Advertisement
3:52 AM Saturday 2-December 2023

ವಿರಾಜಪೇಟೆ : ತಾಲ್ಲೂಕು ಮಟ್ಟದ ರಾಷ್ಟ್ರೀಯ ವಿಜ್ಞಾನ ಮತ್ತು ಗಣಿತ ದಿನಾಚರಣೆ 

09/02/2023

ಮಡಿಕೇರಿ ಫೆ.9 :  ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ವಿರಾಜಪೇಟೆ ತಾಲ್ಲೂಕು ಮಟ್ಟದ ರಾಷ್ಟ್ರೀಯ ವಿಜ್ಞಾನ ಮತ್ತು ಗಣಿತ ದಿನಾಚರಣೆಯು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢ ಶಾಲಾ ವಿಭಾಗ ದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ವಿರಾಜಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ  ಶೈಲ ಬೀಳಗಿ,  ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಖಜಾಂಚಿ  ಡಾ. ಕೆ.ಎನ್. ಚಂದ್ರಶೇಖರ್ , ಯಾವುದನ್ನು ಪರಿಶೀಲಿಸದೆ ಒಪ್ಪಿಕೊಳ್ಳಬಾರದು. ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ಕಲಿಕೆಯಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಆಗಲು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವಿರಾಜಪೇಟೆ ತಾಲ್ಲೂಕಿನ 17 ಶಾಲೆಗಳಿಂದ 122 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.  ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮತ್ತು ಗಣಿತ ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ಮಾದರಿ ತಯಾರಿಕ ಸ್ಪರ್ಧೆ, ವಿಜ್ಞಾನ ಮತ್ತು ಗಣಿತ ರಂಗೋಲಿ ಸ್ಪರ್ಧೆ ಹಾಗೂ ಮೈನಸ್ ಇಂಟು ಮೈನಸ್ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ವಿಜೇತರು ::  ಗಣಿತ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆ.ಪಿ.ಎಸ್. ಪೊನ್ನಂಪೇಟೆ ಶಾಲೆಯ ತೇಜಸ್ವಿ ಭಟ್, ಶ್ರಾವ್ಯ ತಂಡ ಪ್ರಥಮ ಸ್ಥಾನ ಗಳಿಸಿತು.  ವಿರಾಜಪೇಟೆ ಜೂನಿಯರ್ ಕಾಲೇಜು ಪುಷ್ಕಲ್‌ಕುಮಾರ್, ರೂಪ ತಂಡ ದ್ವಿತೀಯ ಸ್ಥಾನ ಗಳಿಸಿತು.

ವಿಜ್ಞಾನ ಮಾದರಿ ತಯಾರಿಕ ಸ್ಪರ್ಧೆಯಲ್ಲಿ ಜಿಷ್ಣು ಕುಮಾರ್, ಪ್ರವೀಣ್ ಕುಮಾರ್ ಕೆಪಿಎಸ್ ಪೊನ್ನಂಪೇಟೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು.  ಚಿತ್ರ ಮತ್ತು ಅಕ್ಷರ ಸರ್ಕಾರಿ ಪ್ರೌಢಶಾಲೆ ಚೆನ್ನನಕೋಟೆ ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸರ್ಕಾರಿ ಪ್ರೌಢಶಾಲೆ ಬಿಳಗುಂದ ವಿದ್ಯಾರ್ಥಿಗಳಾದ ರೈಯನ, ಸಲಿಮ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಅಲ್ಪ ಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಜಯ್ ಮತ್ತು ಶಶಾಂಕ್ ಗಳಿಸಿಕೊಂಡರು.

ಮೈನಸ್ ಇಂಟು ಮೈನಸ್ ಸ್ಪರ್ಧೆಯಲ್ಲಿ ಮದೀಹ ಎಮ್‌ಸಿಎಸ್ ಪ್ರೌಢಶಾಲೆ ಪೊನ್ನಪ್ಪಸಂತೆ ಮತ್ತು ಸೋಫಾ ಫಾತಿಮ ಬಿ ಸಿ ಪ್ರೌಢ ಶಾಲೆ ದೇವಣಗಿರಿ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಅರುಣ ಹೆಚ್ ಜೆ, ಬಿ ಸಿ ಪ್ರೌಢಶಾಲೆ ದೇವಣಗಿರಿ ಮತ್ತು ನಾಗರಾಜು ವಿಜಯಲಕ್ಷ್ಮಿ ಪ್ರೌಢಶಾಲೆ ಬಾಳೆಲೆ ಗಳಿಸಿಕೊಂಡರು.

ಕಾರ್ಯಕ್ರಮದಲ್ಲಿ  ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳಾದ  ವನಜಾಕ್ಷಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ವ್ಯಕ್ತಿ  ಪುಷ್ಪ, ಕೆಪಿಎಸ್ ಪ್ರೌಢ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಷರೀಮ್ ಕೊಡವ, ಕೆಪಿಎಸ್ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ಎಮ್.ಯು.ಚೆಂಗಪ್ಪ ಮತ್ತು ವಿದ್ಯಾರ್ಥಿ ಪ್ರತಿನಿಧಿ ಬಬಿತ ಅಮೃತ,   ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಶಿಕ್ಷಣ ವಿಭಾಗದ ಯೋಜನಾ ನಿರ್ದೇಶಕರಾದ ಅವಿತ್, ಆನಂದ, ರಾಜು, ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಮತ್ತು ಶಾಲಾ ಶಿಕ್ಷಣ ಸುಗಮಕಾರರಾದ ಪಿ.ಎನ್. ಶ್ರೀನಿವಾಸ  ಮತ್ತು  ಇತರೆ ಸಿಬ್ಬಂದಿ ವರ್ಗದವರು  ಹಾಜರಿದ್ದರು.