರ್ನರ್  ಮೇಜರ್ ಡೋನರ್ ಪ್ರಕಾಶ್ ಕಾರಂತ್  ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ  ಸ್ವಾಮಿ ವಿವೇಕಾನಂದ ಯೂಥ್ ಮೊಮೆಂಟ್ ಸೋಮವಾರಪೇಟೆ ಕಾರ್ಯಕರ್ತೆ  ಸುನಿತಾ, ಶನಿವಾರ ಸಂತೆಯ ಹಿಂದೂ ರುದ್ರ ಭೂಮಿಯ ಲಿಂಗಪ್ಪ, ಸಮಾಜ ಸೇವಕ ಗೌಡಳ್ಳಿಯ ಗಣೇಶ್ , ಸಮುದಾಯ ಆರೋಗ್ಯ ಕೇಂದ್ರ ಶನಿವಾರ ಸಂತೆಯ ನೌಕರ  ಸತ್ಯನಾರಾಯಣ ಮತ್ತು ಶನಿವಾರ ಸಂತೆ ಗ್ರಾ.ಪಂ ತ್ಯಾಜ್ಯ ವಿಲೇವಾರಿ ವಾಹನದ ಚಾಲಕ  ನಾಗೇಶ್  ಅವರಿಗೆ  ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ರೋಟರಿ ಕ್ಲಬ್ ನ ಅಧ್ಯಕ್ಷ  ರೊಟೇರಿಯನ್ ಕೆ.ಪಿ. ಜಯಕುಮಾರ್  ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ರೋಟರಿ ಕ್ಲಬ್ ನ ಅಸಿಸ್ಟೆಂಟ್ ಗವರ್ನರ್ ಮೇಜರ್ ಡೋನರ್ ಸತೀಶ್ ಕುಮಾರ್, ವಲಯ ಸೇನಾನಿ ಹೆಚ್.ವಿ. ದಿವಾಕರ್ , ರೊಟೇರಿಯನ್ ಚಂದ್ರಕಾಂತ್ , ವಲಯ ಸೇನಾನಿ ದಿವಾಕರ್, ಚಂದ್ರಕಾಂತ್, ಸಹಾಯಕ ಗೌರ್ನರ್ ಸತೀಶ್ ಹಾಗೂ  ಎಲ್ಲಾ ರೋಟೇರಿಯನ್ ಗಳು ಮತ್ತು ಅವರ ಕುಟುಂಬ ವರ್ಗದವರು, ವಿವಿಧ ಕ್ಲಬ್ ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.

ವರದಿ :  ದಿನೇಶ್ ಮಾಲಂಬಿ (ಶನಿವಾರಸಂತೆ)