Advertisement
12:08 PM Monday 4-December 2023

ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ವಿ.ಎಂ.ಶರೀಫ್ ಆಯ್ಕೆ

09/02/2023

ಸುಂಟಿಕೊಪ್ಪ ಫೆ.9 : ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ವಿ.ಎಂ.ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ಸಚಿನ್, ನೇಮಕಗೊಂಡಿದ್ದಾರೆ.

ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ವಿ.ಎಂ.ಮನು, ಜಿ.ಎಸ್.ಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ಸಚಿನ್, ಖಜಾಂಚಿಯಾಗಿ ಯು.ಹರೀಶ್ ಚುನಾವಣೆಯ ಮೂಲಕ ಜಯಗಳಿಸಿದರು. ಸಹ ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ, ಸಹ ಖಜಾಂಚಿ ಕಲಂದರ್, ಗೌರವಾಧ್ಯಕ್ಷರುಗಳಾಗಿ ವಿನ್ಸಿ ಡಿಸೋಜ, ವಿಶ್ವನಾಥ್, ಹಸೈನರ್, ಸಂಘಟನಾ ಕಾರ್ಯದರ್ಶಿಗಳಾಗಿ ಸಂಶುದ್ಧೀನ್, ವಿಜೇಶ್, ನೌಶಾದ್, ಬಿ.ಕೆ.ರಂಜಿತ್, ಹೆಚ್.ಎಂ.ಅಶ್ರಫ್, ಸೆಲ್ವಿಸ್ಟರ್ ಡಿಸೋಜ, ಶರತ್, ಪ್ರಕಾಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.