Advertisement
3:45 AM Friday 8-December 2023

16ನೇ ಕನ್ನಡ ಸಾಹಿತ್ಯ ಸಮ್ಮೇಳನ : ಕವನಗಳ ಆಹ್ವಾನ

07/02/2023

ಗೋಣಿಕೊಪ್ಪಲು ಫೆ 7 :  16ನೇ ಯ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗೋಣಿಕೊಪ್ಪಲಿನಲ್ಲಿ ಮಾ.4 ಮತ್ತು 5 ರಂದು ನಡೆಯಲಿದೆ.
ಆ ಸಂದರ್ಭದಲ್ಲಿ ಜಿಲ್ಲೆಯ ಯುವಕವಿಗಳಿಗೆ ಕವಿಗೋಷ್ಠಿಯಲ್ಲಿ ತಮ್ಮ ಕವನ ಪ್ರಸ್ತುತಪಡಿಸಲು ಅವಕಾಶವಿರುತ್ತದೆ. ಆಸಕ್ತರು ಈ ಕೆಳಗೆ ಸೂಚಿಸಿದ ದೂರವಾಣಿ ಸಂಖ್ಯೆಗೆ ದಿನಾಂಕ 12.02.2023ರ ಒಳಗಾಗಿ ತಮ್ಮ ಕವನವನ್ನು ವಾಟ್ಸಪ್ ಮೂಲಕ ಕಳುಹಿಸಿಕೊಡುತಕ್ಕದ್ದು. ಅಥವಾ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳಿಸತಕ್ಕದ್ದು,
ಸ್ವಾಗತ ಸಮಿತಿ, 16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕಾಮತ್ ನವಮಿ ಸಭಾಂಗಣ,
ಗೋಣಿಕೊಪ್ಪಲು-571213
ವಾಟ್ಸಾಪ್ ಮೂಲಕ ಕಳಿಸಬೇಕಾದ ದೂರವಾಣಿ ಸಂಖ್ಯೆ ಶೀಲಾ ಬೋಪಣ್ಣ 9945794414,  ಟಿ.ಕೆ. ವಾಮನ 7619270529 ಎಂದು ಸ್ವಾಗತ ಸಮಿತಿಯ ಮಹಾ ಪ್ರದಾನ ಕಾರ್ಯದರ್ಶಿ ಕೋಳೆರ ದಯಾ ಚಂಗಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.