ಸಿರಾಜ್ ಫ್ರೆಂಡ್ಸ್ ತಂಡಕ್ಕೆ ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಕಪ್ : ಹಾಟ್ ರೋಡ್ಸ್ ತಂಡಕ್ಕೆ ರನ್ನರ್ಸ್
07/02/2023

ನಾಪೋಕ್ಲು ಫೆ.7 : ಸ್ಥಳೀಯ ಕಲ್ಲುಮೊಟ್ಟೆ ಕೆ.ಎಂ.ಸಿ.ಸಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ 5ನೇ ವರ್ಷದ ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿರಾಜ್ ಫ್ರೆಂಡ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಚೆರಿಯಪರಂಬು ಜನರಲ್ ಕೆ. ಎಸ್ ತಿಮ್ಮಯ್ಯ ಕ್ರೀಡಾಂಗಣರದಲ್ಲಿ ನಡೆದ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ರಾಝಿಕ್ ನಾಯಕತ್ವದ ಹಾಟ್ ರೋಡ್ಸ್ ತಂಡವನ್ನು ಮಣಿಸಿ, ಪರವಂಡ ಸಿರಾಜ್ ನಾಯಕತ್ವದ ಸಿರಾಜ್ ಫ್ರೆಂಡ್ಸ್ ತಂಡ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಹಾಟ್ ರೋಡ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕಳೆದ ಎರಡು ದಿನಗಳಿಂದ ನಡೆದ ಪಂದ್ಯಾವಳಿಯಲ್ಲಿ ಸುಮಾರು 6 ತಂಡಗಳು ಪಾಲ್ಗೊಂಡಿದ್ದವು.
ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ಹಾಟ್ ರೋಡ್ಸ್ ತಂಡದ ಉದಯ ಪಡೆದುಕೊಂಡರು.ಉತ್ತಮ ಆಲ್-ರೌಂಡರ್ ಪ್ರಶಸ್ತಿಯನ್ನು ಸಿರಾಜ್ ಫ್ರೆಂಡ್ಸ್ ತಂಡದ ಉಬೈದ್ ಪಡೆದರು. ಉತ್ತಮ ಬೌಲರ್ ಪ್ರಶಸ್ತಿಯನ್ನು ಹಾಟ್ ರೋಡ್ಸ್ ತಂಡದ ಸಿದ್ದೀಕ್ ಆಯ್ಕೆಯಾದರು ,ಉದಯೋನ್ಮುಖ ಆಟಗಾರನಾಗಿ ಸಿರಾಜ್ ಫ್ರೆಂಡ್ಸ್ ತಂಡದ ಸಾದಿಕ್, ಹಿರಿಯ ಆಟಗಾರ ಪ್ರಶಸ್ತಿಯನ್ನು ಸಿರಾಜ್ ಫ್ರೆಂಡ್ಸ್ ತಂಡದ ಅನೀಫ್ ಪಡೆದರು.ಯುವ ಆಟಗಾರ ಪ್ರಶಸ್ತಿಗೆ ಸಿರಾಜ್ ಫ್ರೆಂಡ್ಸ್ ತಂಡದ ಫಾಝಿಲ್,ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಸಿರಾಜ್ ಫ್ರೆಂಡ್ಸ್ ತಂಡದ ಅಲ್ತಾಫ್ ಪಡೆದುಕೊಂಡರೆ, ಸರಣಿ ಪುರುಷೋತ್ತಮ ಪ್ರಶಸ್ತಿಗೆ ಸಿರಾಜ್ ಫ್ರೆಂಡ್ಸ್ ತಂಡದ ಅಫೀಲ್ ಭಾಜನರಾದರು.
ಪಂದ್ಯಾವಳಿಯ ತೀರ್ಪುಗಾರರಾಗಿ ಶಮೀರ್,ಇರ್ಷಾದ್,ಸೌಕತ್ ಹಾಗೂ ರಮೀಝ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಊರಿನ ಹಿರಿಯ ವ್ಯಕ್ತಿಗಳನ್ನು ಹಾಗೂ ಸಮಾಜಸೇವಕರನ್ನು ಕೆಎಂಸಿಸಿ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಪ್ರಮುಖರಾದ ಪುಲಿಯಂಡ ಮೊಯ್ದು, ಮಿರ್ಷಾದ್, ರಜಾಕ್, ಅಬ್ಬಾಸ್ ನಾಪೋಕ್ಲು, ಇಬ್ರಾಹಿಂ, ದಾನಿಗಳಾದ ರಶೀದ್ ಟೋಮಿ, ಆಬಿದ್, ಬಶೀರ್, ಮನ್ಸೂರ್, ಪಂದ್ಯಾವಳಿಯ ಆಯೋಜಕರಾದ ಅನೀಶ್, ಯಶವಂತ್, ಝುಬೈರ್, ಆಸಿಫ್, ಕೆಎಂಸಿಸಿ ಕ್ಲಬ್ ನ ಪದಾಧಿಕಾರಿಗಳು, ಪಂದ್ಯಾವಳಿಯಲ್ಲಿ ಪಾಲ್ಗೊಂಡ ತಂಡಗಳ ನಾಯಕರುಗಳು ಸದಸ್ಯರು ಮತ್ತಿತರರು ಹಾಜರಿದ್ದರು. ((ವರದಿ : ಝಕರಿಯ ನಾಪೋಕ್ಲು ))























