Advertisement
5:00 AM Friday 8-December 2023

ಅಭ್ಯತ್ ಮಂಗಲ : ಮುಖ್ಯ ರಸ್ತೆ ಬದಿ ಕಸ ಹಾಕಿದವರಿಗೆ ರೂ.10 ಸಾವಿರ ದಂಡ ವಿಧಿಸಿದ ಗ್ರಾ.ಪಂ

09/02/2023

ಕುಶಾಲನಗರ ಫೆ.9 : ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ  ವ್ಯಾಪ್ತಿಯ ಅಭ್ಯತ್ ಮಂಗಲ ವಾರ್ಡ್ ಗೆ ಸೇರಿದ ಮುಖ್ಯ ರಸ್ತೆಯ ಪಕ್ಕದಲ್ಲಿ ಅನಧಿಕೃತವಾಗಿ ಕಸ ಸುರಿದವರಿಗೆ ಗ್ರಾ.ಪಂ ಯಿಂದ ರೂ.10 ಸಾವಿರ ದಂಡ ವಿಧಿಸಲಾಯಿತು.

ಕಸದ ರಾಶಿಯ ಬಗ್ಗೆ ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಜನಪ್ರತಿನಿಧಿಗಳು ಮತ್ತು ಗ್ರಾ.ಪಂ ಸಿಬ್ಬಂದಿ ಹಾಗೂ ನೌಕರರೊಡನೆ ಕಾರ್ಯಾಚರಣೆ ನಡೆಸಿ ಕಸದಲ್ಲಿ ದೊರೆತ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಸಂಬಂಧಪಟ್ಟವರಿಗೆ ದಂಡವನ್ನು ವಿಧಿಸಲಾಯಿತು.